ಸಿದ್ದರಾಮಯ್ಯ ಯಾವುದೇ ಹೇಳಿಕೆ ಕೊಡುವ ಮೊದಲು ಯೋಚಿಸಲಿ : ಯಡ್ಡಿಯೂರಪ್ಪ

ಬೆಂಗಳೂರು

        ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಿಸಿರುವ ಕಿಸಾನ್ ಸಮ್ಮಾನ್ ಯೋಜನೆ “ರೈತ ಬೆಳಕು” ಯೋಜನೆಯ ನಕಲು ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

       ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಯಾಗಿ ಕೆಲಸ ಮಾಡಿರುವ ಸಿದ್ದರಾಮಯ್ಯ ಅವರು ಯಾವುದೇ ಹೇಳಿಕೆಗಳನ್ನು ಕೊಡುವ ಮೊದಲು ಜವಾಬ್ದಾರಿಯುತರಾಗಿ ನಡೆದುಕೊಳ್ಳಬೇಕು. ಟೀಕೆ ಮಾಡುವ ಉದ್ದೇಶವಿಟ್ಟುಕೊಂಡು ಎಲ್ಲವನ್ನೂ ಟೀಕಿಸಬಾರದು. ಕಿಸಾನ್ ಸಮ್ಮಾನ್ ಯೋಜನೆ ನಕಲು ಎಂದು ಹೇಳುವ ಮೊದಲು ಅವರ ರೈತ ಬೆಳಕು ಯೋಜನೆ ಎಲ್ಲಿ ಜಾರಿಯಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಜಾರಿಯೇ ಆಗದ ಯೋಜನೆಯನ್ನು ತಮ್ಮದು ಎಂದು ಹೇಳುವುದು ಬೇಜವಾಬ್ದಾರಿತನದ ಪರಮಾವಧಿ ಎಂದು ಸಿದ್ದರಾಮಯ್ಯ ವಿರುದ್ದ ವಾಕ್ಪ್ರಹಾರ ನಡೆಸಿದರು.

       ಕೇಂದ್ರದ ಆಯವ್ಯಯವನ್ನು ಜನಸಾಮಾನ್ಯರೇ ಸ್ವಾಗತಿಸುತ್ತಿರುವಾಗ ವಿಪಕ್ಷಗಳಿಗೂ ಸಹ ಅದನ್ನು ಸ್ವಾಗತಿಸುವ ಶಕ್ತಿ ಇರಬೇಕು. ಬಜೆಟ್ ಅಧಿವೇಶನದಲ್ಲಿ ಸಮ್ಮಿಶ್ರ ಸರ್ಕಾರದ ನಾಯಕರು ಏನು ಮಾಡುತ್ತಾರೆ ಎನ್ನುವುದನ್ನು ಬಿಜೆಪಿಯವರು ಕಾದು ನೋಡುತ್ತೇವೆ. ಬಜೆಟ್ ನಲ್ಲಿ ರೈತರ ಸಾಲಮನ್ನಾ ಮಾಡಿದರೆ ಅದನ್ನು ಸ್ವಾಗತಿಸುತ್ತೇವೆ ಎಂದು ಅವರು ಸಮ್ಮಿಶ್ರ ಸರ್ಕಾರಕ್ಕೆ ಸವಾಲು ಹಾಕಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ