ಸನ್ಮಾನಗಳು ಹಾಗೂ ಪಡೆದ ಪದವಿಗಳು ವ್ಯಕ್ತಿಯ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ

ಶಿರಾ:

      ನಾವು ಪಡೆದ ಯಾವುದೇ ಸನ್ಮಾನಗಳು ಹಾಗೂ ಪದವಿಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆಯಾದ್ದರಿಂದ ನಾವುಗಳು ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗುವಂತಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ||ಹೊನ್ನೇಶ್‍ಗೌಡ ಹೇಳಿದರು.
ಶಿರಾ ನಗರದ ನಿವೃತ್ತ ಪ್ರಾಚಾರ್ಯ ಬಿ.ಗೋವಿಂದಪ್ಪ ಅವರು ಸ್ವಿಡ್ಜರ್‍ಲ್ಯಾಂಡಿನ ಜಿನೆವಾದ ಭಾರತ್ ವರ್ಚುಯಲ್ ಯೂನಿವರ್ಸಿಟಿ ಫಾರ್ ಪೀಟ್ ಅಂಡ್ ಎಜುಕೇಷನ್ ವತಿಯಿಂದ ಪಡೆದ ಗೌರವ ಡಾಕ್ಟರೇಟ್ ಪದವಿಯ ಹಿನ್ನೆಲೆಯಲ್ಲಿ ಶ್ರೀ ಭಗವಾನ್ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿ.ಜಿ. ಅಭಿಮಾನಿಗಳ ಸಹಯೋಗದಲ್ಲಿ ನಡೆದ ಅಭಿನಂಧನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ನಮ್ಮದು ಬರಪೀಡಿತ ಪ್ರದೇಶ, ಇಲ್ಲಿ ಶೈಕ್ಷಣಿಕತೆಗೆ ವಿಶೇಷ ಒತ್ತು ನೀಡುವುದು ಅನಿವಾರ್ಯವಾಗಿದೆ. ಅನೇಕ ಪ್ರತಿಭಾವಂತರು ತಮ್ಮದೇ ಆದ ಗುರಿಯನ್ನು ಸಾಧಿಸುವಲ್ಲಿ ಯಶ ಕಾಣುತ್ತಿರುವುದು ಈ ಬರದ ಬೀಡಿನ ಸಾಧನೆಯೂ ಆಗಿದೆ. ನಿವೃತ್ತ ಪ್ರಾಚಾರ್ಯ ಈ ಹಿಂದೆ ಬಿ.ಗೋವಿಂದಪ್ಪ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಉಪನ್ಯಾಸಕರಾಗಿ, ವಕೀಲರು ಹಾಗೂ ಓರ್ವ ರಾಜಕಾರಣಿಯೂ ಆಗಿ ಸಮಾಜಮುಖಿ ಕೆಲಸ ಮಾಡಿದ್ದಾರೆ ಎಂದರು.

      ಪ್ರೆಸಿಡೆನ್ಸಿ ಶಾಲಾ ಸಂಸ್ಥಾಪಕ ಅಧ್ಯಕ್ಷ ಚಿದಾನಂದ್ ಎಂ.ಗೌಡ ಮಾತನಾಡಿ ಬಿ.ಗೋವಿಂದಪ್ಪ ಅವರು ಬಿ.ಜಿ. ಎಂದೇ ಖ್ಯಾತರಾಗಿದ್ದು ತಮ್ಮ ಬದುಕಿನಲ್ಲಿ ಅನೇಕ ಕ್ಷೇತ್ರಗಳ ಒಳ ಹೊಕ್ಕೆ ಸಾಧನೆಗೈದಿದ್ದಾರೆ. ಎಲ್ಲರೊಂದಿಗೂ ಬೆರೆತು ನಮ್ಮಲ್ಲೊಬ್ಬರಾಗಿಯೂ ಬದುಕುವ ಅವರ ಜೀವನದ ಪರಿಪಾಠ ನಿಜಕ್ಕೂ ಶ್ಲಾಘನಾರ್ಹವಾದುದು ಎಂದರು.

       ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ ಪದವಿಗಳು ಗರವವನ್ನು ಹೆಚ್ಚಿಸುತ್ತವೆಯಲ್ಲದೆ ಅಂತಹ ಗೌರವಗಳನ್ನು ಹೆಚ್ಚಿಸಿಕೊಳ್ಳುವಂತೆಯೂ ನಾವು ಕಾರ್ಯೊನ್ಮುಖರಾಗಬೇಕು. ಪ್ರಶಸ್ತಿ, ಪದವಿಗಳು ಎಲ್ಲರಿಗೂ ಸಿಗುವುದಿಲ್ಲ. ಅವುಗಳ ಹಿಂದೆ ಸಾಧನೆಯೂ ಇರುತ್ತದೆ ಎಂಬುದನ್ನು ಅರಿಯಬೇಕು. ಈ ನಿಟ್ಟಿನಲ್ಲಿ ಡಾ.ಬಿ.ಗೋವಿಂದಪ್ಪ ಓರ್ವ ಸಾಧಕರೂ ಹೌದು ಎಂದರು.

     ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಚಿಕ್ಕಣ್ಣ ಯಣ್ಣೇಕಟ್ಟೆ, ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ನಗರಸಭೆಯ ಮಾಜಿ ಅಧ್ಯಕ್ಷೆ ಶ್ರೀಮತಿ ಜ್ಞಾನಪೂರ್ಣಮ್ಮ, ಜೆ.ಎನ್.ರಾಜಸಿಂಹ, ಆರ್.ವಿ.ಪುಟ್ಟಕಾಮಣ್ಣ, ಎಸ್.ಕೆ.ರಾಮಚಂದ್ರಗುಪ್ತ, ಲಕ್ಷ್ಮೀನಾರಾಯಣ್, ಶ್ರೀಧರ್, ಶ್ರೀಮತಿ ರತ್ನಾ ಗೋವಿಂದ್, ಲಕ್ಷ್ಮಣಪ್ಪ, ಅಕ್ಬರ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು. ಗಿರಿಧರ್ ಸ್ವಾಗತಿಸಿ, ತುಳಸಿರಾಮ್ ನಿರೂಪಿಸಿ, ಧರಣಿಕುಮಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು.

      ಗೌರವ ಡಾಕ್ಟರೇಟ್ ಪುರಸ್ಕತರಾದ ಡಾ.ಬಿ.ಗೋವಿಂದಪ್ಪ ಅವರನ್ನು ಬಿ.ಜೆ. ಅಭಿಮಾನಿ ಬಳಗದ ವತಿಯಿಂದ ಅಭಿನಂಧಿಸ ಲಾಯಿತಲ್ಲದೆ ತಾಲ್ಲೂಕಿನ ವಿವಿಧ ಸಂಘಟನೆಗಳ ವತಿಯಿಂದ ಅವರನ್ನು ಅಭಿನಂಧಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ