ಬೆಂಗಳೂರು
ಕೊನೆಗೂ ಸರ್ಕಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಳಿದ್ದ ನಿವಾಸವನ್ನು ಸರ್ಕಾರ ಹಂಚಿಕೆ ಮಾಡಿದೆ.ಕಾವೇರಿ ನಿವಾಸ ಖಾಲಿ ಮಾಡಲು ಸಿದ್ಧರಾಗಿದ್ದ ಸಿದ್ದರಾಮಯ್ಯ, ರೇಸ್ ವ್ಯೂ ಕಾಟೇಜ್ ಬದಲು ಬೇರೆ ಮನೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದರು.ಅದರಂತೆ ಹೆಚ್.ಡಿ.ರೇವಣ್ಣ ಇದ್ದ ಕುಮಾರಕೃಪ ಪೂರ್ವ ಸಂಖ್ಯೆ 1 ರ ನಿವಾಸವನ್ನು ಸರ್ಕಾರ ಸಿದ್ದರಾಮಯ್ಯರಿಗೆ ನೂತನವಾಗಿ ಹಂಚಿಕೆ ಮಾಡಿದೆ.
2013 ರಿಂದಲೂ ಸುಮಾರು ಆರು ವರ್ಷಗಳ ಕಾಲ ಸಿದ್ದರಾಮಯ್ಯ ಕಾವೇರಿಯಲ್ಲಿಯೇ ವಾಸವಾಗಿದ್ದರು. ಯಡಿಯೂರಪ್ಪಗೆ ಕಾವೇರಿ ನಿವಾಸ ಹಂಚಿಕೆಯಾದಾಗಲೂ ಸಿದ್ದರಾಮಯ್ಯ ತಮ್ಮ ನೆಚ್ಚಿನ ಮನೆಯನ್ನು ಬಿಟ್ಟುಕೊಡಲು ಮನಸು ಮಾಡಿರಲಿಲ್ಲ.ಕೊನೆಗೆ ಕಾವೇರಿಯನ್ನು ಸಿದ್ದರಾಮಯ್ಯರಿಂದ ಬಿಡುಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದರು.
ಮುಖ್ಯಮಂತ್ರಿಗಳ ಕಚೇರಿಗೆ ಹತ್ತಿರದಲ್ಲೇ ನಿವಾಸವೂ ಇದ್ದರೆ ಆಡಳಿತ ದೃಷ್ಟಿಯಿಂದ ಅನುಕೂಲವಾಗಲಿದೆ. ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸ ಖಾಲಿ ಮಾಡಿ ಎಂದು ನಾನು ಹೇಳುವುದಿಲ್ಲ. ಅವರೇ ಅರ್ಥಮಾಡಿಕೊಳ್ಳಲಿ ಇದ್ದಷ್ಟು ದಿನ ಇರಲಿ. ಅವರಿಗೆ ಬೇಕಾದರೆ ಪ್ರಸ್ತುತ ನಾನು ವಾಸವಾಗಿರುವ ರೇಸ್ ವ್ಯೂ ಕಾಟೇಜ್ ನೀಡಲಾಗುವುದು. ಅವರು ಕಾವೇರಿ ನಿವಾಸ ಖಾಲಿ ಮಾಡಿದ ಬಳಿಕ ನಾನು ಅಲ್ಲಿಗೆ ಹೋಗುತ್ತೇನೆ ಎಂದು ಯಡಿಯೂರಪ್ಪ ಕೆಲವು ದಿನಗಳ ಹಿಂದೆ ಹೇಳಿದ್ದರು.
ಈ ಮೊದಲು ಸಿದ್ದರಾಮಯ್ಯಗೆ ರೇಸ್ ವ್ಯೂವ್ ಕಾಟೇಜ್ ಸಂಖ್ಯೆ 2 ಹಂಚಿಕೆ ಮಾಡಲಾಗಿತ್ತು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕುಮಾರಕೃಪ ಪೂರ್ವ ಸಂಖ್ಯೆ 2 ರ ನಿವಾಸ ಹಂಚಿಕೆ ಮಾಡಲಾಗಿತ್ತು. ಈ ನಿವಾಸದಲ್ಲಿ ಹೆಚ್‍ಡಿ.ರೇವಣ್ಣ ವಾಸವಿದ್ದರು ಕೂಡ. ಇದೀಗ ಕಾಗೇರಿಯವರಿಗೆ ರೇಸ್ ವ್ಯೂವ್ ಹಾಗೂ ಸಿದ್ದರಾಮಯ್ಯ ಬೇಡಿಕೆ ಇಟ್ಟಂತೆ ಕುಮಾರಕೃಪ ಪೂರ್ವ ಸಂಖ್ಯೆ 1 ಮನೆಯನ್ನು ಹಂಚಿಕೆ ಮಾಡಲಾಗಿದೆ. ಈ ಹಿಂದೆ ಸಹ ವಿಪಕ್ಷನಾಯಕರಾಗಿದ್ದಾಗ ಸಿದ್ದರಾಮಯ್ಯ ಕುಮಾರಕೃಪ ನಿವಾಸದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ