ಬೆಂಗಳೂರು
ಕಲಬುರಗಿಯಲ್ಲಿ ಶಾಸಕ ದತ್ತಾತ್ರೇಯ ರೇವೂರು ಅವರು ಅಧಿಕಾರಿಯ ಮೇಲೆ ದೌರ್ಜನ್ಯ ಮತ್ತು ಬೆದರಿಕೆ ಹಾಕಿರುವ ಘಟನೆಯನ್ನು ಖಂಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಸುದ್ದಿಗಾರರಿಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕಲಬುರಗಿಯಲ್ಲಿ ಶಾಸಕ ದತ್ತಾತ್ರೇಯ ರೇವೂರು ಹಿಂದುಳಿದ ವರ್ಗಗಳ ಅಧಿಕಾರಿ ರಮೇಶ್ ಸಂಗ ಅವರೊಂದಿಗೆ ಅನುಚಿತವಾಗಿ ವರ್ತಿಸಿದಲ್ಲದೇ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಬಗ್ಗೆ ಸಂಗ ಅವರು ಆಡಿಯೋ ರಿಕಾರ್ಡ್ ಮಾಡಿಕೊಂಡಿದ್ದಾರೆ. ಕೋವಿಡ್-19 ಸಂಬಂಧಿಸಿದಂತೆ ಆಹಾರ ಕಿಟ್ ಹಂಚಲು ವಂತಿಗೆ ಕೊಡುವಂತೆ ರೇವೂರು ಒತ್ತಾಯ ಮಾಡಿದ್ದಾರೆ. ಇವೆಲ್ಲವನ್ನು ರಮೇಶ್ ಸಂಗ ಮೊಬೈಲ್ ದಾಖಲು ಮಾಡಿಕೊಂಡಿದ್ದು, ಪೆÇಲೀಸರಿಗೆ ದೂರು ಕೊಡಲು ಹೋದಾಗ ಅವರು ಪಿರ್ಯಾದು ಸ್ವೀಕರಿಸಿಲ್ಲ ಎಂದು ದೂರಿದರು.
ಒಬ್ಬ ಕಾರ್ಪೋರೇಟರ್ ಸಹ ಹಾದಿಮನಿ ಎನ್ನುವವರ ಮನೆಗೆ ಹೋಗಿ ಬೆದರಿಕೆ ಹಾಕಿದ್ದಾರೆ. ಇಂತಹ ನೀಚಪ್ರವೃತ್ತಿ ಭಯದ ವಾತಾವರಣ ಸರ್ಕಾರದಲ್ಲಿ ನಿರ್ಮಾಣವಾಗುತ್ತಿದೆ. ಇದರಿಂದ ಅಧಿಕಾರಿಗಳು ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಈ ಬಗ್ಗೆ ಪೊಲೀಸ್ ಕಮಿಷನರ್ ಹತ್ತಿರ ಮಾತನಾಡಿ, ರಮೇಶ್ ಸಂಗ ಅವರ ದೂರನ್ನು ದಾಖಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದೇನೆ. ಬೆದರಿಕೆ ಹಾಕಿದ ಕಾರ್ಪೋರೇಟರ್ರನ್ನು ಸಹ ಬಂಧಿಸುವಂತೆ ತಿಳಿಸಿದ್ದೇನೆ ಎಂದರು.ಇದು ಜಾಮೀನುರಹಿತ ಪ್ರಕರಣ. ಭ್ರಷ್ಟಾಚಾರ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಕಾನೂನಿನಡಿಯಲ್ಲಿ ಸೂಕ್ತ ಶಿಕ್ಷೆಯಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಕೆಲವು ದಿನಗಳ ಹಿಂದೆ ದುಬೈ ಕನ್ನಡಿಗರೊಂದಿಗೆ ಲಾಕ್ ಡೌನ್ ಹಿನ್ನಲೆಯಲ್ಲಿ ವಿಡಿಯೋ ಸಂವಾದ ನಡೆಸಿದ್ದ ಸಿದ್ದರಾಮಯ್ಯ ಶುಕ್ರವಾರ ಬೆಲ್ಜಿಯಂ, ನೆದರ್ಲ್ಯಾಂಡ್ , ಫಿನ್ಲ್ಯಾಂಡ್, ಅಮೆರಿಕ ಹಾಗೂ ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಜೊತೆ ವಿಡಿಯೋ ಸಂವಾದ ನಡೆಸಿ, ಕೊರೊನಾ ಸೋಂಕಿನಿಂದ ಸೃಷ್ಟಿಯಾಗಿರುವ ಆತಂಕದ ವಾತಾವರಣ ಹಾಗೂ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
