ಕೌಶಲ್ಯತೆ ಜ್ಞಾನರ್ಜನೆಯಿಂದ ಯಶಸ್ವಿ ಜೀವನ ಸಾದ್ಯ

ಚಿತ್ರದುರ್ಗ;

        ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ಸು ಸಾದಿಸಲು ಕೇವಲ ಪದವಿ ಸರ್ಟಿಪಿಕೇಟ್ ಪಡೆದರೆ ಉಪಯೋಗವಿಲ್ಲ ಅದರೊಂದಿಗೆ ನಿಮ್ಮಲ್ಲಿರುವ ಕೌಶಲ್ಯ ಜೌರ್ನರ್ಜನೆ, ಸಂಹವನ ಕಲೆ ಶಿಕ್ಷಣಕ್ಕೆ ತಕ್ಕಂತೆ ಸಾಮರ್ಥ ಅಭಿವೃದ್ಧಿಗೊಳಿಸಿಕೊಂಡು ಬದುಕಿನಲ್ಲಿ ಯಶಸ್ಸು ಸಾಧಿಸಬೇಕು, ನೀವು ಕೆಲಸ ಹುಡುಕಿಕೊಂಡು ಹೋಗುವಂತಾಗಬಾರದು ನೀವೇ ಕೆಲಸಕೊಡುವಂತರಾಗಬೇಕು ಎಂದು ಚಂದ್ರವಳ್ಳಿ ಎಸ್ ಜೆ ಎಂ ಕಾಲೇಜಿನ ಪ್ರಚಾರ್ಯರಾದ ಡಾ|| ಕೆ.ಸಿ.ರಮೇಶ್ ತಿಳಿಸಿದರು

        ಚಂದ್ರವಳ್ಳಿಯ ಎಸ್ ಜೆ ಎಂ ಕಾಲೇಜಿನ ಜಯದೇವ ಸಭಾಂಗಣದಲ್ಲಿ ಶನಿವಾರ ನಡೆದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಧ್ಯಾರ್ಥಿಗಳಿಗೆ “ಸ್ವಯಂ ಉದ್ಯೋಗ ಪ್ರೇರಣಾ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡಿ ಭಾರತವು 2022ಕ್ಕೆ ಜಗತ್ತಿನಲ್ಲಿಯೇ ಯುವಕರ ದೇಶವಾಗಿ ಹೊರಹೊಮ್ಮಲಿದೆ, ಯುವಕರೆ ದೇಶದ ಸಂಪತ್ತು, ಅಗಿರುವುದರಿಂದ ಈ ಸ್ವಯಂ ಉದ್ಯೋಗ ಪ್ರೇರಣಾ ಶಿಬಿರವನ್ನು

         ಸದುಪಯೋಗಪಡಿಸಿಕೊಂಡು ಶಿಕ್ಷಣ ಮುಗಿದ ಕೂಡಲೇ ಉತ್ತಮ ಉದ್ಯಮಿಗಳಾಗಿ ಹೊರಹೊಮ್ಮಬೇಕು ಉದ್ಯೋಗ ಮಾಡುವವರಿಗೆ ಖಾಸಗಿ ವಲಯದಲ್ಲಿ ಸಾಕಷ್ಟು ಕೆಲಸವಿದೆ ಕೌಶಲ್ಯತೆ ಇದ್ದರೇ ಅವರೇ ನಿಮ್ಮಲ್ಲಿಗೆ ಬಂದು ಕೆಲಸಕ್ಕೆ ಕರೆದು ಕೊಂಡು ಹೋಗುತ್ತಾರೆ ಇಂದು ನಿರುದ್ಯೋಗ ಸಮಸ್ಯೆ ಇರುವುದರಿಂದ ಚಿಕ್ಕ ಕೆಲಸಕ್ಕೆ ಡಾಕ್ಡರೇಟ್ ಪದವಿ ಪಡೆದವರು ಬರುತ್ತಿದ್ದಾರೆ

        ಹಲವರು ರ್ಯಾಂಕು ಬಂದಿರುತ್ತಾರೆ ಅದರೇ ಅವರಿಗೆ ಕೌಶಲ್ಯತೆ ಇಲ್ಲದಿದ್ದರೆ ಯಾವುದೇ ಪ್ರಯೋಜನವಿಲ್ಲ ವೃತ್ತಿ ಕೌಶಲ್ಯಗಳಿಸಿದರೇ ನಿರಂತರ ಉದ್ಯೋಗದಿಂದ ಇರಲು ಸಾದ್ಯವಿದ್ಯಾರ್ಥಿ ಜೀವನದಲ್ಲಿ ಮಾತ್ರ ಕಲಿಯಲು ಸಾದ್ಯ ನಂತರ ಜನಸಂಖ್ಯೆ ಹೆಚ್ಚಳದಿಂದ ಸರ್ಕಾರಿ ಕೆಲಸಕ್ಕೆ ಅವಲಂಬಿತರಾಗಿ ಸೋಮಾರಿಗಳಾಗುವ ಬದಲು ಸ್ವಯಂ ಉದ್ಯೋಗಕ್ಕೆ ಅದ್ಯತೆ ನೀಡಬೇಕೆಂದು ತಿಳಿಸಿದರು ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕೌಶಲ್ಯ ಅಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಜಂಟಿ ನಿರ್ದೇಶಕರಾದ ಆರ್.ಪಿ ಪಾಟೀಲ ಮಾತನಾಡಿ ಉದ್ಯಮಿಗಳು ಕೇವಲ ಜನ್ಮದಿಂದಲೇ ಆಗಿರುವುದಿಲ್ಲ ತರಬೇತಿಯಿಂದಲೂ ಉದ್ಯಮಿಗಳನ್ನು ಸೃಷ್ಟಿಸಬಹುದು ಎಂಬುದನ್ನು ಇಲಾಖೆ ಗಮನಿಸಿದ ಆ ನಿಟ್ಟಿನಲ್ಲಿ ಇಂಥ ಯುವಕರಿಗೆ ತರಬೇತಿ ನೀಡಿ ಅವರನ್ನು ಉದ್ಯಮಶೀಲರನ್ನಾಗಿ ಮಾರ್ಪಡಿಸುವುದೇ ನಮ್ಮ ಉದ್ದೇಶ ಎಂದು ನುಡಿದರು.

        ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಿಕೊಂಡು ಬದುಕಿನಲ್ಲಿ ಯಶಸ್ಸು ಸಾದಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಇ.ಡಿಸೆಲ್‍ನ ಸಂಯೋಜಕರಾದ ಎನ್.ಮಹೇಶ್ವರಪ್ಪ ಹಾಗೂ ಮುಕುಂದ ಹಾಗೂ ಜೆ.ಎಂ.ಐ.ಟಿ ಕಾಲೇಜಿನ ಸುರೇಶ್‍ರವರು ವ್ಯಕ್ತಿತ್ವ ನಿರ್ಮಾಣ, ಸಂವಹನ ಕಲೆ, ಉದ್ಯಮಶೀಲತೆ, ಸರ್ಕಾರದ ಪ್ರೋತ್ಸಾಹ ಬ್ಯಾಂಕುಗಳ ಸೌಲಭ್ಯ, ತರಬೇತಿ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.

       ಸಮಾರಂಭದಲ್ಲಿ ತಮ್ಮ ಅನಿಸಿಕೆ ವ್ಯಕ್ತಡಿಸಿ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಿಕೊಂಡು ಬದುಕಿನಲ್ಲಿ ಯಶಸ್ಸು ಸಾದಿಸಿದ ಬಿ.ಕಾಂ ಅಂತಿಮ ವಿದ್ಯಾರ್ಥಿಗಳಾದ ಮೋಹನ, ಕು.ಸ್ನೇಹರವರು ಈ ಶಿಬಿರವು ನಮ್ಮ ಕಣ್ಣು ತೆರೆಸಿದೆ, ಸಾಕಷ್ಟು ಮಾಹಿತಿ ಸಿಕ್ಕಿದೆ ಆತ್ಮಬಲ ವೃದ್ಧಿಸಿದೆ ಉದ್ಯಮಶೀಲ ಪ್ರೇರಣೆ ಸಿಕ್ಕಿದೆ ಎಂದು ಹೇಳಿದರು.

        ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೋ ಹೆಚ್ . ಕೆ ಶಿವಪ್ಪ ಸ್ವಾಗತಿಸಿದರು ಪ್ರೋ ಬಿ. ಎಂ.ಸ್ವಾಮಿ ವಂದಿಸಿದರು ಕಾರ್ಯಕ್ರಮದ ಸಂಯೋಜನಾಧಿಕಾರಿ ಆರ್.ವಿ ಹೆಗಡಾಳ್ ಕಾರ್ಯಕ್ರಮ ನಿರೂಪಿಸಿದರು

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap