ಶಿವಸೇನಾ ಕಾರ್ಪೊರೇಟರ್‌ ಹತ್ಯೆ

ಪರಭಣಿ

         ಇಲ್ಲಿನ ಜಯಕವಾಡಿ ಪಾಲಿಕೆಯ ಸದಸ್ಯ ಅಮರ್‌ದೀಪ್‌ ರೋಡೆ ಅವರನ್ನು ಭಾನುವಾರ ದುಷ್ಕರ್ಮಿಗಳಿಬ್ಬರು ಕೊಲೆಗೈದಿದ್ದಾರೆ.

        ಕೊಲೆ ಬಳಿಕ ಆರೋಪಿಗಳಾದ ಕಿರಣ್‌ ಡಾಕೆ ಮತ್ತು ರವಿ ಗಾಯಕ್‌ವಾಡ್‌ ಮೋಂಡಾ ಪೊಲೀಸ್‌ ಠಾಣೆಗೆ ಶರಣಾಗಿದ್ದಾರೆ.ಭಾನುವಾರ ಕುಡಿಯುವ ನೀರಿನ ವಿಷಯದಲ್ಲಿ ಜಗಳವಾಗಿದೆ. ಆಗ ಸ್ಥಳೀಯರು ಆ ಭಾಗದ ಪಾಲಿಕೆ ಸದಸ್ಯ ರೋಡೆಗೆ ಸ್ಥಳಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.

        ಈ ವೇಳೆ ಜಗಳ ಉಲ್ಬಣಗೊಂಡಿದ್ದು, ರೋಡೆ ಆರೋಪಿಗಳಿಬ್ಬರ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಇಬ್ಬರು ರೋಡೆ ಅವರನ್ನು ತಳ್ಳಿ, ಅವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link