ತುಮಕೂರು:
ಸಿದ್ದಗಂಗಾ ಶ್ರೀಗಳು ಬೆಳಗ್ಗೆ 6 ರಿಂದ 10 ಗಂಟೆವರೆಗೂ ಅವರೇ ಉಸಿರಾಟ ನಡೆಸಿದ್ದು, 4-5 ಗಂಟೆಗಳ ಕಾಲ ವೆಂಟಿಲೇಟರ್ ಇಲ್ಲದೆ ಸಹಜ ಉಸಿರಾಟ ನಡೆಸಿ, ಮಠದಲ್ಲಿ ಪವಾಡ ಸೃಷ್ಟಿಸಿದ್ದಾರೆ .
ಸಿದ್ದಗಂಗಾ ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿ ಮಾಹಿತಿ ನೀಡಿದ ಶ್ರೀಗಳ ಆಪ್ತ ಡಾ. ಪರಮೇಶ್, ಶ್ರೀಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ. ಎಲ್ಲಾ ಪ್ಯಾರಾಮೀಟರ್ಸ್ ನಾರ್ಮಲ್ ಆಗಿದೆ. ಶ್ರೀಗಳ ದೇಹದಲ್ಲಿ ಅಲ್ಬುಮಿನ್ ಅಂಶ ನಿರೀಕ್ಷೆಯಷ್ಟು ಏರಿಕೆಯಾಗುತ್ತಿಲ್ಲ. ಶೇ.1 ರಷ್ಟು ಮಾತ್ರ ಏರಿಕೆಯಾಗಿದೆ. ಶ್ವಾಸಕೋಶದಲ್ಲಿ ನೀರು ಸೇರಿಕೊಳ್ಳುತ್ತಿದೆ, ಅದನ್ನು ತೆಗೆಯುತ್ತಿದ್ದೇವೆ. ಎಂದು ತಿಳಿಸಿದ್ದಾರೆ.
ಇನ್ನು ಎಂದಿನಂತೆ ಬೆಳಗ್ಗೆ 5 ಗಂಟೆಗೆ ಶ್ರೀಗಳಿಗೆ ರಕ್ತ ಪರೀಕ್ಷೆ ಮಾಡಲಾಗಿದೆ. ಶ್ರೀಗಳ ಪಕ್ಕದಲ್ಲಿ ಕುಳಿತು ಕಿರಿಯ ಶ್ರೀಗಳು ಅವರ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ಮಠದ ಪೂಜೆಯ ವೇಳೆಗೆ ಶ್ರೀಗಳು ಕಣ್ಣು ತೆರೆದು ನೋಡಿದ್ದಾರೆ.
ಹಳೆ ಮಠದ ಮುಂಭಾಗದಲ್ಲಿ ಸಿದ್ದಗಂಗಾ ಶ್ರೀಗಳ ದರ್ಶನಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಶ್ರೀಗಳನ್ನು ನೋಡಲು ಅವಕಾಶ ನೀಡಲಾಗಿತ್ತು. 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದರು ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ