ಸಣ್ಣ ಕೈಗಾರಿಕಾ ಸಚಿವರು ತಿಪಟೂರು ಭೇಟಿ

ತಿಪಟೂರು :

      ರಾಜ್ಯ ಸರ್ಕಾರದ ಸಣ್ಣಕೈಗಾರಿಕಾ ಸಚಿವರಾದ ಶ್ರೀನಿವಾಸ್ ರವರು ಇಂದು ಶಿವಮೊಗ್ಗಕ್ಕೆ ತೆರಳುವ ಮಾರ್ಗಮದ್ಯೆ ನಗರದ ಪ್ರವಾಸಿ ಮಂದಿರಕ್ಕೆ ಬೇಟಿ ನೀಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.

         ಕಲ್ಪತರು ನಾಡಾದ ತಿಪಟೂರಿನಲ್ಲಿ ತೆಂಗಿನ ಪಾರ್ಕ್ ನಿರ್ಮಿಸಲು ಸರ್ಕಾರದೊಂದಿಗೆ ಮಾತನಾಡುವುದಾಗಿ ತಿಳಿಸಿದ ಅವರು ತೆಂಗಿನನಾರಿ ಉದ್ಯಮವು ರಾಜ್ಯದಲ್ಲಿ ಸುಮಾರು 400 ಕೋಟಿಯಷ್ಟು ಉತ್ಪಾದನೆಯಾಗುತ್ತಿದೆ. ಆದರೆ ಇದನ್ನು ಆಮದು ಮಾಡಿಕೊಳ್ಳುತ್ತಿದ್ದ ಬೇರೆರಾಜ್ಯಗಳಲ್ಲು ಹೆಚ್ಚಿನ ನಾರು ಉತ್ಪಾದನೆಯಾಗುತ್ತಿದ್ದು ಧರ ಕುಸಿದಿದೆ. ನಾರಿನ ಉದ್ಯಮವನ್ನು ಸ್ಥಾಪಿಸುವವರಿಗೆ ಕೇಂದ್ರಸರ್ಕಾರದ ಸಾಲಸೌಲಭ್ಯವಿದ್ದು ಇದನ್ನು ಈ ಪ್ರದೇಶದ ಜನರು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.

          ತೆಂಗಿನ ಎಣ್ಣೆಯನ್ನು ಹೆಚ್ಚಾಗಿ ಬಳಸುವುದರಿಂದ ಕೊಬ್ಬರಿಯ ಬೆಲೆಯು ಹೆಚ್ಚಾಗುತ್ತದೆ ಮತ್ತು ತೆಂಗು ಕಲ್ಪವೃಕ್ಷವೆಂದು ಕರೆಯುತ್ತಾರೆ ಆದ್ದರಿಂದ ತೆಂಗಿನಿಂದ ಬರುವ ಎಲ್ಲಾ ಉತ್ಪನ್ನಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕರೆನೀಡಿದರು.

         ಸಣ್ಣಕೈಗಾರಿಕಾ ಇಲಾಖೆಯಿಂದ ನೀಡುವ ಸಾಲಯೋಜನೆಗಳಾದ ಮುದ್ರಾ ಯೋಜನೆ, ಪಿ.ಎಂ.ಇ.ಜಿ.ಪಿ ಮತ್ತು ಸಿ.ಎಂ.ಇ.ಜಿ.ಪಿ ಯೋಜನೆಯನ್ನು ಬಳಸಿಕೊಂಡು ನಿರುದ್ಯೋಗಿಗಳು ಮುಂದೆ ಬರಬೇಕು ಈ ಬಗ್ಗೆ ಬ್ಯಾಂಕಿನವರು ಸಾಲಕೊಡುವುದಿಲ್ಲವೆಂದರೆ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.

          ಹೇಮಾವತಿ ನೀರಿನಿಂದ ಕೇವಲ ಗುಬ್ಬಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಆದೇಶವಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ನಾನು ಗುಬ್ಬಿ ತಾಲ್ಲೂಕಿಗೆ ಮಾತ್ರ ಸಚಿವನಲ್ಲ ನಾನು ರಾಜ್ಯಕ್ಕೆ ಸಚಿವ, ನಾನು ಹೇಳಿರುವುದು ಜಿಲ್ಲೆಯಲ್ಲಿ ಈ ಬಾರಿ ಜನವರಿ ಅಂತ್ಯದವರೆಗೂ ನಾಲೆಯಲ್ಲಿ ನೀರು ಹರಿಯಲಿದ್ದು ಈ ನೀರನ್ನು ಸದ್ಭಳಕೆ ಮಾಡಿಕೊಂಡು ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಿಕೊಳ್ಳಲು ತಿಳಿಸಿದರು. ಈ ಸಂದರ್ಭದಲ್ಲಿ ಜೆ.ಡಿ.ಎಸ್ ಮುಖಂಡರಾದ ಆನಂದರವಿ, ವಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್ ಮುಂತಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link