ಸಿದ್ಧಗಂಗಾ ಮಠ ರಾಜ್ಯಕ್ಕೆ ಅಲ್ಲ ದೇಶಕ್ಕೆ ಮಾದರಿಯಾದ ಕ್ಷೇತ್ರ : ಆನಂದ್ ಸಿಂಗ್

ತುಮಕೂರು :

   ಸಿದ್ಧಗಂಗಾ ಮಠ ರಾಜ್ಯಕ್ಕೆ ಅಲ್ಲ ದೇಶಕ್ಕೆ ಮಾದರಿಯಾದ ಕ್ಷೇತ್ರ, ಇಲ್ಲಿನ ಮಕ್ಕಳಿಗೆ ಇರುವ ಶಿಸ್ತು ಬೆರೆಲ್ಲೂ ನೋಡಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ತಿಳಿಸಿದರು.

    ಸಿದ್ಧಗಂಗಾ ಮಠದಲ್ಲಿ ನಡೆದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕದಲ್ಲಿ ಇರುವ ಬಡತನ ಹಾಗೂ ಬರದ ಭಾರವನ್ನು ಸಿದ್ಧಗಂಗೆ ತೆಗೆದುಕೊಂಡು ಅಲ್ಲಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಕೆಲಸವನ್ನು ಮಾಡುತ್ತಿದೆ ಎಂದರು ಅಭಿಪ್ರಾಯಪಟ್ಟರು.

    ಶ್ರೀಗಳ ದೂರದರ್ಶಿತ್ವದಿಂದಲೇ ಈ ವಸ್ತು ಪ್ರದರ್ಶನ ಆರಂಭವಾಯಿತು, ಶ್ರೀಗಳ ಬದುಕು ಎಲ್ಲರಿಗೂ ಆದರ್ಶಪ್ರಾಯವಾಗಿದ್ದು, ಅವರ ಮಾರ್ಗದಲ್ಲಿಯೇ ನಾವೆಲ್ಲರೂ ಸಾಗಬೇಕು, ಅರಣ್ಯ ಇಲಾಖೆ ಸಚಿವನಾಗಿದ್ದರಿಂದಲೇ ನನಗೆ ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಸಿಕ್ಕಿದೆ ಅದಕ್ಕೆ ವಸ್ತು ಪ್ರದರ್ಶನದಲ್ಲಿ ಅರಣ್ಯ ಇಲಾಖೆ ನೀಡಿರುವ ಕೊಡುಗೆ ಕಾರಣ ಎಂದರು.

    ಇಂದು ಸಮಾಜ ತಂತ್ರಜ್ಞಾನದ ಹಿಂದೆ ಬಿದ್ದು ಸಂತೋಷವನ್ನು ಮರೆತಿದ್ದೇವೆ, ತಂತ್ರಜ್ಞಾನ ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ, ತಂತ್ರಜ್ಞಾನದ ಹಿಂದೆ ಓಡುತ್ತ ಪರಿಸರವನ್ನು ಕಳೆದಕೊಂಡರೆ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತೇವೆ, ಪರಿಸರ ದೇಶದ ಬೆನ್ನಲುಬು ಪರಿಸರವನ್ನು ಉಳಿಸಲು ಗಂಭೀರವಾದ ಚಿಂತನೆ ಮಾಡಬೇಕಿದ್ದು, ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು ಎಂದರು.

    ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಮಾತನಾಡಿ ಶಿವಕುಮಾರ ಸ್ವಾಮೀಜಿ ಪ್ರಾರಂಭಿಸಿದ ವೈಶಿಷ್ಠ ಪೂರ್ಣ ಕಾರ್ಯಕ್ರಮ ಈ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನವನ್ನು ರಾಜ್ಯದ ರೈತರ ಅನುಕೂಲಕ್ಕಾಗಿ ಮಾಡಲಾಗಿದೆ ಎಂದು ಶಿವಕುಮಾರ ಸ್ವಾಮೀಜಿ ತಿಳಿಸಿದ್ದರು, ಅದರಂತೆ ಅರಣ್ಯ ಇಲಾಖೆಯಲ್ಲಿ ರೈತರು ಪಾಲಾದರಾಗಬೇಕು, ಕೃಷಿಯಲ್ಲಿನ ತಳಿಗಳ ಬಗ್ಗೆ ತಿಳಿಸಲು ಬಯಸಿದ್ದರು ಅದಕ್ಕಾಗಿ ಈ ವಸ್ತು ಪ್ರದರ್ಶನವನ್ನು ಪ್ರಾರಂಭಿಸಿದ್ದರು ಎಂದು ತಿಳಿಸಿದರು.

    ಮುಂಬರುವ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಐಟಿ, ಬಿಟಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡುವಂತಾಗಬೇಕು, ಹಳ್ಳಿಗಾಡಿನ ಪೋಷಕರಿಗೆ ಪ್ರೇರೇಪಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಸಿದ್ಧಗಂಗಾ ಮಠ ಗುರುಕುಲವಲ್ಲ, ಎಲ್ಲರಿಗೂ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವ ಕೇಂದ್ರವಾಗುವ ನಿಟ್ಟಿನಲ್ಲಿ ಶ್ರೀಗಳು ಮುಂದಾಲೋಚನೆಯಿಂದ ವಸ್ತು ಪ್ರದರ್ಶನಕ್ಕೆ ಶಾಶ್ವತವಾಗಿ ಜಾಗ ಮೀಸಲಿಟ್ಟಿದ್ದರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ಸಿದ್ಧಗಂಗೆಯಲ್ಲಿ ಪ್ರಾರಂಭಿಸಿದ ವಸ್ತು ಪ್ರದರ್ಶನವನ್ನು ಸುತ್ತೂರು ಮಠ ಸೇರಿದಂತೆ ಅನೇಕ ಮಠಗಳು ಅಳವಡಿಸಿಕೊಂಡವು, ಸರ್ಕಾರವು ಇಂತಹ ವಸ್ತು ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದ್ದು, ಸಿದ್ಧಗಂಗಾ ವಸ್ತು ಪ್ರದರ್ಶನವನ್ನು ವೈಜ್ಞಾನಿಕವಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಸಿದ್ಧಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಕರ್ನಾಟಕದ ಬೃಹತ್ ವಸ್ತು ಪ್ರದರ್ಶನ ಸಿದ್ಧಗಂಗಾ ಮಠದ ಹೆಮ್ಮೆ, ಶ್ರೀಮಠದ ಅನೇಕ ಸೇವಾ ಕಾರ್ಯಗಳಲ್ಲಿ ವಸ್ತು ಪ್ರದರ್ಶನವೂ ಒಂದು, ಶ್ರೀಗಳಿಗೆ ಕೃಷಿ ಬಗ್ಗೆ ಅಪಾರ ಆಸಕ್ತಿ ಇತ್ತು ಅದಕ್ಕಾಗಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಎಂದು ಹೆಸರಿಟ್ಟಿದ್ದರು ಎಂದರು.

   ಕೃಷಿ ಮತ್ತು ಕೈಗಾರಿಕೆ ಎರಡರಲ್ಲಿ ಕೃಷಿಯೇ ಮುಖ್ಯ, ಕೈಗಾರಿಕೆ ಇಲ್ಲದೇ ಬದುಕ ಬಹುದು ಆದರೆ ಕೃಷಿ ಇಲ್ಲದೇ ಬದಕಲು ಸಾಧ್ಯವಿಲ್ಲ, ವಿಜ್ಞಾನ, ತಂತ್ರಜ್ಞಾನವನ್ನು ಬಿಟ್ಟು ಕೃಷಿಗೆ ಒತ್ತು ನೀಡಬೇಕು, ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಕೃಷಿಗೆ ಮರಳಬೇಕಿರುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

   ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಕೃಷಿರಂಗ ಬೆಳವಣಿಗೆ ಹೊಂದಬೇಕಿದೆ, ವಿಜ್ಞಾನ ತಂತ್ರಜ್ಞಾನ ಮಾನವ ಅಭಿವೃದ್ಧಿಗೆ ಬಳಕೆಯಾಗಬೇಕಿದೆ, ಈ ನಿಟ್ಟಿನಲ್ಲಿ ಅರಣ್ಯಿಕರಣವಾಗುವ ನಿಟ್ಟಿನಲ್ಲಿ ರೈತರು ಮುಂದಾಗಬೇಕಿದೆ, ಆ ಮೂಲಕ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಜನರು ಮುಂದಾಗಬೇಕು, ಅನೇಕರ ತಪ್ಪು ಕಲ್ಪನೆಯಿಂದ ಕಾಡಿಗೆ ಬೆಂಕಿ ಇಡುವುದು ಬೇಡ ಎಂದು ಸಲಹೆ ನೀಡಿದರು.

    ನಾಗರೀಕತೆ, ಸಂಸ್ಕೃತಿಯೊಂದಿಗೆ ಶಿಕ್ಷಣದ ಸಂಸ್ಕಾರವಿದ್ದರೆ ಮಾತ್ರ ಆತನ ಆಲೋಚನೆಯ ಲಾಭವನ್ನು ಪಡೆದುಕೊಳ್ಳಬಹುದು, ಕೃಷಿ, ಅರಣ್ಯ, ತೋಟಗಾರಿಕೆ ಇಲಾಖೆಯ ವಸ್ತು ಪ್ರದರ್ಶನದ ಮೂಲಕ ಜನರಿಗೆ ಮಾಹಿತಿಯನ್ನು ನೀಡುವ ಕೆಲಸವನ್ನು ವಸ್ತು ಪ್ರದರ್ಶನ ಮಾಡುತ್ತಿದೆ ಎಂದ ಅವರು ಶಿಕ್ಷಣದೊಂದಿಗೆ ಕೃಷಿಗೂ ಒತ್ತು ನೀಡಬೇಕಿದೆ ಎಂದು ಹೇಳಿದರು.ವಸ್ತು ಪ್ರದರ್ಶನದ ಯಶಸ್ವಿಗೆ ಸರ್ಕಾರದ ಸಹಕಾರವೂ ಮುಖ್ಯವಾಗಿದ್ದು, ಅನುದಾನ ನೀಡುವ ಮೂಲಕ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಪ್ರೋತ್ಸಾಹ ನೀಡುತ್ತಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ನೀಡಿದ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.

     ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯೆ ಮಮತಾ, ಮೈದಾಳ ಗ್ರಾ.ಪಂ.ಅಧ್ಯಕ್ಷೆ ಜಲಜಾಕ್ಷಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಅಭಿವೃದ್ಧಿ ರೆವಲ್ಯೂಷನ್ ಫೋರಂನ ಕುಂದರನಹಳ್ಳಿ ರಮೇಶ್, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಕಾರ್ಯದರ್ಶಿ ಜಿ.ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಕೆಂ.ಬ.ರೇಣುಕಯ್ಯ, ಎಸ್.ಶಿವಕುಮಾರ್, ಪ್ರಚಾರ ಸಮಿತಿ ಸಂಚಾಲಕ ಜಿ.ರುದ್ರೇಶಯ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೆ.ಎಸ್.ಉಮಾಮಹೇಶ್, ಸಹ ಸಂಚಾಲಕ ಎಂ.ನಂದೀಶ್ ಸೇರಿದಂತೆ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap