ಬೆಂಗಳೂರು
ಗೊರಗುಂಟೆಪಾಳ್ಯದ ಹೆಚ್‍ಎಂಟಿ ವಾರ್ಡ್‍ನ ಮನೆಯೊಂದರಲ್ಲಿ ಗುರುವಾರ ಒಂಟಿ ಮಹಿಳೆ ಕೊಲೆಗೈದ ದುಷ್ಕರ್ಮಿಯ ಸುಳಿವು ದೊರೆತಿದ್ದು ಆತನ ಪತ್ತೆಗಾಗಿ ಆರ್‍ಎಂಸಿ ಯಾರ್ಡ್ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಪತಿಯ ಜೊತೆ ಹೊಂದಾಣಿಕೆಯಿಲ್ಲದೇ ವಿಚ್ಚೇಧನ ಪಡೆದು ಒಂಟಿಯಾಗಿದ್ದ ಮಧುಗಿರಿ ಮೂಲದ ರುಕ್ಮಿಣಿಯನ್ನು ಪರಿಚಯಸ್ಥನೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಈ ಕೃತ್ಯ ನಡೆದಿರುವ ಶಂಕೆಯಿದ್ದು ಆರೋಪಿಯ ಸುಳಿವು ಆಧರಿಸಿ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೊರಗುಂಟೆಪಾಳ್ಯದ ಹೆಚ್‍ಎಂಟಿ ವಾರ್ಡ್‍ನ ಮನೆಯೊಂದರಲ್ಲಿ ರುಕ್ಮಿಣಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಮಧುಗಿರಿಯ ರುಕ್ಮಿಣಿಗೆ 20 ವರ್ಷದ ಹಿಂದೆ ನಾರಯಣಾ ಸ್ವಾಮಿ ಎಂಬುವರ ಜೊತೆ ಮದುವೆಯಾಗಿತ್ತು. ಬಳಿಕ ಹೊಂದಾಣಿಕೆ ಇಲ್ಲದ್ದರಿಂದ ಗಂಡನಿಗೆ ವಿಚ್ಚೇಧನ ನೀಡಿ ಬೆಂಗಳೂರಿಗೆ ಬಂದು ಸಾಯಿ ಗಾರ್ಮೆಂಟ್ಸ್‍ಗೆ ಸೇರಿಕೊಂಡಿದ್ದರು..
ಅಲ್ಲಿಯೇ ಕೆಲಸ ಮಾಡ್ತಾ ಸೂಪರ್ವೈಸರ್ ಆಗಿ ಬಡ್ತಿ ಸಹ ಸಿಕ್ಕಿತ್ತು. ತಿಂಗಳಿಗೆ 22 ಸಾವಿರ ಸಂಬಳ ಕೂಡ ಬರುತ್ತಿತ್ತು.ಆದರೆ ಒಂಟಿಯಾಗಿದ್ದ ರುಕ್ಮಿಣಿ ಮೇಲೆ ಹಲವರ ಕಣ್ಣು ಬಿದಿತ್ತು. ಹೀಗೆ ಗಾರ್ಮೆಂಟ್ಸ್‍ನಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿ ಪರಿಚಯವಿತ್ತು. ಆತನೊಂದಿಗೆ ಸಲುಗೆ ಕೂಡ ಬೆಳೆದಿತ್ತು.
ಆಗಾಗ ರುಕ್ಮಿಣಿ ಇದ್ದ ಮನೆಗೆ ಬಂದು ಹೋಗುತ್ತಿದ್ದ ಆತನೇ ಕೊಲೆ ಮಾಡಿರುವ ಸುಳಿವು ದೊರೆತಿದೆ.ಕಳೆದ ಎರಡು ದಿನಗಳ ಹಿಂದೆ ಬಂದಿದ್ದ ಗಾರ್ಮೆಂಟ್ಸ್ ವ್ಯಕ್ತಿ ಹಾಗೂ ರುಕ್ಮಿಣಿ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಬಳಿಕ ರುಕ್ಮಿಣಿ ತಲೆಗೆ ಬಲವಾಗಿ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿ ಆತ ಪರಾರಿಯಾಗಿದ್ದಾನೆ. ರುಕ್ಮಿಣಿ ಅಕ್ಕ ಕಾಲ್ ಮಾಡಿದ್ದು, ಮೊಬೈಲ್ ಆಫ್ ಆಗಿರೋದರಿಂದ ನೋಡಲು ಬಂದ ಸಂಬಂಧಿಕರಿಗೆ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
