ರಾಜಕೀಯದಲ್ಲಿ ಹೊಸ ದಾಖಲೆ ನಿರ್ಮಿಸಿದ ಸಿದ್ದರಾಮಯ್ಯ..!!!

ಬೆಂಗಳೂರು 

     ಆಪರೇಷನ್ ಕಮಲದ ಭೀತಿಯಿಂದ ಈಗಲ್ಟನ್ ರೆಸಾರ್ಟ್ ಸೇರಿರುವ ಕಾಂಗ್ರೆಸ್ ಶಾಸಕರಿಗೆ ಪಕ್ಷದ ಮುಖಂಡರು ನಿರಂತರ ಸರಣಿ ಸಭೆಗಳ ಮೂಲಕ ಮನವೊಲಿಸುವ ಕೆಲಸ ಮಾಡಿದ್ದಾರೆ. ಇಂದು ಸಂಜೆ ರೆಸಾರ್ಟ್ ನಲ್ಲಿ ಶಾಸಕಾಂಗ ಸಭೆ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನಕ್ಕೆ ಒಟ್ಟು ನಾಲ್ಕನೇ ಸಭೆಗಳನ್ನು ನಡೆಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

     ‘ ಬಿಜೆಪಿ ಆಪರೇಷನ್ ಕಮಲ ನಡೆಸಲು ನಿರಂತರ ಪ್ರಯತ್ನ ನಡೆಸುತ್ತಿದೆ.ಯಾವೊಬ್ಬ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗದಿರಿ. ನಿಮ್ಮ ಸಮಸ್ಯೆಗಳೇ ಇದ್ದರೂ ಪಕ್ಷದ ಅಧ್ಯಕ್ಷ ಮತ್ತು ಶಾಸಕಾಂಗ ನಾಯಕರ ಬಳಿಕ ಚರ್ಚಿಸಿ ಪರಿಹರಿಸಿಕೊಳ್ಳಿ, ಲೋಕಸಭಾ ಚುನಾವಣೆ ತನಕ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಪತನಕ್ಕೆ ಅವಕಾಶ ನೀಡದಿರಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಶಾಸಕಾಂಗ ಸಭೆಗೆ ಗೈರಾಗಿರುವ 4 ಶಾಸಕರಿಗೆ ಇಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು. ಅವರ ಉತ್ತರ ನೀಡಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಸಭೆಗೆ ತಿಳಿಸಿದ್ದಾರೆ.

      ನಾಳಿನ ಸಭೆಯಲ್ಲಿ ಶಾಸಕರೊಂದಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಪ್ರತ್ಯೇಕ ಚರ್ಚೆ ನಡೆಸುವ ಮೂಲಕ ಶಾಸಕರ ಸಮಸ್ಯೆಗಳು,ಲೋಕಸಭಾ ಚುನಾವಣಾ ತಯಾರಿ,ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ, ಬರ ಪರಿಹಾರ, ಸಂಭಾವ್ಯ ಅಭ್ಯರ್ಥಿಗಳು, ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪ್ರಾಬಲ್ಯ ಬಗ್ಗೆ ಚರ್ಚಸಲಿದ್ದಾರೆ. ಸರ್ಕಾರ ಅಥವಾ ಪಕ್ಷದ ಮಟ್ಟದಲ್ಲಿ ಸಮಸ್ಯೆಗಳಿದ್ದರೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಸಭೆಯಲ್ಲಿ ಶಾಸಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

     ನಾಳಿನ ಸಭೆಯ ಕೆ.ಸಿ.ವೇಣುಗೋಪಾಲ್ ಬಳಿಕ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಲು ಸೂಚಿಸಿರುವ ಸಿದ್ದರಾಮಯ್ಯ, ಬಿಜೆಪಿ ಸೋಮವಾರದಿಂದ ಬರ ಅಧ್ಯಯನ ನಡೆಸುತ್ತಿದ್ದು ಅದಕ್ಕೂ ಮುನ್ನ ಸ್ವಕ್ಷೇತ್ರಗಳಲ್ಲಿನ ಬರ, ಕುಡಿಯವ ನೀರು, ಬೆಳೆ ನಷ್ಟ, ಜಾನುವಾರುಗಳಿಗೆ ಮೇವು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಕಲ್ಪಿಸುವ ಕೆಲಸ ಮಾಡಿ ಎಂದು ಶಾಸಕರಿಗೆ ಸಲಹೆ ನೀಡಿದ್ದಾರೆ.ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

     ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿರುವ ನಾಲ್ಕು ಶಾಸಕರಿಗೆ ಕಾರಣ ಕೇಳಿ ಇಂದು ನೋಟಿಸ್ ಜಾರಿ ಮಾಡುತ್ತೇವೆ. ನಾಲ್ವರು ಶಾಸಕರಿಂದ ಸಮಂಜಸ ಉತ್ತರವನ್ನ ನಾವು ನೀರಿಕ್ಷಿಸುತ್ತೇವೆ. ತಮ್ಮ ಪಕ್ಷದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವ ಮನಸ್ಸು ನಮಗಿಲ್ಲ, ಆದರೆ ಅವರು ಸಮಂಜಸ ಉತ್ತರ ನೀಡಬೇಕು ಎಂದರು.

       ಸುದ್ದಿಗಾರರ ಪ್ರಶ್ನಗೆ ಉತ್ತರಿಸಿದ ದಿನೇಶ್ , ರಮೇಶ್ ಜಾರಕಿಹೊಳಿ ನಾನು ಒಟ್ಟಿಗೆ ವಿಧಾನ ಸಭೆ ಪ್ರವೇಶಿಸಿದವರು.ಅವರಿಗೆ ಒಂದು ಅವಕಾಶ ಕೊಟ್ಟು ನೋಡುತ್ತೇವೆ.ಅವರು ವಾಪಸ್ ಬರುತ್ತಾರೆಂಬ ವಿಶ್ವಾಸ ಇದೆ.ಕಠಿಣ ಕ್ರಮ ಕೈಗೊಳ್ಳುವ ಹಂತದವರೆಗೂ ರಮೇಶ್ ಜಾರಕಿಹೊಳಿ ಹೋಗುವುದಿಲ್ಲವೆಂಬ ನಂಬಿಕೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap