ಸಾಮಾಜಿಕ ಪರಿಶೋಧನೆಯ ಗ್ರಾಮಸಭೆಯ ಕಾರ್ಯಕ್ರಮ

ಚೇಳೂರು

      ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿ,ಸಾರ್ವಜನಿಕರಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಒಳ್ಳೆಯ ಅವಕಾಶಗಳಿದೆ. ಅದರ ಸದೋಪಯೋಗವನ್ನು ಅರ್ಹರು ಪಡೆದುಕೊಳ್ಳಬಹುದಾಗಿದೆ ಎಂದು ಎನ್‍ಆರ್‍ಇಜಿ ಯ ತಾಲ್ಲೂಕು ಸಂಯೋಜಕ ಹೋನ್ನಪ್ಪ ಹೇಳಿದರು

       ಇವರು ಚೇಳೂರು ಹೋಬಳಿ ಬಿದರೆ ಗ್ರಾಮ ಪಂಚಾಯತಿಯ ಆವರಣದಲ್ಲಿ 2018-19ನೇ ಸಾಲಿನ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಎರಡನೇ ಹಂತದ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತ ಉದ್ಯೋಗ ಖಾತರಿ ಯೋಜನೆಯಲ್ಲಿ ಅರ್ಹ ಪಲಾನುಭವಿಗಳು ಕೆಲಸದ ಬಗ್ಗೆ ಅರ್ಜಿ ನೀಡಿದರೆ ಅಂತಹ ಕುಟುಂಬಗಳಿಗೆ ಕೆಲಸವನ್ನು ಹಂತ ಹಂತವಾಗಿ ನೀಡಲಾಗುತ್ತದೆ. ಇದರಲ್ಲಿ ಮನೆಗಳು.ಶೌಚಾಲಯಗಳು ನಿರ್ಮಾಣ ಮಾಡಿಕೊಳ್ಳುವುದಕ್ಕೆ.

     ಜಮೀನಿನಲ್ಲಿ ಬರುವಂತಹ ಕೆಲಸಗಳು.ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡೆಯುವುದು. ತೋಟಗಾರಿಕೆ ಇಲಾಖೆಯಿಂದ ತೋಟಗಳಿಗೆ ಸಹಾಯ.ಹೈನುಗಾರಿಕೆ ಮಾಡುವುದಕ್ಕೆ ಸಹಾಯ.ರೈತರು ತಮ್ಮ ಜಮೀನಿನಲ್ಲಿ ಹಲವು ಕೃಷಿ ಚಟುವಟಿಕೆಗಳು.ಕೃಷಿ ಹೊಂಡ ಹಾಗೂ ಅನೇಕ ರೀತಿಯ ಪ್ರಯೋಜನವನ್ನು ಸಹ ರೈತರು ಈ ಯೋಜನೆಯ ಮುಖಾಂತರ ಪಡೆದುಕೊಳ್ಳ ಬಹುದು. ಹೀಗೆ ಅನೇಕ ರೀತಿಯ ಸೌಲಭ್ಯಗಳನ್ನು ಪಡೆಯಲು ಅರ್ಹ ಪಲಾನುಭವಿಗಳು ಸೂಕ್ತವಾದ ದಾಖಲೆಗಳನ್ನು ಸಂಬಂಧ ಪಟ್ಟವರಿಗೆ ನೀಡಿ ನೋದಣಿ ಮಾಡಿಕೊಂಡು ಈ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸೌಕರ್ಯ ಪಡೆಯಬಹುದು. ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿಗಳನ್ನು ನೀಡಲು ನಾವು ಸದಾ ಸಿದ್ದವಾಗಿದ್ದೇವೆ ಎಂದರು

        ಈ ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಗ್ರಾಮದ ಹಿರಿಯರಾದ ಸೋಮಶೇಖರ್ ವಹಿಸಿದ್ದರು, ಗ್ರಾಪಂ ಅಧ್ಯಕ್ಷ ರಾಮಕೃಷ್ಣಯ್ಯ,ಮಾಜಿ ಗ್ರಾಪಂ ಅಧ್ಯಕ್ಷರಾದ ಮೈಲಾರಪ್ಪ,ಸಿದ್ದಲಿಂಗಪ್ಪ,ಉಮೇಶ್,ಸದಸ್ಯರಾದ ಶಿವಲಿಂಗಯ್ಯ , ರಮೇಶ್ , ಶಾರದಮ್ಮ , ಸುಶೀಲಮ್ಮ , ಪಿಡಿಒ . ಎಂ . ಕೆ .ರವಿ,ತಾಂತ್ರಿಕ ಸಂಯೋಜಕಿ ಲಾವಣ್ಯ,ಅಂಗನವಾಡಿ ಕಾರ್ಯಕತೆರ್ಯರು,ಗ್ರಾಮಾಸ್ಥರು. ಹಾಗೂ ಇತರರು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link