ಚಿತ್ರದುರ್ಗ:
ಕಾಂಗ್ರೆಸ್ ಪಕ್ಷ ದೇಶಕ್ಕೆ ತ್ಯಾಗ ಮಾಡಿರುವ ಇತಿಹಾಸವಿದೆ. ಅದಕ್ಕಾಗಿ ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ಮುಖಂಡರು ಪಕ್ಷದ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
ಎ.ಐ.ಸಿ.ಸಿ.ಅಧಿನಾಯಕಿ ಸೋನಿಯಾಗಾಂಧಿರವರ 72 ನೇ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕೇಕ್ ಕತ್ತರಿಸಿ ನಂತರ ಮಾತನಾಡಿದರು.
ಮೂಲತಃ ಇಟಲಿಯವರಾದ ಸೋನಿಯಾಗಾಂಧಿ ರಾಜೀವ್‍ಗಾಂಧಿಯವರನ್ನು ವಿವಾಹವಾಗಿ ಭಾರತದ ನಿವಾಸಿಯಾಗಿದ್ದಾರೆ. ರಾಜೀವ್‍ಗಾಂಧಿರವರ ಹತ್ಯೆಯ ನಂತರ ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕರೂ ಅಧಿಕಾರಕ್ಕಾಗಿ ಆಸೆ ಪಡದ ತ್ಯಾಗಮಯಿ ಎಂದು ಗುಣಗಾನ ಮಾಡಿದರು.
ರಾಜಕೀಯದಲ್ಲಿ ಚಿಕ್ಕ ಅಧಿಕಾರವಾದರೂ ಸಿಗಲಿ ಎಂದು ಎಲ್ಲರೂ ಆಸೆ ಪಡುವುದು ಸಹಜ. ಆದರೆ ಸೋನಿಯಾರವರು ಪ್ರಧಾನಿ ಹುದ್ದೆಯನ್ನು ತ್ಯಜಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುಂದಿನ ಪಾರ್ಲಿಮೆಂಟ್ ಚುನಾವಣೆಯನ್ನು ಎದುರಿಸುವಲ್ಲಿ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಉಪಾಧ್ಯಕ್ಷರುಗಳಾದ ಎಂ.ಕೆ.ತಾಜ್‍ಪೀರ್, ಆರ್.ಕೆ.ನಾಯ್ಡು, ಅಜ್ಜಪ್ಪ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷ್, ಜಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್ ಕುಮಾರ್, ಎನ್.ಎಸ್.ಯು.ಐ.ನ ಎಸ್.ರಾಜೇಂದ್ರಪ್ರಸಾದ್, ಆರ್.ಪ್ರಕಾಶ್, ಕೆ.ಪಿ.ಸಿ.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ನ್ಯಾಯವಾದಿ ರವೀಂದ್ರ, ಮಹಮದ್ ರಫಿ, ಸೈಯದ್ ಸೈಫುಲ್ಲಾ, ಮೋಕ್ಷರುದ್ರಸ್ವಾಮಿ, ಫೈಲ್ವಾನ್ ತಿಪ್ಪೇಸ್ವಾಮಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ