ಭಾಗ ಮಂಡಲವನ್ನು ಬಿಡದ ಕಸದ ಸಮಸ್ಯೆ..!

ಮಡಿಕೇರಿ:

   ಕರ್ನಾಟಕದ ಜೀವನದಿ ಎಂದೇ ಕರೆಯಲ್ಪಡುವ ನದಿ ಕಾವೇರಿಯ ಉಗಮಸ್ಥಾನ ಭಾಗಮಂಡಲ ಇಂದು ಅನೈರ್ಮಲ್ಯದ ಆಗರವಾಗಿದೆ   ಪ್ರತಿದಿನ ನೂರಾರು ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಿದ್ದು, ಪ್ರತಿದಿನ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

  ತ್ಯಾಜ್ಯ ಸಂಸ್ಕರಣೆಗಾಗಿ ಭಾಗ ಮಂಡಲ ಗ್ರಾಮ ಪಂಚಾಯಿತಿಯಲ್ಲಿ ಸೂಕ್ತ ಜಾಗ ಸಿಗುತ್ತಿಲ್ಲ. ತ್ಯಾಜ್ಯ ಸಂಸ್ಕರಣಾ ಘಟಕವೂ ಇಲ್ಲ. ಇದರಿಂದಾಗಿ ಎಲ್ಲೆಂದರಲ್ಲಿ ರಾಶಿ ರಾಶಿ ಕಸ ಬಿದಿದ್ದು, ದುರ್ವಾಸನೆ ಬೀರುತ್ತಿದೆ.

    ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಭಾಗಮಂಡಲ ಗ್ರಾಮ ಪಂಚಾಯಿತಿಗೆ ಯಾವಾಗಲೂ ಸವಾಲ್ ಆಗಿ ಪರಿಣಮಿಸಿದೆ. ಕೆಲ ವರ್ಷಗಳ ಹಿಂದೆ ಖಾಸಗಿ ಪ್ರದೇಶದಲ್ಲಿ ತ್ಯಾಜ್ಯ ಹಾಕುತ್ತಿದ್ದರಿಂದ ಪಂಚಾಯಿತಿ ಸುದ್ದಿಯಾಗಿತ್ತು. ಅದರಿಂದ ಪರೋಕ್ಷವಾಗಿ ಕಾವೇರಿ ನದಿ ದಂಡಕ್ಕೆ ಹಾನಿಯಾಗುತಿತ್ತು ಎನ್ನಲಾಗಿದೆ. 

    ಆದಾಗ್ಯೂ, ಸ್ಥಳೀಯರು ಸೂಕ್ತ ಜಾಗವನ್ನು ಗುರುತಿಸಿದ್ದರೂ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕಾಗಿ ರಾಜ್ಯ ಸರ್ಕಾರ 13. 24 ಲಕ್ಷವನ್ನು ಬಿಡುಗಡೆ ಮಾಡಿತ್ತು. ಆದರೆ, ಸರಿಯಾದ ಜಾಗ ಮಾತ್ರ ಸಿಕ್ಕಿಲ್ಲ. ಈಗಲೂ ಕೂಡಾ ಹುಡುಕಾಟ ಮುಂದುವರೆದಿದೆ. ತಿಮ್ಮಯ್ಯ ಗ್ರಾಮದ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ಇನ್ನೇನೂ ಕೆಲಸ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಅರಣ್ಯ ಇಲಾಖೆಯಿಂದ ವಿರೋಧ ವ್ಯಕ್ತವಾಯಿತು.

     ಪ್ರಸ್ತುತ ಸರ್ವೇ ನಂಬರ್ 78/2ರಲ್ಲಿ ಮತ್ತೊಂದು ಪ್ರದೇಶವನ್ನು ಗುರುತಿಸಲಾಗಿದೆ. ಆದರೆ, ಅದಕ್ಕೂ ಅಯ್ಯನ್ ಗೇರಿ ಗ್ರಾಮ ಪಂಚಾಯಿತಿಯಿಂದ ವಿರೋಧ ವ್ಯಕ್ತವಾದ್ದರಿಂದ ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಗಮಂಡಲ ಹಾಗೂ ಅಯ್ಯನ್ ಗೇರಿ  ಪಂಚಾಯಿತಿ ಎರಡಕ್ಕೂ  ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸುವ ಪ್ರಸ್ತಾವವನ್ನು ಮಾಡಿದ್ದಾರೆ.

     ಈ ಸಂಬಂಧ ಆದೇಶ ಬರಬೇಕಾಗಿದೆ. ಎರಡು ಪಂಚಾಯಿತಿಗೂ ಆದೇಶ ದೊರೆತ ನಂತರ ಕೆಲಸ ಆರಂಭಿಸಲಾಗುವುದು ಎಂದು ಭಾಗಮಂಡಲ ಗ್ರಾಮ ಪಂಚಾಯಿತಿ ಪಿಡಿಒ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link