ಹರಪನಹಳ್ಳಿ:
ಸರ್ವರನ್ನೂ ಸಮಾನವಾಗಿ ಕಾಣುವ ರಾಜಕೀಯವಾಗಿ ಬೆಳೆಸುವ ಪಕ್ಷ ಬಿಜೆಪಿ ಪಕ್ಷ ಎಂದೂ ಕೋಮುವಾದಿ ಪಕ್ಷವಲ್ಲ ಎಂದು ಬಿಜೆಪಿ ಮುಖಂಡ ಆರುಂಡಿ ನಾಗರಾಜ್ ಹೇಳಿದರು.
ಪಟ್ಟಣದ ಗೋಕರ್ಣೇಶ್ವರ ದೇವಸ್ಥಾನದ ಬಳಿಯ ಪತ್ರಕರ್ತರ ಸಂಘದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಹಿಂದುಳಿದ ಅಲ್ಪ ಸಂಖ್ಯಾತರನ್ನು ರಾಷ್ಟ್ರಪತಿ ಸ್ಥಾನದಲ್ಲಿ ಗುರುತಿಸುವ ಏಕೈಕ ಪಕ್ಷ ಬಿಜೆಪಿ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಸಿದ್ದಾಂತದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇಶದ ಹಿತಕ್ಕಾಗಿ ಸದಾ ಶ್ರಮಿಸುವ ಪಕ್ಷಕ್ಕಾಗಿ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ ಎಂದರು.
ಸರಳ ವ್ಯಕ್ತಿತ್ವದ ಜಿ.ಎಂ.ಸಿದ್ದೇಶ್ವರ ಬಗ್ಗೆ ಯಾವುದೇ ಗೊಂದಲಮಯ ಹೇಳಿಕೆಗೂ ಆಮಿಷಕ್ಕೂ ಒಳಗಾಗದೆ ಮತನೀಡಿ ಬಹುಮತದಿಂದ ಆರಿಸಿ ತರುವಂತೆ ಮನವಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರು ಪಂಚಮಶಾಲಿ ಸಮಾಜಕ್ಕೆ ಸ್ಥಾನಮಾನ ಕಲ್ಪಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದರು.
ತಾಲೂಕಿನ ಪ್ರತಿ ಗ್ರಾಮದಲ್ಲಿ ಉತ್ತಮ ಪ್ರತಿಕ್ರಿಯೆಯಿದೆ. ಸರ್ವ ಸಮಾಜದ ವಿಶ್ವಾಸದಿಂದ ಅಭ್ಯರ್ಥಿ ಗೆಲ್ಲುವ ಎಲ್ಲಾ ಮುನ್ಸೂಚನೆಗಳು ದೊರೆತಿವೆ ಎಂದರು.ತಾಲೂಕಿನಲ್ಲಿ ಯಾವುದೇ ಪ್ರತ್ಯೇಕ ಬಣವಿಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದರಿಂದ ಪ್ರತಿಫಲಾಪೇಕ್ಷೆಯಿಲ್ಲದೆ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಸ್ಥಳೀಯ ಶಾಸಕರು ಬಿಜೆಪಿ ಪಕ್ಷದ ಶಾಸಕರಿದ್ದಾರೆ ಅವರಿಗೆ ಪಕ್ಷದ ಚಟುವಟಿಕೆಯಲ್ಲಿ ನಮ್ಮ ಸಹಮತವಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಪಂ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್, ಶ್ರೀಮತಿಕೊಟ್ರೇಶ್, ನಾಗನಗೌಡ ಪಾಟೀಲ್, ಬಣಕಾರ್ ನಾಗರಾಜ್ ಹಾಗೂ ಇತರರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
