ಮೇ 20ರಂದು ನಗರಕ್ಕೆ ಸೋದೆ ಶ್ರೀಗಳ ಆಗಮನ

ದಾವಣಗೆರೆ:
   
      ಮೇ 20ರಂದು ನಗರಕ್ಕೆ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದಂಗಳು ಆಗಮಿಸಲಿದ್ದಾರೆ ಎಂದು ಶ್ರೀಮಠದ ದೈವಜ್ಞ ಬ್ರಾಹ್ಮಣ ಶಿಷ್ಯವೃಂದದ ನಲ್ಲೂರು ಎಸ್.ರಾಜಕುಮಾರ ತಿಳಿಸಿದರು.
      ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಷ್ಯವೃಂದದ ಪ್ರಾರ್ಥನೆ ಮೇರೆಗೆ ಆಗಮಿಸುತ್ತಿರುವ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದಂಗಳವರಿಗೆ ಮೇ 20ರಂದು ಸಂಜೆ 4 ಗಂಟೆಗೆ ಪಿ.ಜೆ. ಬಡಾವಣೆಯ ರಾಮಮಂದಿರದಿಂದ ಭವ್ಯ ಮೆರವಣಿಗೆ ಮೂಲಕ ಸ್ವಾಗತ ಕೋರಲಾಗುವುದು. ನಂತರ ಸಂಜೆ 6 ಗಂಟೆಗೆ ಭೂತರಾಜರ ಪೂಜಾ ಕಾರ್ಯಕ್ರಮ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಮಾಹಿತಿ ನೀಡಿದರು.
      ಇಲ್ಲಿನ ವಿನೋಬ ನಗರ 1ನೇ ಮುಖ್ಯರಸ್ತೆಯ ಗೌರಮ್ಮ ನರಹರಿಶೇಟ್ ಸಭಾಭವನದಲ್ಲಿ ಮೇ 21ರಂದು ಬೆಳಗ್ಗೆ 8 ಗಂಟೆಗೆ ಪಟ್ಟದೇವರ ಪೂಜೆ, 10ಕ್ಕೆ ಸಾಮೂಹಿಕ ಪಾದಪೂಜೆ, 11.30ಕ್ಕೆ ಶ್ರೀಗಳಿಗೆ ತುಲಾಭಾರ, ಮಧ್ಯಾಹ್ನ 12.30ಕ್ಕೆ ಶ್ರೀಗಳಿಂದ ಆಶೀರ್ವಚನ, 1 ಗಂಟೆಗೆ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನೆರವೇರಲಿದೆ. ಆದ್ದರಿಂದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದರು.
      ಸುದ್ದಿಗೋಷ್ಠಿಯಲ್ಲಿ ಶಿಷ್ಯವೃಂದದ ಅರುಣಾಚಲ ರೇವಣಕರ್, ರಾಮಚಂದ್ರ ರಾಯ್ಕರ್, ದೀಪಕ್ ರಾಯ್ಕರ್, ಅಜಯ ರೇವಣಕರ್ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link