ಕೆಂಪೇಗೌಡ ಬಡಾವಣೆಯ 4,971 ನಿವೇಶನಗಳ ಹಂಚಿಕೆ

ಬೆಂಗಳೂರು:

      ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಹುದಿನಗಳಿಂದ ನೆನೆ ಗುದಿಗೆ ಬಿದ್ದಿದ್ದ ಕೆಂಪೇಗೌಡ ಬಡಾವಣೆಯ ಎರಡನೇ ಹಂತದ 4,971 ನಿವೇಶನಗಳ ಹಂಚಿಕೆಗೆ ಚಾಲನೆ ನೀಡಿದರು.

      ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಂಚಿಕೆ ಮಾಡಿದರು.

       ಕುಮಾರ ಸ್ವಾಮಿ ಮಾತನಾಡಿ, ಕೆಂಪೇಗೌಡ ಬಡಾವಣೆಯಲ್ಲಿ ಒಟ್ಟು ಇದುವರೆಗೂ ಸುಮಾರು 17 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ ಈಗಾಗಲೇ ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇಂದು ಎರಡನೇ ಹಂತದಲ್ಲಿ 4971 ನಿವೇಶನ ಹಂಚುವ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ ಎಂದರು.

       ಭೂಸ್ವಾಧೀನಕ್ಕೊಳಪಟ್ಟ ಭೂ ಮಾಲೀಕರಿಗೆ 7600 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದುವರೆಗೂ 13900 ನಿವೇಶನಗಳನ್ನು ಹಂಚಿಕೆ ಮಾಡಿರುವುದಾಗಿ ಅವರು ಹೇಳಿದರು.

        ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಪ್ರಸ್ತುತ ಹಂಚಿಕೆ ಮಾಡಿದ ನಿವೇಶನದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.20 ನಷ್ಟು ನಿವೇಶನಕ್ಕೆ ಶೇ.50 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಈ ಭಾಗದಲ್ಲಿ ಮೂಲಸೌಕರ್ಯಕ್ಕೆ 2770 ಕೋಟಿ ರು. ನೀಡಲಾಗಿದೆ. ಪ್ರಸ್ತುತ ನಿವೇಶನ ಪಡೆದುಕೊಂಡ ಜನರಲ್ ಕ್ಯಾಟಗರಿಯವರು ಎರಡು ತಿಂಗಳೊಳಗಾಗಿ ಹಣ ಪಾವತಿ ಮಾಡದಿದ್ದರೆ ಶೇ.18 ರಷ್ಟು ಬಡ್ಡಿ ಹಾಕಲಾಗುತ್ತದೆ. ಈ ಅವಧಿಯೂ ಮೀರಿದರೆ ಶೇ.21 ರಷ್ಟು ಬಡ್ಡಿ ಹಾಕಲಾಗುವುದು. ಪರಿಶಿಷ್ಟ ಜಾತಿ ಅವರಿಗೆ ಮೂರು ವರ್ಷದ ಅವಧಿ ನೀಡಲಾಗಿದೆ ಎಂದರು.

        ಕೆಂಪೇಗೌಡ ಬಡಾವಣೆಗೆ ಒಟ್ಟು 15,220 ಅರ್ಜಿಗಳು ಸ್ವೀಕರಿಸಿದ್ದೆವು. ನಿವೇಶನ ಹಂಚಿಕೆಯಾಗದೇ ಇರುವವರಿಗೆ ಒಂದು ತಿಂಗಳೊಳಗಾಗಿ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಲಾಗುವುದು. ಸದ್ಯ ಹಂಚಿಕೆಯಾಗಿರುವ ನಿವೇಶನದಿಂದ ಬಿಡಿಎಗೆ 1,400 ಕೋಟಿ ರು. ಸಂದಾಯವಾಗಿದೆ ಎಂದರು.

        ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದ್ದು ಗಮನಕ್ಕೆ ಬಂದಿದೆ. ನಾನೂ ಹಿಂದೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ನೊರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗಂಭೀರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಬಜೆಟ್‍ನಲ್ಲಿ 50 ಕೋಟಿ ರು. ಮೀಸಲಿಡಲಾಗಿದೆ. ಈ ಸಮಸ್ಯೆ ಬಗೆಹರಿಸಲು ಇತರೆ ಮಾರ್ಗ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap