ಅನುದಾನ ಬಳಕೆಯಲ್ಲಿ ಜಿ.ಎಂ.ಸಿದ್ದೇಶ್ವರ ಪ್ರಥಮ

ದಾವಣಗೆರೆ:

      ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 2014-15ನೇ ಸಾಲಿನಿಂದ 2018-19ನೇ ಸಾಲಿನವರೆಗೆ ಅನುದಾನ ಬಳಕೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

       ಪ್ರತಿಯೊಬ್ಬ ಸಂಸದರಿಗೆ ಪ್ರತಿವರ್ಷ 5 ಕೋಟಿ ರೂ. ಅನುದಾನದಂತೆ ಐದು ವರ್ಷಕ್ಕೆ 25 ಕೋಟಿ ಅನುದಾನ ಬಿಡುಗಡೆಯಾಗುತ್ತದೆ. ಮೊದಲ ಕಂತು ಬಿಡುಗಡೆಯಾದ ನಂತರ ಆಯಾ ಜಿಲ್ಲಾಧಿಕಾರಿಗಳಿಂದ ಬಳಕೆ ಪ್ರಮಾಣಪತ್ರ, ಆಡಿಟ್ ಸರ್ಟಿಫಿಕೇಟ್ ಸಲ್ಲಿಕೆಯಾದ ನಂತರ ಎರಡನೇ ಕಂತಿನ ಅನುದಾನ ಬಿಡುಗಡೆಯಾಗಲಿದೆ. ಕೇಂದ್ರ ಸರ್ಕಾರದ ಅಂಕಿ, ಸಾಂಖ್ಯಿಕ ಹಾಗೂ ಯೋಜನಾ ಇಲಾಖೆಯಿಂದ ಸಂಪೂರ್ಣ 25 ಕೋಟಿ ಅನುದಾನವನ್ನು ತರಿಸಿಕೊಂಡಿರುವ ರಾಜ್ಯದ 28 ಜನ ಲೋಕಸಭಾ ಸದಸ್ಯರಲ್ಲಿ ಹಾಗೂ 12 ಜನ ರಾಜ್ಯ ಸಭಾ ಸದಸ್ಯರ ಪೈಕಿ ದಾವಣಗೆರೆ ಲೋಕಸಭಾ ಸದಸ್ಯರಾದ ಜಿ.ಎಂ.ಸಿದ್ದೇಶ್ವರ ಮೊದಲಿಗರೆನಿಸಿಕೊಂಡಿದ್ದಾರೆ.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಬಡ್ಡಿ ಹಣ ಸೇರಿ 25.40 ಕೋಟಿ ರೂ. ಹಣಕ್ಕೆ ಸಂಸದರು 25.41 ಕೋಟಿ ಮೊತ್ತದ 611 ಕಾಮಗಾರಿಗಳಿಗೆ ಶಿಫಾರಸ್ಸು ಮಾಡಿದ್ದು, ಈ ಪೈಕಿ 580 ಕಾಮಗಾರಿಗಳು ಆಡಳಿತಾತ್ಮಕ ಅನುಮೋದನೆಗೊಂಡಿದ್ದು, 435 ಕಾಮಗಾರಿಗಳು ಪೂರ್ಣಗೊಂಡಿವೆ, 145 ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ 29 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆಯಬೇಕಿದೆ.

       ಒಟ್ಟಾರೆಯಾಗಿ 25.41 ಕೋಟಿ ಅನುದಾನದಲ್ಲಿ ಸಮುದಾಯ ಭವನ, ಕುಡಿಯುವ ನೀರು ಸರಬರಾಜು, ಶಾಲಾ ಕೊಠಡಿ, ವ್ಯಾಯಾಮ ಶಾಲೆ, ಗ್ರಂಥಾಲಯ ನಿರ್ಮಾಣ, ರಂಗಮಂದಿರ, ಸಿಮೆಂಟ್ ಕಾಂಕ್ರೀಟ್ ರಸ್ತೆ, ಬಸ್ಸು ತಂಗುದಾಣ, ಅಂಗವಿಕಲರಿಗೆ ಮೂರು ಚಕ್ರದ ಸ್ಕೂಟರ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಆದ್ಯತೆ ನೀಡಿರುತ್ತಾರೆ. ಸಾರ್ವಜನಿಕರು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು  ವೆಬ್ ತಾಣಕ್ಕೆ ಭೇಟಿ ನೀಡಿ ಅದರಲ್ಲಿ ಫಂಡ್ ರಿಲೀಸ್ ಸ್ಟೇಟ್‍ಮೆಂಟ್ ಮೇಲೆ ಕ್ಲಿಕ್ ಮಾಡುವ ಮೂಲಕ ಎಲ್ಲಾ ಸಂಸದರ ಅನುದಾನದ ಬಳಕೆಯ ಬಗ್ಗೆ ಸಮಗ್ರ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link