ಬೆಂಗಳೂರು:
ಪೋರ್ಚುಗಲ್‌ನಲ್ಲಿ ನಡೆದ ಡ್ಯಾನ್ಸ್ ವರ್ಲ್ಡ್ ಕಪ್‌ನಲ್ಲಿ ಕನ್ನಡ ಕಿರುತೆರೆ ತಾರೆ ನಿಶಾ ಚಿನ್ನದ ಪದಕ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ 51ಕ್ಕೂ ಹೆಚ್ಚು ದೇಶದ ಸ್ಪರ್ಧಿಗಳು ಭಾಗಿಯಾಗಿದ್ದರು. ನಿಶಾ ಅವರು ಶ್ರೀ ವಿಷ್ಣು ದಶಾವತಾರ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಕಿರುತೆರೆ ತಾರೆ ನಿಶಾ ಡ್ಯಾನ್ಸ್ ವರ್ಲ್ಡ್ ಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಪೋರ್ಚುಗಲ್‌ನ ಬ್ರಾಗಾದಲ್ಲಿ ನಡೆದ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿವ ಮೂಲಕ ಚಿನ್ನದ ಪದಕ ಅವರ ಕೊರಳಿಗೆ ಬಿದ್ದಿದೆ. ನಿಶಾ ಕೊನೆಯದಾಗಿ ಅಭಿನಯಿಸಿದ ಕನ್ನಡದ ಪೌರಾಣಿಕ ಧಾರಾವಾಹಿ ‘ಶ್ರೀ ವಿಷ್ಣು ದಶಾವತಾರ’.
ನಿಶಾ ಅವರು ಶಾಸ್ತ್ರೀಯ ನೃತ್ಯಪಟುವಾಗಿದ್ದು ತಮ್ಮ ಡ್ಯಾನ್ಸ್ ಪಾರ್ಟನರ್ ಅನಿರುದ್ಧ್ ಜತೆಗೆ ಭಾರತದನ್ನು ಪ್ರತಿನಿಧಿ ಸಿದ್ದಾರೆ. ಜಾನಪದ ಡ್ಯುಯಟ್ ರಾಷ್ಟ್ರೀಯ ವಿಭಾಗದಲ್ಲಿ ಈ ಜೋಡಿ ಚಿನ್ನದ ಪದಕ ಗೆದ್ದಿರುವುದು ವಿಶೇಷ.
ಅಂತಾರಾಷ್ಟ್ರೀಯ ಡ್ಯಾನ್ಸ್ ಸ್ಪರ್ಧೆಯಲ್ಲಿ 51ಕ್ಕೂ ಹೆಚ್ಚು ದೇಶದ ನೃತ್ಯ ಪಟುಗಳು ಭಾಗಿಯಾಗಿದ್ದರು. ಒಟ್ಟು 13 ವಿವಿಧ ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಿತು. ಆಡಿಷನ್‍ಗಾಗಿಯೇ ಸುಮಾರು 20,000 ಮಂದಿ ಹಾಜರಾಗಿದ್ದರು. ಇಷ್ಟೆಲ್ಲಾ ಸ್ಪರ್ಧೆಯ ನಡುವೆ ನಿಶಾ ಚಿನ್ನದ ಪದಕ ಗೆದ್ದಿರುವುದು ಅವರ ಪ್ರತಿಭೆಗೆ ಕನ್ನಡಿ ಹಿಡಿಯುತ್ತದೆ. ವಿಷ್ಣು ದಶಾವತಾರ ಧಾರಾವಾಹಿ ಮುಗಿದ ಬಳಿಕ ನಿಶಾ ಅವರು ತಮಿಳು ಕಿರುತೆರೆಯಲ್ಲಿ ಬಿಝಿಯಾಗಿದ್ದಾರೆ