ಬಹುದಿನದ ಆಸೆ ನೆರವೇರಿದೆ : ಶಿವಾನಂದ ಪಾಟೀಲ್

ವಿಜಯಪುರ: 

     ನನ್ನ ಬಹುದಿನದ ಆಸೆ ಮಂತ್ರಿ ಆಗಬೇಕು ಅಂತ, ಅದು ನೆರವೇರಿದೆ. ನಾನು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೊ ಎಂಬುದು ಗೊತ್ತಿಲ್ಲ. ಹೈಕಮಾಂಡ್ ರಾಜೀನಾಮೆ ಕೊಡಿ ಅಂದ್ರೆ ನಾಳೆನೇ ಕೊಡುತ್ತೀನಿ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ನುಡಿದರು.

      ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಇರುವಷ್ಟರಲ್ಲಿ ಏನು ಜನಸೇವೆ ಮಾಡುತ್ತೇವೆ ಅದು ಮುಖ್ಯ ಎಂದಿದ್ದಾರೆ. ಅಲ್ಲದೆ ನಾನು ಆಪರೇಷನ್ ಕಮಲದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಮ್ಮ ಸರ್ಕಾರ ಐದು ವರ್ಷ ಆಡಳಿತ ನಡೆಸುತ್ತೆ. ಮಾಧ್ಯಮಗಳಲ್ಲಿ ಸರ್ಕಾರ ಬಿಳುತ್ತೆ ಅಂತ ಹೇಳುತ್ತಿದ್ದಾರೆ. ಆದರೆ ನಮ್ಮ ಸರ್ಕಾರದಲ್ಲಿ ಭಿನ್ನಮತ ಇಲ್ಲ ಆದ್ದರಿಂದ ಯಾವುದೇ ತೊಂದರೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

      ನನ್ನ ಇಲಾಖೆಯಲ್ಲಿ ಕೆಲಸ ಮಾಡುವುದಷ್ಟೇ ನನ್ನ ಆದ್ಯತೆ. ಒಟ್ಟು ಇಲ್ಲಿವರೆಗೆ 1,600 ಎಎನ್‍ಎಮ್ ಗಳ ನೇಮಕಾತಿ ಆಗಿದೆ. 200 ತಜ್ಞ ವೈದ್ಯರನ್ನು ಹಾಗೂ 300 ಎಂ ಬಿ ಬಿ ಎಸ್ ವೈದ್ಯರ ನೇಮಕಾತಿ ಆಗಿದೆ. 350 ಅಂಬುಲೆನ್ಸ್ ಗಳು ಸಿದ್ಧವಾಗಿದ್ದು, ಇಷ್ಟರಲ್ಲೇ ರಸ್ತೆಗೆ ಇಳಿದು ಸೇವೆ ಸಲ್ಲಿಸಲಿವೆ. ನನ್ನ ಇಲಾಖೆಯಲ್ಲಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ರಾಜ್ಯದಲ್ಲಿ ಅರ್ಧಕ್ಕೆ ನಿಂತಿದ್ದ 50 ಆಸ್ಪತ್ರೆ ಕಟ್ಟಡಗಳನ್ನು ಪೂರ್ತಿಗೊಳಿಸಲಾಗಿದೆ ಎಂದರು.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link