ದುರ್ಬಳೆಕೆಯಾಗುತ್ತಿರುವ ಸಾಮಾಜಿಕ ಜಾಲತಾಣಗಳು…!!!

ಬೆಂಗಳೂರು

      ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿ ಬೆಳೆದಿರುವ ಸಾಮಾಜಿಕ ಜಾಲತಾಣವು ಉಪಯೋಗಕ್ಕಿಂತ ದುರ್ಬಳಕೆಯೇ ಹೆಚ್ಚಾಗುತ್ತಿದ್ದುಹಣ ಮಾಡುವ ದಂಧೆಯಾಗಿ ಬಳಕೆಯಾಗುತ್ತಿದೆ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ.

       ಪಬ್‍ಜಿ ಗೇಮ್‍ನಿಂದ ಹಿಡಿದು ಟಿಕ್‍ಟಾಕ್ ತನಕ ಎಲ್ಲರಲ್ಲೂ ಕ್ರೇಜ್ ಸೃಷಿ ಮಾಡುತ್ತಿರುವ ಸಾಮಾಜಿಕ ಜಾಲತಾಣವು ಸದ್ದಿಲ್ಲದೆ ತನ್ನ ಕಬಂಧಬಾಹು ಚಾಚಿದೆ. ಹುಡುಗಿಯರ ಹೆಸರಿನಲ್ಲಿ ಫೇಸ್‍ಬುಕ್, ಇನ್ಸ್‍ಟಾಗ್ರಾಂ, ಟಿಕ್ ಟಾಕ್ ಖಾತೆ ತೆರೆಯುವ ಅಪರಿಚಿತರು, ಕಣ್ಣು ಕುಕ್ಕುವಂತಹ ಯಾರದ್ದೋ ಫೋಟೋ ಹಾಗೂ ವೀಡಿಯೋಗಳನ್ನು ಅಪ್‍ಲೋಡ್ ಮಾಡುತ್ತಾರೆ.

      ಬಳಿಕ ಆ ಪೋಸ್ಟ್‍ಗಳಿಗೆ ಹೆಚ್ಚು ಪ್ರತಿಕ್ರಿಯಿಸುವವರನ್ನ ಸಂಪರ್ಕಿಸಿ ಬಣ್ಣ ಬಣ್ಣದ ಮಾತುಗಳನ್ನು ಮಾತನಾಡುವುದು, ಬಳಿಕ ನೇರ ಡೀಲ್ ಕುದುರಿಸುವುದು ಇವರ ಕೆಲಸ. ಅದನ್ನೆ ನಿಜ ಎಂದುಕೊಂಡು ಲಡ್ಡು ಬಂದು ಬಾಯಿಗೆ ಬಿತ್ತು ಎಂದು ನಂಬುವವರು, ಖದೀಮರು ಹೇಳಿದಂತೆ ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಂತೆ, ಅಲ್ಲಿಂದ ಜಾರಿಕೊಳ್ಳುವುದೇ ಇವರ ಕೆಲಸ. ಹಣ ಸಿಕ್ಕ ಬಳಿಕ ಆ ವ್ಯಕ್ತಿ ನಿಮಗೆ ಸಂಪರ್ಕಕ್ಕೆ ಸಿಗುವುದೇ ಇಲ್ಲ. ಅಸಲಿಗೆ ಅಲ್ಲಿ ಯಾವ ಹುಡುಗಿಯೂ ಇರುವುದಿಲ್ಲ.

     ಸುಳ್ಳಿನಿಂದ ಹಣ ಸಂಗ್ರಹಿಸುವ ದಂಧೆಯು ಒಂದೆಡೆಯಾದರೆ. ಮತ್ತೊಂದೆಡೆ ವ್ಯವಸ್ಥಿತ ವೇಶ್ಯಾವಾಟಿಕೆಗೂ ಸಹ ಸಾಮಾಜಿಕ ತಾಣಗಳು ಬಳಕೆಯಾಗುತ್ತಿವೆ. ಯಾರೊಬ್ಬರೂ ಪ್ರಶ್ನಿಸದ, ಯಾರು ಯಾರನ್ನ ಬೇಕಾದರೂ ಸಂಪರ್ಕಿಸಬಹುದಾದ ಆಯ್ಕೆ ಇರುವುದರಿಂದ ಮತ್ತೇರಿಸುವಂತೆ ಅಶ್ಲೀಲ ಮಾತುಕತೆ, ವೀಡಿಯೋ ಸಂಭಾಷಣೆಗೆ ಸಿದ್ಧರಿದ್ದೀವಿ ಎಂದು ನೇರವಾಗಿ ಆಫರ್ ಮಾಡಿ ಡೀಲ್ ಕುದುರಿಸಿಕೊಳ್ಳಲು ಸಹ ಇದೇ ಸಾಮಾಜಿಕ ತಾಣಗಳು ಬಳಕೆಯಾಗುತ್ತಿವೆ.

      ಇದಕ್ಕೆ ಸಾಕ್ಷಿ ಎಂಬಂತೆ ಫೇಸ್‍ಬುಕ್ ಸ್ನೇಹಿತ-ಸ್ನೇಹಿತೆಯಿಂದ ಮೋಸ ಹೋಗಿದ್ದೇವೆ, ಕಿರುಕುಳ ಅನುಭವಿಸುತ್ತಿದ್ದೇವೆ ಅನ್ನೋ ಸಾಕಷ್ಟು ದೂರುಗಳು ಇತ್ತೀಚಿಗೆ ಪೊಲೀಸ್ ಠಾಣೆಯ ಕದ ತಟ್ಟಿವೆ. ಯುವತಿಯೊಬ್ಬಳು ಟಿಕ್ ಟಾಕ್‍ನಲ್ಲಿ ಹರಿಬಿಟ್ಟಿದ್ದ ವೀಡಿಯೋವನ್ನು ಟ್ರೋಲ್ ಮಾಡಿದ್ದು ಇದಕ್ಕೆ ಮತ್ತೊಂದು ಸಾಕ್ಷಿಯಾಗಿದೆ

      ಸಾಮಾಜಿಕ ಜಾಲತಾಣದಲ್ಲಿ ಟಿಕ್ ಟಾಕ್ ನಂತಹ ಹಲವು ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಯುವ ಜನಾಂಗದವರ ದೌರ್ಬಲ್ಯ ಅರ್ಥ ಮಾಡಿಕೊಂಡು ಅವರಿಂದ ವೀಡಿಯೋ ಹಾಕುವಂತೆ ಪ್ರಚೋದಿಸುವುದು, ಇದಕ್ಕಾಗಿ ಹಣದ ಆಮಿಷ, ಅಲ್ಲದೆ ವೀಡಿಯೊ ಹೋಗುವ ಸರ್ವರ್‍ಹ್ಯಾಕ್ ಮಾಡಿ ವೈಯಕ್ತಿಕ ವೀಡಿಯೋ ಹಾಕಿ ಹಣ ಗಳಿಸುವ ದಂಧೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸೈಬರ್ ತಜ್ಞರು.

      ದೇಶದಲ್ಲಿ 1 ಸೆಕೆಂಡ್‍ಗೆ ಒಂದು ಲಕ್ಷ ಸೈಬರ್ ಪ್ರಕರಣ ದಾಖಲಾಗುತ್ತಿವೆ. ಅದರಲ್ಲೂ ಕಿಕ್ರೆಟ್ ಬೆಟ್ಟಿಂಗ್, ಸದಾ ಆನ್‍ಲೈನ್‍ನಲ್ಲಿ ಮುಳುಗಿರುವವರನ್ನು ಗುರಿಯಾಗಿಸಿಕೊಂಡು ಅವರ ನ್ಯೂನ್ಯತೆಯನ್ನು ಎನ್‍ಕ್ಯಾಷ್ ಮಾಡಿಕೊಂಡು ಅವರಿಂದ ಹಣ ಪಡೆದುಕೊಳ್ಳುವ ಡಿಜಿಟಲ್ ಮಾಫಿಯಾ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎಚ್ಚರವಾಗಿರಬೇಕು ಎನ್ನುತ್ತಾರೆ.

ಎಲ್ಲವೂ ಸತ್ಯವಲ್ಲ!

     ಆನ್‍ಲೈನ್‍ನಲ್ಲಿ ಬರುವ ಎಲ್ಲಾ ಅಪ್ಲಿಕೇಷನ್‍ಗಳು ಅಥವಾ ಮಾಹಿತಿಗಳು ಸತ್ಯವಲ್ಲ. ಕೆಲ ಅಪ್ಲಿಕೇಷನ್‍ಗಳು ಯುವ ಜನಾಂಗದ ನ್ಯೂನ್ಯತೆ ಅರಿತು ಅವರಿಗೆ ಅರಿವಿಲ್ಲದಂತೆ ವೀಡಿಯೋಗಳನ್ನು ಹಣಕ್ಕೆ ಮಾರಾಟ ಮಾಡುವ ಜಾಲ ಅವ್ಯಾಹತವಾಗಿ ನಡೆಯುತ್ತಿದೆ. ವೈಯಕಿಕ್ತ ವೀಡಿಯೋ ಹಾಕಿ ಎಲ್ಲರೂ ತಮ್ಮ ವೀಡಿಯೋ ನೋಡಿ ಲೈಕ್ ಒತ್ತಬೇಕೆಂಬ ಮೋಹ ಹೆಚ್ಚಾಗುತ್ತಿದ್ದು, ಇದು ಅಪಾಯವನ್ನು ತಂದೊಡ್ಡುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap