ಬೆಂಗಳೂರು
ಪೊಲೀಸ್ ಪೇದೆಗಳ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಸಿಕ್ಕಿಬಿದ್ದ ಕಿಂಗ್ ಪಿನ್ ಶಿವಕುಮಾರ್ ಅಲಿಯಾಸ್ ಗೂರೂಜಿಯ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿ ಬಸವರಾಜ್ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.
ಗೂರೂಜಿಯಿಂದ ಪ್ರಶ್ನೆ ಪತ್ರಿಕೆ ಪಡೆದಿದ್ದ 110 ಮಂದಿಯ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿದೆ. ಪೇದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ದೊರೆಯಲಿವೆ ಎನ್ನುವ ದುರಾಸೆಯಲ್ಲಿ ಹಲವಾರು ವಿದ್ಯಾರ್ಥಿಗಳು ಶಿವಕುಮಾರಸ್ವಾಮಿ ಬಳಿ ಹಣ ಕೊಟ್ಟು ಪ್ರಶ್ನೆ ಪತ್ರಿಕೆ ಪಡೆದಿದ್ದರು.
ಪ್ರಶ್ನೆ ಪತ್ರಿಕೆ ಪಡೆದವರ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿದ್ದು ಅವರು ನೀಡಿರುವ ಜಾಲದಲ್ಲಿ ಸಿಲುಕಿರುವ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ ಮತ್ತೋರ್ವ ಪ್ರಮುಖ ಆರೋಪಿ ಬಸವರಾಜ್ ತಲೆಮರೆಸಿಕೊಂಡಿದ್ದು ಈತ ಸುಮಾರು 3 ಸಾವಿರ ಪ್ರಶ್ನೆ ಪತ್ರಿಕೆಗಳನ್ನ ಜೆರಾಕ್ಸ್ ಮಾಡಿರುವ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ.
ಹಲವರ ಕೈವಾಡ
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಹಿಂದೆ ಜೈಲು ಸೇರಿದ್ದ ಶಿವಕುಮಾರ್ ಇದೀಗ ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ್ದಾನೆ. ಈತನ ಈ ಕೃತ್ಯಗಳ ಹಿಂದೆ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಇರುವ ಗುಮಾನಿ ಸಿಸಿಬಿಗೆ ಲಭ್ಯವಾಗಿದೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ಶಿವಕುಮಾರ್ ವಿರುದ್ಧ ಪ್ರಬಲ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
