ತಿಪಟೂರು.
ಯಾವುದೋ ಒಂದು ಸಣ್ಣ ಸಾಧನೆಯನ್ನು ಮಾಡಿ ಆ ಸಾಧನೆಯನ್ನು ದೊಡ್ಡ ಸಾಧನೆ ಎಂದು ಎದೆ ಹುಬ್ಬಿಸಿ ಹೇಳಿಕೊಂಡು ಕೇಂದ್ರ ಸರಕಾರದ ನಿರ್ಲಕ್ಷ ದೋರಣೆಯಿಂದ ನಮ್ಮ 44 ವೀರಯೋಧರ ಸಾವಿಗೆ ಕಾರಣವಾಗಿದೆ ಎಂದು ಜೆಡಿಎಸ್ ಮುಖಂಡ ಲೋಕೇಶ್ವರ ಆರೋಪಿಸಿದರು.ಶುಕ್ರವಾರ ನಗರದ ಸ್ವಗೃಹದಲ್ಲಿ ಕರೆದಿದ್ದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿಂದೆ ಲಾಲ್ ಬಹುದ್ದೂರ್ ಶಾಸ್ತ್ರಿಯವರು ತೆಗೆದುಕೊಂಡ ನಿರ್ದಾರಗಳು ಸುಮಾರು ವರ್ಷ ಈ ದೇಶವನ್ನು ಗಟ್ಟಿಯಾಗಿ ನೆಲೆ ನಿಲ್ಲುವಂತೆ ಮಾಡಿತ್ತು ಆ ಧೃಡ ನಿರ್ಧಾರಗಳನ್ನು ಕೇಂದ್ರ ಸರಕಾರವನ್ನು ನೆಡೆಸುತ್ತಿರುವ ವ್ಯಕ್ತಿಗಳು ತೆಗೆದುಕೊಳ್ಳಬೇಕು ಹಾಗೂ ಮರಣ ಹೊಂದಿದ ವೀರ ಯೋಧರ ಕುಂಟುಂಬಗಳಿಗೆ ತಕ್ಷಣವೇ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಡಬೇಕು ಎಂದರು.
ರಾಷ್ಟ್ರದ್ಯಾಂತ ಭ್ರಷ್ಟಚಾರ ನಿರ್ಮೂಲನ ಮಾಡಬೇಕು ಎಂದು ಹೇಳಿಕೊಳ್ಳುತ್ತಿರುವ ಕೇಂದ್ರ ಸರ್ಕಾರವು ತನ್ನ ಕರ್ನಾಟಕದ ಬಿಜೆಪಿ ಪಕ್ಷದ ರಾಜ್ಯದ ನಾಯಕರು ಮಾಡಿಕೊಂಡಿರುವ ಭ್ರಷ್ಟಚಾರದ ವಿಚಾರವನ್ನು ಎಸ್.ಐ.ಟಿ ತನಿಖೆಗೆ ವಹಿಸಲು ನಿರ್ಧಾರ ಮಾಡಿರುವುದು ಸ್ವಾಗತರ್ಹವಾಗಿದ್ದು, ಅಂತಂಹ ದೊಡ್ಡ ತಪ್ಪುಗಳನ್ನು ಸಣ್ಣದಾಗಿಯೇ ಮುಗಿಸಿಕೊಳ್ಳುವ ಪ್ರಯತ್ನವನ್ನು ಮಾಡ ಬಹುದಾಗಿತ್ತು ಎಂಬು ವಿಚಾರವನ್ನು ವಿಧಾನಸಭ ಕಲಾಪಗಳನ್ನು ಸಾರ್ವಜನಿಕರು ನೋಡಿ ಅಸಹ್ಯ ಮಾಡಿಕೊಂಡಿದ್ದಾರೆ.
ಇಂತಹ ತಪ್ಪಿಗೆ ಸಾಮೂಹಿಕವಾಗಿ ಶಿಕ್ಷೆ ಕೊಡಿಸಬೇಕಾಗಿರುವ ವಿಚಾರವನ್ನು ಬಿಟ್ಟು ಬಿಡಿ ಎಂಬುದು ಹೇಯವಾಗಿದ್ದು, ಮುಂದಿನ ದಿನಗಳಲ್ಲಿ ಏನಾದರೂ ಬದಲಾವಣೆ ಮಾಡಬೇಕು, ಕುದುರೆ ವ್ಯಾಪಾರವನ್ನು ನಿಲ್ಲಿಸಬೇಕು ಎಂಬ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿಗಳ ವಿಚಾರ ಶ್ಲಾಘನೀಯವಾಗಿದೆ.
ಮುಂದೆ ಬರುವ ನಗರಸಭಾ ಹಾಗೂ ಲೋಕಸಬಾ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಮುಂದಿನ ತಿಂಗಳು ಮಾರ್ಚ್ ತಿಂಗಳಲ್ಲಿ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ಆಯೋಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳದೆ ಐದೈದು ದಿನಗಳಂತೆ ಕೆರೆಗಳಿಗೆ ನೀರುವ ಬಿಡುವ ಯೋಚನೆಯನ್ನು ಮಾಡಿ ಹೊನ್ನವಳ್ಳಿ ಬಾಗದ ಯಾವ ಕೆರೆಗಳನ್ನು ತುಂಬಿಸದೆಯಿರುವುದು ಶೂಚನೀಯವಾಗಿದೆ.
ಬರಗಾಲ ಪೀಡಿತ ತಾಲ್ಲೂಕುಗಳಿಗೆ ಈಗಾಗಲೇ ಮುಖ್ಯಮಂತ್ರಿಗಳು ಒಂದು ಕೋಟಿ ರೂ ಹಣವನ್ನು ಬಿಡುಗಡೆಮಾಡಿದ್ದು ತಾಲ್ಲೂಕಿನ ತಹಸ್ದೀಲಾರರು ಸೂಕ್ತವಾಗಿ ಕ್ರೀಯಾ ಯೋಚನೆಯನ್ನು ರೂಪಿಸಿ, ಒಂದು ರೂಪಾಯಿಗಳು ದುರೋಪಯೋಗವಾಗದಂತೆ ನೋಡಿಕೊಂಡು ತೋಂದರೆಯಾಗಿರುವ ರೈತರಿಗೆ ನೀರು ಹಾಗು ಜಾನುವಾರುಗಳಿಗೆ ಮೇವನ್ನು ಹೊದಿಗಿಸುವ ಕೆಲಸವನ್ನು ತಾಲ್ಲೂಕು ಆಡಳಿತ ಮಂಡಳಿ ನಿಗವಹಿಸಬೇಕು ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‍ನಲ್ಲಿ ತಾಲ್ಲೂಕಿನ ನರಸಿಂಹರಾಜು ಭವನಕ್ಕೆ ಏರಡು ಕೋಟಿ ಹಣ ನೀಡಿರುವ ಅನುದಾನವನ್ನು ಬಳಸಿಕೊಂಡು ಬೇಗ ಕಾರ್ಯ ಪ್ರವೃತ್ತರಾಗಬೇಕು ಹಾಗೂ ಹಾಲಿಗೆ ಒಂದು ರೂಪಾಯಿ ಪ್ರೋತ್ಸಾಹ ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ನಗರಸಬಾ ಸದಸ್ಯರಾದ ರೇಖಾಅನೂಪ್, ಸೊಪ್ಪುಗಣೇಶ್, ಎಪಿಎಮ್‍ಸಿ ಸದಸ್ಯ ಸಾರ್ಥವಳ್ಳಿಶಿವಕುಮಾರ್, ಮಾಜಿ ಎಪಿಎಮ್‍ಸಿ ಸದಸ್ಯ ರಮೇಶ್, ಜೆಡಿಎಸ್ ಪಕ್ಷದ ಕಾರ್ಯಧ್ಯಕ್ಷ ಶಿವಸ್ವಾಮಿ, ಕಸಬಾ ಹೋಬಳಿಯ ಅಧ್ಯಕ್ಷ ಯೋಗನಂದ್ ಮತ್ತಿತ್ತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ