ಶ್ರೀ ಸಿದ್ಧಾರ್ಥ ಕಾಲೇಜಿನಲ್ಲಿ 2018-19 ನೇ ಸಾಲಿನ ಸಿರಿ ಸಂಭ್ರಮ

ತುಮಕೂರು

      ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19 ನೇ ಸಾಲಿನ ಶ್ರೀ ಸಿದ್ಧಾರ್ಥ ಸಿರಿ ಸಂಭ್ರಮ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಉಧ್ಘಾಟನ ಸಮಾರಂಬವನ್ನು ಹಮ್ಮಿಕೊಳ್ಳಲಾಗಿತ್ತು,

      ಕಾರ್ಯಕ್ರಮವನ್ನು ತುಮಕೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ಸುರೇಶ್ ಕೆ ಜೆ ರವವರು ಉದ್ಘಾಟಿಸಿದ ನಂತರ ಮಾತನಾಡುತ್ತಾ ಇಂದು ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಾದ ಎನ್ ಎಸ್ ಎಸ್, ಎನ್ ಸಿಸಿ, ರೆಡ್ ಕ್ರಾಸ್ ವಿಜ್ಞಾನ ಸಂಘಗಳ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಜ್ಞಾನಾರ್ಜನೆಯ ಜೊತೆಗೆ ಮಾನಸಿಕ ಮತ್ತು ದೈಹಿಕವಾಗಿ ವಿದ್ಯಾರ್ಥಿಗಳು ಆರೋಗ್ಯಕರವಾಗಿದ್ದು ತಮ್ಮ ಕೊಡುಗೆಯನ್ನು ಸಮಾಜಕ್ಕೆ ಕೊಡಬೇಕು ಎಂದು ಕರೆಯಿತ್ತರು.

       ಅವರು ಮಾತನಾಡುತ್ತಾ ತುಮಕೂರು ಜಿಲ್ಲೆ ಎರಡಕ್ಕೆ ಪ್ರಸಿದ್ಧವಾಗಿದೆ ಅಕ್ಷರ ದಾಸೋಹ ಮತ್ತು ಅನ್ನ ದಾಸೋಹಕ್ಕೆ. ಈ ದಾಸೋಹಗಳನ್ನು ಡಾ ಶ್ರೀ ಶ್ರೀ ಶಿವಕುಮಾರಸ್ವಾಮಿಗಳು ಮತ್ತು ಡಾ. ಹೆಚ್ ಎಂ ಗಂಗಾಧರಯ್ಯನವರು ಮಾಡಿ ತುಮಕೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ದಿರುವುದು ನಮಗೆಲ್ಲ ಸಂತಸದ ವಿಷಯ.

         ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಎಂ ಬಿ ಎ ವಿಭಾಗದ ಪ್ರಾಂಶುಪಾಲರಾದ ಡಾ. ಅಜಮತ್ ಉಲ್ಲಾ ಮಾತನಾಡುತ್ತಾ ಈ ವಿದ್ಯಾರ್ಥಿಗಳಿಗೆ ಇಂದು ಗುರಿಯಿರಬೇಕು, ಗುರಿಯಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದರು, ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಹೆಚ್ ಎನ್ ವಿಜಯೇಂದ್ರರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ ವೈ ಎಂ ರೆಡ್ಡಿರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕತಿಕ ಸ್ಪರ್ಧೆಗಳು ಜರುಗಿದವು.

         ಕಾರ್ಯಕ್ರಮದಲ್ಲಿ ಕುಮಾರಿ ತೇಜಸ್ವಿ ಪ್ರಾರ್ಥಿಸಿದರು, ಪ್ರೊ. ಎಸ್ ಎಸ್ ಆರಾಧ್ಯರವರು ಅತಿಥಿಗಳನ್ನು ಸ್ವಾಗತಿಸಿದರು, ಸುಜಾತ ಸಂಗಡಿಗರು ನಿರೂಪಿಸಿದರು, ನವೀನ್ ಮಸ್ಕಲ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link