ಬೆಂಗಳೂರು
ವಾಟರ್ ಟ್ಯಾಂಕರ್ ಇದ್ದ ಟ್ರ್ಯಾಕ್ಟರ್ ಹರಿದು ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ದೇವನಹಳ್ಳಿ ಸಂಚಾರ ಪೊಳೀಸ್ ಠಾಣಾ ವ್ಯಾಪ್ತಿಯ ಸೌತೆಗೌಡನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸೌತೆಗೌಡನ ಹಳ್ಳಿಯ ವಿಜಯಕುಮಾರ್ ಅವರ ಪುತ್ರಿ ವೇದಶ್ರೀ ಎಂದು ಮೃತ ಮಗುವನ್ನು ಗುರುತಿಸಲಾಗಿದೆ.ಸೌತೆಗೌಡನ ಹಳ್ಳಿಯ ಮನೆಯ ಬಳಿಯ ಕಿರಿದಾದ ರಸ್ತೆಯಲ್ಲಿ ಸಂಜೆ 5.50ರ ವೇಳೆ ವೇದಶ್ರೀ ಆಟವಾಡುತ್ತಿದ್ದಳು. ಈ ವೇಳೆ ಮಗುವನ್ನು ಗಮನಿಸದೆ ವಾಟರ್ ಟ್ಯಾಂಕ್‍ನ ಟ್ರ್ಯಾಕ್ಟರ್ ಹರಿದಿದೆ.
ಚಕ್ರಕ್ಕೆ ಸಿಕ್ಕಿ ಗಂಭೀರವಾಗಿ ಗಾಯಗೊಂಡಿದ್ದ ವೇದಶ್ರೀಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಪ್ರಕರಣ ದಾಖಲಿಸಿರುವ ದೇವನಹಳ್ಳಿ ಸಂಚಾರ ಪೆÇಲೀಸರು ಟ್ರಾಕ್ಟರ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಾ.ರಾ ಫಾತಿಮಾ ತಿಳಿಸಿದ್ದಾರೆ.
ಗಾರೆ ಕೆಲಸಗಾರ ಸಾವು
ಚಿಕ್ಕಜಾಲದ ಕಾಡಿಗೇನಹಳ್ಳಿಯಲ್ಲಿ ಮಂಗಳವಾರ ರಾತ್ರಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಸೈಕಲ್‍ನಲ್ಲಿ ಹೋಗುತ್ತಿದ್ದ ಗಾರೆ ಕೆಲಸಗಾರ ರಾಮಣ್ಣ ಎಂಬುವರು ಮೃತಪಟ್ಟಿರುವ ದುರ್ಘಟನೆನಡೆದಿದೆ. ಹುಣಸಮಾರನಹಳ್ಳಿಯ ಕುದುರೆಮುಖ ಮೂಲದ ರಾಮಣ್ಣ (50) ಅವರು ರಾತ್ರಿ 7ರ ವೇಳೆ ಕಾಡಿಗೇನಹಳ್ಳಿ ಬಳಿ ಕೆಲಸ ಮುಗಿಸಿಕೊಂಡು ಮನೆಗೆ ಸೈಕಲ್‍ನಲ್ಲಿ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.ಪ್ರಕರಣ ದಾಖಲಿಸಿರುವ ಚಿಕ್ಕಜಾಲ ಸಂಚಾರ ಪೆÇಲೀಸರು ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಫಾತಿಮಾ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








