ಪೇಜಾವರ ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು

     ಪೇಜಾವರ ಶ್ರೀಗಳು ಹಾಗೂ ತಮ್ಮ ನಡುವೆ ರಾಜಕೀಯ, ವೈಚಾರಿಕ ಬಿನ್ನಾಭಿಪ್ರಾಯವಿತ್ತೇ ವಿನಃ ಯಾವುದೇ ಧಾರ್ಮಿಕ ಭಿನ್ನಾಭಿಪ್ರಾಯ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

     ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಾವು ಮಂಗಳೂರಿಗೆ ಭೇಟಿ ನೀಡಿದಾಗ ಕೃಷ್ಣ ಮಠಕ್ಕೆ ಹೋಗಬಾರದೆಂಬುದೇನೂ ಇರಲಿಲ್ಲ.ಆದರೆ ಮಠ ಭೇಟಿ ನೀಡು ಸಂದರ್ಭ ಸೃಷ್ಟಿಯಾಗಲಿಲ್ಲ. ಶ್ರೀಗಳು ಸಮಾಜದ ಅಂಕು ಡೊಂಕು ತಿದ್ದುವ ಪ್ರಯತ್ನ ಮಾಡುವ ಮೂಲಕ ಸರ್ವಧರ್ಮ ಸಾಮರಸ್ಯವನ್ನು ಕಾಪಾಡಲು‌ ಪ್ರಯತ್ನಿಸಿದ್ದರು.

     ಸಮಾಜದ ಬದಲಾವಣೆಗೆ ಶ್ರಮಿಸಿದ್ದ ಅವರು ಮೈಸೂರಿನ ಕೈಲಾಸಪುರಿ ಸೇರಿದಂತೆ ರಾಜ್ಯದ ಹಲವು ದಲಿತರ ಕೇರಿಗಳಿಗೆ ಭೇಟಿ ನೀಡಿದ್ದರು.ಇತ್ತೀಚೆಗೆ ರಮ್ಜಾನ್ ವೇಳೆ ಇಫ್ತಾರ್ ಕೂಟ ಆಯೋಜಿಸಿದ್ದರು ಎಂದು ಸ್ಮರಿಸಿದರು. ತಾವು ಹಲವು ಬಾರಿ ಶ್ರೀಗಳನ್ನು ಭೇಟಿಯಾಗಿದ್ದು ತಮ್ಮೊಂದಿಗೆ ವಿಶ್ವೇಶ್ವರ ತೀರ್ಥರು ಆತ್ಮೀಯವಾಗಿ ಧಾರ್ಮಿಕ, ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು.ಅಂತಹ ಹಿರಿಯ ಯತಿ‌ ಈಗ ನಮ್ಮೊಂದಿಗೆ ಇಲ್ಲ.ಮೃತರ ಆತ್ಮಕ್ಕೆ ಚಿರಶಾಂತಿ‌ ದೊರಕಲಿ.ಮಠದ ಭಕ್ತಾದಿಗಳು, ಅನುಯಾಯಿಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ಕೊಡಲಿ ಎಂದು ಸಿದ್ದರಾಮಯ್ಯ ಪ್ರಾರ್ಥಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap