ಬೆಂಕಿ ಆಕಸ್ಮಿಕ : ಅಂಗಡಿ ಭಸ್ಮ

ಮಿಡಗೇಶಿ

           ಕಳೆದ ಏಳೆಂಟು ವರ್ಷಗಳಿಂದಲೂ ಮಳೆ ಬಾರದೆಯೆ, ಬೆಳೆ ಬೆಳೆಯದೇ ದನಕರುಗಳು ಹಾಗೂ ಮಾನವರು ಸೇರಿದಂತೆ ಸಕಲ ಜೀವಂತ ಪ್ರಾಣಿಗಳಿಗೆಲ್ಲಾ ತಿನ್ನಲು ಆಹಾರದ ತೊಂದರೆ, ಕುಡಿಯಲು ನೀರಿನ ಆಹಾಕಾರ ವಿರುವಂತಹ ಸಮಯದಲ್ಲಿ ಸಂಸಾರವನ್ನು ಮುನ್ನಡೆಸಿಕೊಂಡು ಹೋಗುವ ಮನೆಯಲ್ಲಿನ ವೃದ್ಧರು ಮಕ್ಕಳನ್ನು ಸಾಕಲಿಕ್ಕಾಗಿ ಜೀವನೋಪಾಯಕ್ಕಾಗಿ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರಡ್ಡಿಹಳ್ಳಿ ಗ್ರಾದ ಬಸ್ ನಿಲ್ದಾಣದ ಬಳಿಯಲ್ಲಿ ಇದೇ ಗ್ರಾಮದ ಗೌರಮ್ಮ ಶಿವಾನಂದ ಎನ್ನುವವರು ಪೆಟ್ಟಿಗೆ ಅಂಗಡಿಯೊಂದರ ಮೇಲೆ ಗರಿಗಳ ಚಪ್ಪರ ಹಾಕಿಕೊಂಡು ಹೋಟೆಲನ್ನು ನಡೆಸುತ್ತಿದ್ದು.

          ಮತ್ತೋರ್ವ ಲಕ್ಷಮ್ಮ ಎಂಬ ಮಹಿಳೆಯು ಪೆಟ್ಟಿಗೆ ಅಂಗಡಿಯಲ್ಲಿ ಕೋಳಿಯ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇದ್ದಕ್ಕಿಂದಂತೆ ಆಯ್ದುಕೊಂಡು ತಿನ್ನುವಂತಹ ಕೋಳಿಯ ಕಾಲು ಮುರಿದಂತೆ ಏ.1 ರಂದು ರಾತ್ರಿ ಸಮಯ 10-45 ಗಂಟೆಯಯಿಂದ 11-00 ಗಟೆಯ ಸಮಯದಲ್ಲಿ ಸದರ ಗುಡಿಸಲು ನಿರ್ಮಿತ ಅಂಗಡಿಗಳಿಗೆ (ಕಿಗೇಡಿಗಳಿಂದ ಬೆಂಕಿ ಬಿದ್ದಿದೆ ಎನ್ನುವ ಅನುಮಾನ) ಬೆಂಕಿ ಕಾಣಿಸಿಕೊಂಡಿದ್ದು ಕ್ಷಣ ಮಾತ್ರದಲ್ಲಿ ಸದರಿ ಎರಡು ಅಂಗಡಿಗಳು ಧಗಧಗನೆ ಉರಿದು ಸುಟ್ಟು ಕರಕಲಾಗಿರುವ ಬಗ್ಗೆ ವರದಿಯಾಗಿದೆ, ಕೋಳಿ ಅಂಗಡಿ ವ್ಯಾಪಾರಿಗೆ ಸುಮಾರು 150 ಕೋಳಿಗಳು ಸಜೀವ ದಹನವಾಗಿದ್ದು ಪೆಟ್ಟಿಗೆ ಅಂಗಡಿ ಹಾಗೂ ಇತರೆ ಪರಿಕರಗಳು ಭಸ್ಮವಾಗಿರುತ್ತವೆ.

           ಹಾಗೂ ಐದು ಕೆ.ಜಿ ತೂಕದ ಗ್ಯಾಸ್ ತುಂಬಿದ ಸಿಲಿಂಡರ್ ಗೆ ಅಳವಡಿಸಿರುವ ಸ್ಟೌವ್ ಸಿಡಿದು ಸ್ಪೋಟಗೊಂಡಿರುತ್ತದೆ. ಗೌರಮ್ಮಳಿಗೆ ಸೇರಿದ ಗುಡಿಸಲು ಸೇರಿದ ಪೆಟ್ಟಿಗೆ ಅಂಗಡಿ ಸುಟ್ಟು ಹೋಗಿದ್ದು ಹೋಟೆಲ್‍ಗೆ ಬೇಕಾದಂತಹ ಪಾತ್ರೆ ಸಾಮಾನುಗಳು, ಒಂದು ಸಿಲಿಂಡರ್ ಸುಟ್ಟು ಸ್ಪೋಟಗೊಂಡಿರುತ್ತದೆ.

          ಈ ಸಮಯದಲ್ಲಿ ರೆಡ್ಡಿಹಳ್ಳಿ ಗ್ರಾಮಸ್ಥರು ಧಿಢೀರನೆ ಎದ್ದು ಮನೆಗಳಲ್ಲಿನ ನೀರನ್ನೆರಚಿ ಅಲ್ಪ ಸ್ವಲ್ಪ ಬೆಂಕಿಯನ್ನು ನಂದಿಸಿರುತ್ತಾರೆ ಸದರಿ ಬೆಂಕಿ ಅವಘಟದ ಬಗ್ಗೆ ಮಧುಗಿರಿ ಪಟ್ಟಣದಲ್ಲಿನ ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಲಾಗಿ ಸದರಿಯವರಯ ಘಟನಾ ಸ್ಥಳಕ್ಕೆ ಆಗಮಿಸಿ ಮುಂದೆ ಆಗಬಹುದಾದಂತಹ ( ಅವಘಡ) ಅನಾಹುತ ತಪ್ಪಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಮಿಡಿಗೇಶಿ ರಕ್ಷಣಾ ಸಿಬ್ಬಂದಿಯವರು ಸ್ಥಳಕ್ಕಾಗಮಿಸಿ ಘಟನೆ ಬಗ್ಗೆ ವಿಷಯ ಪಡೆದುಕೊಂಂಡಿರುತ್ತಾರೆ.

Recent Articles

spot_img

Related Stories

Share via
Copy link
Powered by Social Snap