ಸಿದ್ದೇಶ್ವರ್ ಪರವಾಗಿ ಮತಯಾಚಿಸಿದ ಪುತ್ರಿ

ದಾವಣಗೆರೆ:

       ಬಿ.ಜೆ.ಪಿ. ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರರವರ ಪರವಾಗಿ ಶುಕ್ರವಾರ ಮಾಜಿ ಶಾಸಕ ಬಿ.ಪಿ.ಹರೀಶ್ ಅವರ ನೇತೃತ್ವದಲ್ಲಿ ಜಿ.ಎಂ.ಸಿದ್ದೇಶ್ವರ ಅವರ ಪುತ್ರಿ ಅಶ್ವಿನಿ ಜಿ.ಎಸ್ ಅವರು ಹರಿಹರ ಪಟ್ಟಣದ ವಿವಿಧೆಡೆ ಚುನಾವಣಾ ಪ್ರಚಾರ ಕೈಗೊಂಡು ಮತಯಾಚಿಸಿದರು.

       ಹರಿಹರದ ಶ್ರೀ ರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕ್ಷೇತ್ರದ ಸತ್ರನಾರಾಯಣ ಕ್ಯಾಂಪ್, ಭಾಸ್ಕರ್‍ರಾವ್ ಕ್ಯಾಂಪ್, ಮಲ್ಲನಾಯಕನ ಹಳ್ಳಿ ಕ್ಯಾಂಪ್, ಜಿಗಳಿ ಕ್ಯಾಂಪ್, ಗೋಲಿ ರಂಗಾರಾವ್ ಕ್ಯಾಂಪ್‍ಗಳಲ್ಲಿ ಮತಯಾಚನೆ ಮಾಡಿದರು. ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯನ್ನಾಗಿ ಮಾಡಲು ಜಿ.ಎಂ.ಸಿದ್ದೇಶ್ವರರನ್ನು ಪ್ರಚಂಡ ಬಹುಮತದಿಂದ ಜಯಶೀಲರನ್ನಾಗಿ ಮಾಡುವಂತೆ ಮನವಿ ಮಾಡಿದರು.

        ಈ ಸಂಧರ್ಭದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಪಂಚಾಯತ್ ಸದಸ್ಯ ವಾಗೀಶ್ ಸ್ವಾಮಿ, ಮುಖಂಡರಾದ ಹನಗವಾಡಿ ವೀರೇಶ್, ಐರಾಣಿ ಅಣ್ಣೇಶ್, ಮಲ್ಲನಾಯಕನಹಳ್ಳಿ ಶೇಕರಪ್ಪ,ಕೆಂಚನಹಳ್ಳಿ ಮಹಂತೇಶ್, ಗ್ಯಾರಳ್ಳಿ ಶಿವು ಮತ್ತಿತರರು ಪ್ರಚಾರ ಕಾರ್ಯಕ್ಕೆ ಸಾಥ್ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link