ತುಮಕೂರು
ಗ್ರಾಮಾಂತರ ಕ್ಷೇತ್ರದಲ್ಲಿನ ಯುವಕರ ನಿರುದ್ಯೋಗ ಸಮಸ್ಯೆ ನಿವಾರಿಸುವ ಸಲುವಾಗಿ ಹೆಬ್ಬೂರು ಭಾಗದಲ್ಲಿ ಸಣ್ಣಕೈಗಾರಿಕ ವಲಯ ಸ್ತಾಪನೆಗೆ ಅವಕಾಶಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಶಾಸಕ ಡಿ ಸಿ ಗೌರೀಶಂಕರ್ ತಿಳಿಸಿದರು
ನಾಗವಲ್ಲಿ ಗ್ರಾಮದಲ್ಲಿಆಯೋಜಿತವಾಗಿದ್ದ ಕ್ರಿಕೇಟ್ ಟೂರ್ನಿಮೆಂಟ್ ಉದ್ಘಾಟಿಸಿ ಹೆಬ್ಬೂರು ಗ್ರಾಮದ ಬೆಸ್ಕಾಂ ಕಚೇರಿಯಲ್ಲಿ ಕಣಕುಪ್ಪೆ ಭಾಗದ ಲಿಂಕ್ ಲೈನ್‍ಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮಾಂತರ ಭಾಗದಲ್ಲಿ ಸಾವಿರಾರು ವಿದ್ಯಾವಂತರಿದ್ದಾರೆ,ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕ ಕೆಲಸ ಅರಸಿ ವಸಂತ ನರಸಾಪುರ ,ದಾಬಸ್ ಪೇಟೆ,ಬೆಂಗಳೂರಿಗೆ ತೆರಳುತ್ತಿದ್ದಾರೆ ಸ್ಥಳಿಯವಾಗಿ ಕೈಗಾರಿಕೆ ಸ್ತಾಪಿಸಿದರೆ ಇಂತಹ ಸಮಸ್ಯೆ ನಿವಾರಿಸಬಹುದಾಗಿದೆ ಈ ನಿಟ್ಟಿನಲ್ಲಿ ಹೆಬ್ಬೂರು ಭಾಗದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕಾ ವಲಯ ಸ್ಥಾಪಿಸಲು ಚಿಂತನೆ ನಡೆಸಲಾಗಿದ್ದು ,ಈ ಸಂಬಂಧ ಮುಖ್ಯಮಂತ್ರಿಗಳಿಗೆ ಹಾಗು ಸಣ್ಣ ಕೈಗಾರಿಕಾ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ,ಕೈಗಾರಿಕೆ ಸ್ಥಾಪನೆಗೆ 4 ಕಡೆ ಜಾಗ ನೋಡಲಾಗಿದೆ ಅಧಿಕಾರಿಗಳ ಜೊತೆ ಚರ್ಚಿಸಿ ಜಾಗ ಅಂತಿಮ ಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು
ಸಣ್ಣ ಕೈಗಾರಿಕಾ ವಲಯ ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ,ತಾಂತ್ರಿಕ ವಿಭಾದಲ್ಲಿ ಪದವಿ ಗಳಿಸಿದ ಯುವಕರು ಸ್ವಂತ ಉದ್ದಿಮೆ ಆರಂಭಿಸಬಹುದಾಗಿದೆ ,ಇದಕ್ಕೆ ಬೇಕಾಗುವ ಹಣಕಾಸಿನ ನೆರವನ್ನು ಬ್ಯಾಂಕ್ ಮುಖಾಂತರ ದೊರಕಿಸಲು ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು. ಕಾರ್ಖಾನೆಯಲ್ಲಿ ನೌಕರರಾಗಿ ದುಡಿಯುವ ಬದಲು ತಾವೇ ಕಾರ್ಖಾನೆ
ಮಾಲೀಕರಾಗಿ ಹತ್ತಾರು ಜನರಿಗೆ ಉದ್ಯೋಗವಕಾಶ ಕಲ್ಪಿಸಿ ಇತರರಿಗೆ ಮಾದರಿಯಾಗಿ ಬದುಕಲು ಸಹಾಯಕವಾಗುತ್ತದೆ ಎಂದರು.
ಹೆಬ್ಬೂರು ಗ್ರಾಮದ ಬೆಸ್ಕಾಂ ಕಚೇರಿಯಲ್ಲಿಕಣಕುಪ್ಪೆ ಭಾಗದ ಲಂಕ್ ಲೈನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ಬಳಿಕ ಹೆಬ್ಬೂರು ಗ್ರಾಮದಲ್ಲಿ ಕುಂದು ಕೊರತೆ ಸಭೆ ನಡೆಸಿ ಸ್ಥಳೀಯರ ಸಮಸ್ಯೆ ಆಲಿಸಿದರು, ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರು ಶಾಸಕರ ಬಳಿ ನಿವೇದಿಸಿಕೊಂಡರು.
ಕೋಡಿಮುದ್ದನಹಳ್ಳಿ ಗ್ರಾಮದಲ್ಲಿ 220 ಕೆ ವಿ ಪವರ್ ಸ್ಟೇಷನ್ ಸ್ಥಾಪನೆಯಾದ ಬಳಿಕ ಈ ಭಾಗದ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ .ಹೆಚ್ ವಿ ಡಿ ಎಸ್ ಯೋಜನೆಯಡಿ ರೈತರಿಗೆ ಸ್ವಂತ ವಿದ್ಯುತ್ ಪರಿವರ್ತಕ ಅಳವಡಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಶೀಘ್ರವಾಗಿ ಈ ಯೋಜನೆ ಆರಂಭಿಸಲಾಗುವುದು ಎಂದರು ಇದೇ ವೇಳೆ ಕ್ರೀಡೆ ಪ್ರೋತ್ಸಾಹಕ್ಕಾಗಿ ನಾಗವಲ್ಲಿ ಅಂಬಿವಿಷ್ಣು ಕ್ರಿಕೆಟ್ ಟೂರ್ನಿಮೆಂಟ್ ಗೆ 60000 ರೂಗಳ ವೈಯಕ್ತಿಕ ಧನಸಹಾಯ ನೀಡಿದರು
ಈ ವೇಳೆ ಜೆಡಿಎಸ್ ಮುಖಂಡರಾದ ಕಾಮೇಗೌಡ, ಮಾಜಿ ಎ ಪಿ ಎಂ ಸಿ ಅಧ್ಯಕ್ಷ ವಿಜಯ್ ಕುಮಾರ್, ವೈ ಟಿ ನಾಗರಾಜು, ತಾಲ್ಲೂಕು ಯುವ ಅಧ್ಯಕ್ಷ ಸುವರ್ಣಗಿರಿಕುಮಾರ್,ಹರಳೂರು ರುದ್ರೇಶ್.ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರದೀಪ್ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ