ಪಾವಗಡ;
ಪಾವಗಡ ತಾಲ್ಲೂಕು ವಳ್ಳೂರು ಗ್ರಾಮದ ಸರ್ವೆ ನಂ 207 ರ ಜಮೀನನನು ಸೋಲಾರ್ ಪಾರ್ಕ್‍ಗೆ ನೀಡಿರುವ ಜಮೀನಲ್ಲಿ ನಾವು ಯಾವುದೇ ದೌರ್ಜನ್ಯ ಎಸಗಿಲ್ಲ ಎಂದು ವಳ್ಳೂರು ಗ್ರಾಮದ ಸರ್ವೆ ನಂ 207 ರ ಮಾಲೀಕರಾದ ವೆಂಟಸ್ವಾಮಿ ಮತ್ತು ರವಿ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಪಟ್ಟಣದ ಖಾಸಗಿ ಹೋಟಲ್‍ನಲ್ಲಿ ಕರೆದಿದ್ದ ಪತ್ರೀಕಾಗೋಷ್ಟಿಯಲ್ಲಿ ಜಮೀನಿನ ಮಾಲೀಕ ರವಿ ಮಾತನಾಡಿ, ನಮ್ಮ ಅಜ್ಜಿ ವೆಂಕಟಮ್ಮ ನಿಂದ ನಮ್ಮ ತಂದೆ ಮರಣಾನಂತರ 15 ಎಕರೇ ಜಮೀನು ನಮ್ಮ ಹೆಸರಿಗೆ ಖಾತೆಯಾಗಿದ್ದು, ಪಹಣಿ ಮತ್ತು ಪಟ್ಟಾ ನಮ್ಮ ಹೆಸರಿನಲ್ಲಿದ್ದು,2018 ರಲ್ಲಿ ಸೋಲಾರ್ ಪಾರ್ಕ್ ಗೆ ಜಮೀನನ್ನು ಗುತ್ತಿಗೆಗೆ ನೀಡಿದ್ದು, ಪಾವಗಡ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಣಿಯಾಗಿದೆ,
ಈ ಜಮೀನನ್ನು ಯಾರಿಗೂ ಮಾರಿರುವುದಿಲ್ಲ, ಮತ್ತು ಯಾರಿಗೂ ಪರಬಾರೆ ಮಾಡಿಲ್ಲ, ಆದರೆ ದಿವಂಗತ ನಮ್ಮ ತಂದೆ ರಾಮಯ್ಯ ಚೆನ್ನಕೇಶವರೆಡ್ಡಿ ತಂದೆಯಾದ ಚೆನ್ನಾರೆಡ್ಡಿಗೆ ವಿಶ್ವಾಸದ ಮೇಲೆ ಬೆಳೆಗಳನ್ನು ಇಟ್ಟುಕೊಳ್ಳಲು ನೀಡಿರುತ್ತಾರೆ, ಆದರೇ ಚೆನ್ನಕೇಶವರೆಡ್ಡಿ ಈ ಜಮೀನಿನ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾವಗಡ ನ್ಯಾಯಾಲಯದಲ್ಲಿ ದಾವೇ ಹೂಡಿರುತ್ತಾರೆ,ಚೆನ್ನಾರೆಡ್ಡಿಯವರು ಇಲ್ಲಸಲ್ಲದ ಅರೋಪಗಳನ್ನು ಮಾಡುತ್ತಾ,ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡುತ್ತಿರುತ್ತಾರೆ, ನ್ಯಾಯಾಲಯದಿಂದ ಯಾವುದೇ ತಡೆ ಅಜ್ಞೆ ಇಲ್ಲದಿದ್ದರೂ ಸೋಲಾರ್‍ನ ಪೊಟಂ ಕಂಪನಿಯವರಿಗೆ ತೊಂದರೆ ನೀಡುತ್ತಿದ್ದಾರೆ, ನ್ಯಾಯಾಲಯದ ಆದೇಶಕ್ಕೆ ನಾವು ಬದ್ದರಾಗುತ್ತೇವೆ ಎಂದು ತಿಳಿಸಿದ್ದಾರೆ.