ರಾಜ್ಯದಲ್ಲಿ ಶಾಂತಿಯುತ ಮತ್ತು ಸರಳ ರಂಜಾನ್ ಆಚರಣೆ..!

ಬೆಂಗಳೂರು

      ನಾಡಿನಾದ್ಯಂತ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ- ಭಕ್ತಿಯಿಂದ ಸರಳವಾಗಿ ಆಚರಿಸಿದರು. ಕೊರೋನಾ ಲಾಕ್‍ಡೌನ್ ಹಿನ್ನಲೆಯಲ್ಲಿ ಮಸೀದಿ ಹಾಗೂ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದ್ದು ಮುಸ್ಲಿಂ ಬಾಂಧವರು ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿ, ಸಂಪ್ರದಾಯಗಳನ್ನು ಪಾಲಿಸಿದರು. ತಿಂಗಳಿಡೀ ರಂಜಾನ್ ಉಪವಾಸ ಆಚರಿಸುವ ಮುಸ್ಲಿಂ ಬಾಂಧವರು ಈದ್-ಉಲ್-ಫಿತರ್ ಆಚರಿಸಿ ಉಪವಾಸ ಅಂತ್ಯಗೊಳಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.

     ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಹಾಗೂ ದೇವನಹಳ್ಳಿ ತಾಲೂಕುಗಳಲ್ಲಿ ಸರಳವಾಗಿ ಈದ್-ಉಲ್-ಫಿತರ್ ಆಚರಿಸಲಾಗುತ್ತಿದೆ. ಧಾರವಾಡ, ಬಳ್ಳಾರಿ ಹಾಗೂ ರಾಯಚೂರು, ಗದಗ್, ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ ಮತ್ತಿತರ ಕಡೆಗಳಲ್ಲಿ ಮುಸ್ಲಿಂ ಬಾಂಧವರು ತಮ್ಮ ಮನೆಗಳಲ್ಲಿಯೇ ಹಬ್ಬ ಆಚರಿಸುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

     ತುಮಕೂರಿನಲ್ಲಿ ರಂಜಾನ್ ಆಚರಣೆ ಕುರಿತಂತೆ ನಮ್ಮ ಪ್ರತಿನಿಧಿ ರಘು ವರದಿ ಮಾಡಿದ್ದಾರೆ. ರಾಜ್ಯಪಾಲ ವಜೂಭಾಯ್ ವಾಲಾ, ರಂಜಾನ್ ಹಬ್ಬಕ್ಕೆ ಶುಭಕೋರಿದ್ದು, ವಿಶೇಷ ಪ್ರಾರ್ಥನೆ ಮತ್ತು ಉಪವಾಸ ಹಾಗೂ ಬಡವರಿಗೆ ದಾನ ಮಾಡುವಂತಹ ಸತ್ಕಾರ್ಯಗಳ ಭಾಗವಾದ ರಂಜಾನ್, ಉಳ್ಳವರು ಬಡವರಿಗೆ ಸಹಾಯ ಮಾಡುವ ನೈಜ ಉದ್ದೇಶ ಹೊಂದಿದೆ. ಈ ಮೂಲಕ ರಂಜಾನ್ ಹಬ್ಬ ಮತ್ತಷ್ಟು ಪವಿತ್ರಗೊಂಡಿದೆ ಎಂದು ಹೇಳಿದ್ದಾರೆ.

      ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಸಂದೇಶದಲ್ಲಿ ನಾಡಿಗೆ ಎದುರಾಗಿರುವ ಕೋವಿಡ್ ಸಂಕಷ್ಟಗಳು ಪರಿಹಾರವಾಗಲಿ, ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ದೇವರು ಕರುಣಿಸಲಿ, ಪ್ರತಿಯೊಬ್ಬರು ಮನೆಯಲ್ಲಿದ್ದು, ಸುರಕ್ಷಿತವಾಗಿ ಹಬ್ಬ ಆಚರಿಸುವಂತಾಗಲಿ ಎಂದು ಹೇಳಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಸಂದೇಶದಲ್ಲಿ ತ್ಯಾಗ ಮತ್ತು ಭ್ರಾತೃತ್ವ ಸಂದೇಶವನ್ನು ಅರಿತು, ಅಳವಡಿಸಿಕೊಂಡು ಬಾಳೋಣ ಎಂದು ಹೇಳಿದ್ದಾರೆ. ನಾಡಿನ ಹಲವು ಗಣ್ಯರು ರಂಜಾನ್ ಹಬ್ಬಕ್ಕೆ ಶುಭ ಕೋರಿದ್ದು, ವ್ಯಕ್ತಿಗತ ಅಂತರ ಕಾಯ್ದುಕೊಂಡು ಹಬ್ಬವನ್ನು ಆಚರಿಸಬೇಕು ಎಂದು ಮುಸ್ಲಿಂ ಧರ್ಮಗುರುಗಳು ಸಲಹೆ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link