ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ..!

ಕೊರಟಗೆರೆ

    ಅಂಗನವಾಡಿ ಕೇಂದ್ರಗಳಲ್ಲಿ ಹಳೆಯ ಮಾದರಿಯಲ್ಲಿ ಮಾಹಿತಿಯನ್ನು ಪುಸ್ತಕಗಳಲ್ಲಿ ದಾಖಲಿಸುವ ಬದಲು ಹೊಸದಾಗಿ ಎಲ್ಲಾ ಮಾಹಿತಿಗಳನ್ನು ಕ್ಷಣಾಧರ್ದಲ್ಲಿ ದಾಖಲಿಸಲು ಹಾಗೂ ವೀಕ್ಷಿಸಲು ಹೊಸ ತಂತ್ರಾಂಶದ ಮೂಲಕ ಡಿಜಿಟಲೀಕರಣ ಮಾಡುವ ಉದ್ದೇಶದಿಂದ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಫೋನ್ ವಿತರಿಸಲಾಗುತ್ತಿದೆ ಎಂದು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಯೋಜನಾಧಿಕಾರಿ ಅಂಬಿಕಾ ತಿಳಿಸಿದರು.

    ತಾಲ್ಲೂಕಿನ 291 ಅಂಗನವಾಡಿ ಕೇಂದ್ರಗಳಿಗೆ ಸ್ನೇಹ ತಂತ್ರಾಂಶ ಇಂಕ್ರಿಮೆಂಟ್ ಲರ್ನಿಂಗ್ ಅಪ್ರೋಚ್ ಮೂಲಕ ಜಿಪಿಎಸ್ ಆರೋಗ್ಯ ಸೇವೆಗಳು ಹಾಗೂ ಹಲವು ಸಾಫ್ಟ್‍ವೇರ್ ತಂತ್ರಾಂಶಗಳು ಒಳಗೊಂಡಂತೆ ಮಕ್ಕಳ ಮಾನಸಿಕ ವರದಿ, ಜನ್ಮ ದಿನಾಂಕ, ತಂದೆ-ತಾಯಿಗಳ ಹೆಸರು, ಮಕ್ಕಳ ತೂಕ ಮತ್ತು ಎತ್ತರ, ಆಧಾರ್ ಕಾರ್ಡ್ ನಂಬರ್, ರೇಷನ್ ಕಾಡ್ರ್À, ಬಾಣಂತಿಯರ ಪೂರ್ಣ ಮಾಹಿತಿ ಸೇರಿದಂತೆ ಅಂಗನವಾಡಿಗಳಿಗೆ ಸೇರಿದ ಎಲ್ಲಾ ಮಾಹಿತಿಗಳನ್ನು ಶೀಘ್ರವಾಗಿ ಪಡೆಯಲು ಈ ಸ್ಮಾರ್ಟ್ ಫೋನ್ ತುಂಬಾ ಸಹಕಾರಿಯಾಗಲಿದೆ ಎಂದರು

    ಅಂಗನವಾಡಿ ಕೇಂದ್ರಗಳಲ್ಲಿ ಈ ಹಿಂದೆ ಕಡತಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು. ಆದರೆ ಈಗ ಹೊಸ ತಂತ್ರಾಂಶ ಆಧುನೀಕರಣದಿಂದ ಬೆರಳ ತುದಿಯಲ್ಲಿ ಮಾಹಿತಿಗಳನ್ನು ನಿಖರವಾಗಿ ಸುಲಭವಾಗಿ ದಾಖಲಿಸಲು ಹಾಗೂ ವೀಕ್ಷಿಸಲು ತುಂಬ ಅನುಕೂಲವಾಗಿದೆ. ಇದರಿಂದ ಅಭಿವೃದ್ದಿ ಕಾರ್ಯಗಳು ತುಂಬಾ ಯಶಸ್ವಿಯಾಗಿ ಪ್ರಗತಿಯಲ್ಲಿ ಸಾಗಲಿವೆ ಎಂದು ಅಭಿಪ್ರಾಯಪಟ್ಟರು.
ಪೋಷಣ ಅಭಿಯಾನದ ತಾಲ್ಲೂಕು ಸಂಯೋಜಕ ಮೋಹನ್‍ಕುಮಾರ್ ಮಾತನಾಡಿ, ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ದಿಯತ್ತ ಸಾಗಬೇಕು. ವೈಜ್ಞಾನಿಕತೆಯಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ತಿಳಿಸಿದರು.

   ಪೋಷನ್ ತಾಲ್ಲೂಕು ಯೋಜನಾ ಸಹಾಯಕರಾದ ದಿವ್ಯಶ್ರೀ ಅಂಗನವಾಡಿ ಕಾರ್ಯಕರ್ತೆಯರಿಗೆ ಡಿಜಿಟಲ್ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಮೇಲ್ವಿಚಾರಕರಾದ ನಾಗರತ್ನಮ್ಮ, ಸುರ್ಪಿತ, ರತ್ನಮ್ಮ, ಈರಮ್ಮ, ಅನಿತಾಲಕ್ಷ್ಮೀ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap