ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

ಚಿತ್ರದುರ್ಗ:

   ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜದ ಕಚೇರಿ ಉದ್ಘಾಟನೆ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ರೋಟರಿ ಬಾಲಭವನದ ಪಕ್ಕ ಟೌನ್ ಕ್ಲಬ್ ಸಂಕೀರ್ಣದ ಮೊದಲನೆ ಮಹಡಿ ಕಟ್ಟಡದಲ್ಲಿ ಶುಕ್ರವಾರ ನಡೆಯಿತು.

   ಜಿಲ್ಲಾ ವೀರಶೈವ ಲಿಂಗಾಯಿತ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಉಪಾಧ್ಯಕ್ಷ ಎನ್.ಬಿ.ವಿಶ್ವನಾಥ್ ಮಾತನಾಡಿ ಸಣ್ಣಪುಟ್ಟ ಸಮುದಾಯಗಳು ಎಷ್ಟೋ ಬಲಿಷ್ಟವಾಗಿವೆ. ರಾಜ್ಯದಲ್ಲಿ 44 ಲಕ್ಷದಷ್ಟಿರುವ ನಮ್ಮ ಸಮಾಜ ಇನ್ನು ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸದೃಢವಾಗಿಲ್ಲ. ನಮ್ಮ ಸಮಾಜವನ್ನು ಬಲಿಷ್ಟವಾಗಿ ಕಟ್ಟಿ ಬೆಳೆಸಬೇಕಾದರೆ ಎಲ್ಲರ ಜೊತೆ ಚರ್ಚಿಸಬೇಕಾಗಿದೆ. ಅಡಾಕ್ ಕಮಿಟಿ ರಚಿಸಲಾಗಿದೆ. ನಮ್ಮ ಸಮಾಜಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಶಕ್ತಿ ತುಂಬುವಂತೆ ಮನವಿ ಮಾಡಿದರು.

   ರಾಜ್ಯ, ರಾಷ್ಟ್ರಮಟ್ಟದಲ್ಲಿ ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಸಮಾಜವನ್ನು ಸಂಘಟಿಸಬೇಕಾಗಿರುವುರಿಂದ ಜಿಲ್ಲೆಯ ಎಲ್ಲಾ ತಾಲೂಕಿನವರು ಚಿತ್ರದುರ್ಗದಲ್ಲಿ ಸದಸ್ಯರಾಗಿ ಹೆಸರು ನೊಂದಾಯಿಸಿಕೊಳ್ಳಿ. ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಮಾಡುವ ಉದ್ದೇಶವಿದೆ. ಇದರಿಂದ ನಮ್ಮ ಸಮಾಜಕ್ಕೆ ಅನುಕೂಲವಾಗುತ್ತದೆ. ಸಮಾಜಮುಖಿಯಾಗಿ ಕೆಲಸ ಮಾಡೋಣ ಇದಕ್ಕೆ ನಮ್ಮ ಸಮಾಜದ ಎಲ್ಲರೂ ಕೈಜೋಡಿಸಿ ಎಂದು ವಿನಂತಿಸಿದ ಎನ್.ಬಿ.ವಿಶ್ವನಾಥ್ ಮಾಜಿ ಸಚಿವ ಹೆಚ್.ಏಕಾಂತಯ್ಯನವರು ನಮ್ಮ ಸಮಾಜದವರೆ.

    ಆದರೆ ಒಂದು ಸಮಾಜದಲ್ಲಿ ಗುರುತಿಸಿಕೊಳ್ಳುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ಅವರು ಮುಂಚೂಣಿಯಲ್ಲಿ ಬರಲಿಲ್ಲ. ರಾಷ್ಟ್ರನಾಯಕ ದಿವಂಗತ ಎಸ್.ನಿಜಲಿಂಗಪ್ಪನವರು ಪ್ರಾಮಾಣಿಕ ರಾಜಕಾರಣಿಯಾಗಿದ್ದರು ಎಂದು ಈ ಸಂದರ್ಭದಲ್ಲಿ ಇಬ್ಬರನ್ನು ನೆನಪಿಸಿಕೊಂಡರು.
ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಜಯಂತಿ ಕುರಿತು ಉಪನ್ಯಾಸ ನೀಡಿದ ಸಾಹಿತಿ ಹುರುಳಿ ಬಸವರಾಜ್ ಸಾಧ್ವಿ ಶಿರೋಮಣಿಯಾಗಿದ್ದ ಹೇಮರಡ್ಡಿ ಮಲ್ಲಮ್ಮ ತನ್ನ ಹದಿನಾರನೇ ವಯಸ್ಸಿನಲ್ಲಿಯೇ ಭರಮಣ್ಣನನ್ನು ವಿವಾಹವಾಗಿ ಗಂಡನ ಮನೆಯಲ್ಲಿ ಅತ್ತೆ ನಾದಿನಿಯರಿಂದ ಸಾಕಷ್ಟು ಕಿರುಕುಳ ಅನುಭವಿಸಿ ಎಲ್ಲವನ್ನು ಮೆಟ್ಟಿ ನಿಂತಳು ಎಂದು ಗುಣಗಾನ ಮಾಡಿದರು.

     ಪುಣ್ಯಕ್ಷೇತ್ರ ಶ್ರೀಶೈಲದ ಸನಿಹದಲ್ಲಿ ಜನಿಸಿದ ಹೇಮರಡ್ಡಿ ಮಲ್ಲಮ್ಮಳ ಜೀವನದಲ್ಲಿ ಘಟಿಸಿದ ಸಾಕಷ್ಟು ಪವಾಡಗಳನ್ನು ಸಮಾಜದವರು ಮೊದಲು ತಿಳಿದುಕೊಳ್ಳಬೇಕು. ಕಿತ್ತೂರು ರಾಣಿಚೆನ್ನಮ್ಮ, ನೀಲಾಂಭಿಕೆ, ಮುಕ್ತಾಂಭಿಕೆ, ಕಾಳವ್ವ, ಸುಂಕವ್ವ ಇವರಿಗೆ ಜನ್ಮ ಕೊಟ್ಟ ನಾಡು ನಮ್ಮದು. ಈಗಿನ ಮಾನವನ ಬದುಕು ಕ್ಷಣ ಕ್ಷಣಕ್ಕೂ ಹಣ, ಅಧಿಕಾರ, ಅಂತಸ್ತು, ಐಶ್ವರ್ಯಕ್ಕೆ ಬಡಿದಾಡುತ್ತಿದೆ. ಆದರೆ ರಾಜಮನೆತನದ ಒಡತಿಯಾಗಿರಬೇಕಾದ ಹೇಮರಡ್ಡಿ ಮಲ್ಲಮ್ಮ ಬಾಲ್ಯದಲ್ಲಿಯೇ ವಿವಾಹವಾಗಿ ಅತ್ತೆ ನಾದಿಯರ ಹಾಗೂ ನೆರೆಹೊರೆಯವರು ಕೊಡುತ್ತಿದ್ದ ಕಿರುಕುಳ ಹಾಗೂ ಕಷ್ಟವನ್ನು ಎದುರಿಸಬೇಕಾಯಿತು.

    ಪತಿಯೆ ದೇವರು ಎಂದು ತಿಳಿದುಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಬದುಕು ಅತ್ಯಂತ ಕಠಿಣವಾಗಿತ್ತು. ಶ್ರೀಶೈಲ ಮಲ್ಲಿಕಾರ್ಜುನನ್ನು ಆರಾಧಿಸಿ ಪೂಜೆ ಮಾಡಿ ಸಾಕ್ಷಾತ್ಕರಿಸಿಕೊಂಡು ತನಗೆ ಕಾಟ ಕೊಟ್ಟವರಿಗೂ ಒಳ್ಳೆಯದನ್ನು ಬಯಸಿದ ಸಾಧ್ವಿ ಶಿರೋಮಣಿ ಎಂದು ಹೇಳಿದರು.

    ಬಾಲ್ಯದಲ್ಲಿಯೇ ಶಿವನ ಧ್ಯಾನ, ಶಿವಪೂಜೆ, ತುಂತಾಟ ಮಾಡಿಕೊಂಡಿರುತ್ತಿದ್ದ ಹೇಮರಡ್ಡಿ ಮಲ್ಲಮ್ಮಳಿಗೆ ಅವರ ತಂದೆ ನೀರೆರೆದು ಪುಷ್ಟಿ ನೀಡಿದರು.

    ಅತ್ತೆ, ನಾದಿನಿ ಸೇರಿಕೊಂಡು ಗುಡ್ಡದ ಬಳಿಯಿರುವ ಗುಡಿಸಲಿನಲ್ಲಿ ಹೇಮರಡ್ಡಿ ಮಲ್ಲಮ್ಮಳನ್ನು ಇರಿಸಿ ದನ ಮೇಯಿಸಿಕೊಂಡು ಸೌದೆ ತರುವಂತ ಕಷ್ಟ ನೀಡುತ್ತಾರೆ. ಇದ್ಯಾವುದಕ್ಕೂ ಹೆದರದೆ ಕಷ್ಟ ಕಾರ್ಪಣ್ಯಗಳನ್ನು ಮಂಜಿನಂತೆ ಕರಗಿಸಿಕೊಳ್ಳುತ್ತಿದ್ದ ಹೇಮರಡ್ಡಿ ಮಲ್ಲಮ್ಮಳ ಜೀವನದಲ್ಲಿ ಅನೇಕ ಪವಾಡಗಳು ನಡೆದಿರುವುದುಂಟು ಎಂದು ಸ್ಮರಿಸಿದರು.ಶರಣಗೌಡ ಎರಡೆತ್ತಿನರವರು ಹೇಮರಡ್ಡಿ ಮಲ್ಲಮ್ಮ ಜಯಂತಿ ಕುರಿತು ಉಪನ್ಯಾಸ ನೀಡಿದರು.

     ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಜಿ.ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರವೀಂದ್ರ, ಖಜಾಂಚಿ ಎ.ವಿಜಯಕುಮಾರ್, ಸಮಾಜದ ಮುಖಂಡರುಗಳಾದ ಜಿ.ಪಂ.ಮಾಜಿ ಸದಸ್ಯ ಹೆಚ್.ಟಿ.ನಾಗಿರೆಡ್ಡಿ, ನ್ಯಾಯವಾದಿ ನೀತಜ ವೇದಿಕೆಯಲ್ಲಿದ್ದರು.

   ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ನಿರ್ದೇಶಕಿ ಆರತಿ ಮಹಡಿ ಶಿವಮೂರ್ತಿ ಪ್ರಾರ್ಥಿಸಿದರು. ಸತೀಶ್ ಸ್ವಾಗತಿಸಿದರು. ಮಹೇಶ್ ನಿರೂಪಿಸಿದರು.ಕೆ.ಇ.ಬಿ. ಷಣ್ಮುಖಪ್ಪ, ಮಹಡಿ ಶಿವಮೂರ್ತಿ ಸೇರಿದಂತೆ ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜದ ಮುಖಂಡರುಗಳು ಜಯಂತಿಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap