ಸೂರಿಗಾಗಿ ಸಮರ ಜಾಥಾ ಮುಂದೂಡಿಕೆ

ತುಮಕೂರು
     ದಶಕಗಳ ಕಾಲದಿಂದ ಇರುವ ವಸತಿ ಹಾಗೂ ನಿವೇಶನ ರಹಿತರ ಹೋರಾಟದ ಭಾಗವಾಗಿ ಹಮ್ಮಿಕೊಂಡಿರುವ ಜಾಥಾವನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಎಂದು ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.ನಗರದ ಪತ್ರಿಕಾ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರುವರಿ 2 ರಂದು ಬಳ್ಳಾರಿಯಲ್ಲಿ ಆರಂಭಗೊಂಡ ಸೂರಿಗಾಗಿ ಸಮರ ಕೋಟಿ ಹೆಜ್ಜೆಯ ಕಾಲ್ನಡಿಗೆ ಜಾಥಾ 927 ಕಿಮೀ ದೂರ ಕ್ರಮಿಸಿ ಬೆಂಗಳೂರು ಸೇರಬೇಕಿತ್ತು. ಜನರ ಸಮಸ್ಯೆಯೊಂದಿಗೆ ಹೋರಾಡುತ್ತಿರುವ ಐತಿಹಾಸಿಕ ಜಾಥಾ ಇದಾಗಿದ್ದು, ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ವಸತಿ ರಹಿತರ ಬಗ್ಗೆ ಮನವಿ ಸಲ್ಲಿಸಬೇಕಿತ್ತು. ಆದರೆ ಇದೀಗ ಕೊರೋನಾ ಸಮಸ್ಯೆ ಇರುವ ಕಾರಣದಿಂದ ತಾತ್ಕಾಲಿಕವಾಗಿ ಮುಂದೂಡಿದ್ದು, ಈ ಸಮಸ್ಯೆ ಮುಗಿದ ನಂತರ ಈ ಜಾಥಾವನ್ನು ಮತ್ತೆ ಮುಂದುವರೆಸಲಾಗುವುದು ಎಂದರು.
  
    ರಾಜ್ಯದಲ್ಲಿ ಮೂವತ್ತೇಳು ಲಕ್ಷ ಕುಟುಂಬಕ್ಕೆ ವಸತಿ ಹಾಗೂ ನಿವೇಶನಗಳಿಲ್ಲ ಎಂಬುದನ್ನು ಸಿಎಂ ಬಿಎಸ್ ಯಡಿಯೂರಪ್ಪನವರೆ ಹೇಳಿದ್ದರು. ಅವರು ವರ್ಷಕ್ಕೆ 2 ಲಕ್ಷ ಮನೆಗಳನ್ನು ನೀಡುವುದಾಗಿ ಹೇಳಿದರು. ಇಲ್ಲಿ 37 ಲಕ್ಷ ಕುಟುಂಬಗಳಿಗೆ ಕೇವಲ 2 ಲಕ್ಷ ಮನೆಗಳು ನೀಡಿದರೆ ಉಳಿದವರು ಏನು ಮಾಡಬೇಕು? ಇದನ್ನು ಮನಗಂಡು ಆರಂಭಿಸಿದ ಹೋರಾಟದಲ್ಲಿ ರಾಜ್ಯದಲ್ಲಿನ ವಸತಿ ಹಾಗೂ ನಿವೇಶನ ರಹಿತರ ಸಂಖ್ಯೆ ಹೆಚ್ಚಿರುವ ಮಾಹಿತಿ  ತಿಳಿದು ಬಂದಿದೆ. ಗ್ರಾಮೀಣ ಮಟ್ಟದಲ್ಲಿ ಅರ್ಜಿ ಸಲ್ಲಿಸದವರ ಸಂಖ್ಯೆ ಯಥೇಚ್ಛವಾಗಿದೆ.  ಈ ನಿಟ್ಟಿನಲ್ಲಿ ಸರ್ಕಾರ ಮರು ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
 
   ಸಿಎಂ ಬಿಎಸ್‍ವೈ ವರ್ಷಕ್ಕೆ ಎರಡು ಲಕ್ಷ ಮನೆ ನೀಡುವುದಾಗಿ ಹೇಳಿದ್ದಾರೆ, ಇದರಿಂದ ಸರ್ವರಿಗೂ ಸೂರು ಕಲ್ಪಿಸಲು ಸಾಧ್ಯವಿಲ್ಲ. ಬಜೆಟ್‍ನಲ್ಲಿ ಘೋಷಿಸಿರುವ ಅನುದಾನ ಯಾವುದಕ್ಕೂ ಸಾಧ್ಯವಿಲ್ಲ. ದಲಿತ ಕುಟುಂಬಗಳು ಸಂಕಷ್ಟದಲ್ಲಿದ್ದು, ಸರ್ಕಾರ ಸರಿಯಾದ ನಿಟ್ಟಿನಲ್ಲಿ ಪರಿಶೀಲನೆ ನಡೆಸಬೇಕು. ಜಾಥಾದಲ್ಲಿ ಸಂಗ್ರಹಿಸಿರುವ ಮಾಹಿತಿಯ ವರದಿಯನ್ನು ಕೊರೋನಾ ಸಮಸ್ಯೆ ಮುಗಿದ ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
   ಈಗಾಗಲೆ ಬಳ್ಳಾರಿಯಿಂದ ಸುಮಾರು 927 ಕಿಮೀ ಕ್ರಮಿಸಿದ ಜಾಥಾದಲ್ಲಿ ವಸತಿ ಹಾಗೂ ನಿವೇಶನ ರಹಿತರ ಸಮಸ್ಯೆಗಳನ್ನು ಆಲಿಸುವುದರೊಂದಿಗೆ, ಅರ್ಜಿ ಸಲ್ಲಿಸದವರಿಗೆ ಸ್ಥಳದಲ್ಲಿಯೇ ಅರ್ಜಿ ಸಲ್ಲಿಸಲು ಸಹಾಯ ಮಾಡಲಾಗಿದೆ.. ವೈರಸ್ ಮಹಾಮಾರಿಯಾಗಿದ್ದು, ಇದು ಹರಡದಂತೆ ಸರ್ಕಾರ ನೀಡಲಾದ ಸೂಚನೆಗಳನ್ನು ಪಾಲಿಸುವ ನಿಟ್ಟಿನಲ್ಲಿ ತಾಳಗುಂದ ಬಳಿ ಜಾಥಾವನ್ನು ನಿಲ್ಲಿಸಲಾಗಿದೆ. ನಂತರದಲ್ಲಿ ತಾಳಗುಂದದಿಂದಲೆ ಜಾಥಾ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
   ಮುಂದಿನ ಮೂರು ವರ್ಷದಲ್ಲಿ ರಾಜ್ಯದ ಉದ್ದಗಲಕ್ಕೂ ವಸತಿ ಹಾಗೂ ನಿವೇಶನ ರಹಿತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜಾಥಾವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಮೂಲಕ ರಾಜ್ಯದಲ್ಲಿ ಸಕ್ರಿಯ ರಾಜಕಾರಣದ ಕಡೆಗೆ ಚಳವಳಿಯ ರಾಜಕಾರಣವನ್ನು ತೆಗೆದುಕೊಂಡು ಹೋಗಲಾಗುವುದು ಎಂದರು.
   ಈ ಸಂದರ್ಭದಲ್ಲಿ ಸಂತೋಷ್, ಮೋನಪ್ಪ, ಪಾಲವನಹಳ್ಳಿ ಪ್ರಸನ್ನಕುಮಾರ್, ಗಿರೀಶ್, ಕಂಬೇಗೌಡ, ನಿವೇಶನ ಮತ್ತು ವಸತಿರಹಿತರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಡೊಂಗ್ರೆ, ಡಾ.ಕೆ.ಎಸ್.ಜನಾರ್ಧನ್, ಸತ್ಯನಾರಾಯಣ್, ಶಶಿಕಾಂತ್, ಅಶ್ವತ್ಥ್ ನಾರಾಯಣ ಸೇರಿದಂತೆ ಇನ್ನಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap