ತಿಪಟೂರು
ಗುರುವಾರ ಡಿ.ಸಿ.ಸಿ ಬ್ಯಾಂಕ್ ಮುಂದೆ ಜನರು ಸಾಮಾಜಿಕ ಅಂತರವನ್ನು ಮರೆತು ನಿಂತಿದ್ದರು. ಇದನ್ನು ಕಂಡ ಕೆಲವರು ಎಷ್ಟು ಹೇಳಿದರೂ, ನಾವು ಹಣವನ್ನು ತೆಗೆದುಕೊಂಡು ಹೋಗಬೇಕು, ಇಲ್ಲದಿದ್ದರೆ ಹಣ ಹಿಂದಿರುಗಿ ಹೋಗುತ್ತದೆ ಎಂದು ವಯೋ ವೃದ್ದರೊಬ್ಬರು ತಿಳಿಸಿದರು. ಇದರ ಬಗ್ಗೆ ಅವರಿಗೆ ತಿಳಿಸಿ ಹೇಳಿ ಹಣವು ಒಂದು ಬಾರಿ ಖಾತೆಗೆ ಹಾಕಿದದರೆ ಸೂಕ್ತ ಕಾರಣವಿಲ್ಲದೆ ಅದನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ.
ನೀವೀಗ ಸ್ವಲ್ಪ ದೂರ ದೂರ ನಿಂತು ಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ತಿಳಿಸಿದರೂ ನಾವು ನಿಲ್ಲುತ್ತೇವೆ ಆದರೆ ಹಿಂದಿನವರು ನಮ್ಮ ಮೇಲೆ ಬೀಳುತ್ತಾರೆ ಎಂದರು. ಈ ಎಲ್ಲದರ ಮಧ್ಯೆ ಆರಕ್ಷಕರಿಗೆ ಯಾರೋ ಸುದ್ದಿ ಮುಟ್ಟಿಸಿದ್ದ ತಕ್ಷಣವೇ ಸ್ಥಳಕ್ಕಾಗಮಿಸಿದ ಆರಕ್ಷಕರು ಜನರನ್ನು ಸಾಮಾಜಿಕ ಅಂತರದಲ್ಲಿ ನಿಲ್ಲಿಸುವ ಕಾರ್ಯ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ