ಹುಳಿಯಾರು:
ಹುಳಿಯಾರು ಸಮೀಪದ ಮತ್ತಿಘಟ್ಟ ಗ್ರಾಮಕ್ಕೆ ತುಮಕೂರು ಎಸ್ಪಿ ಕೋನವಂಶಿ ಕೃಷ್ಣ ದಿಡೀರ್ ಭೇಟಿ ನೀಡಿ ಗ್ರಾಮಸ್ಥರಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಿದರು.ಕಾಮನ್ ಮ್ಯಾನ್ ರೀತಿ ಇಲ್ಲಿನ ಬೇಕರಿ, ಚಹಾ ಅಂಗಡಿ ಸೇರಿದಂತೆ ಕೆಲ ಅಂಗಡಿಗಳ ಬಳಿಗೆ ಅಡ್ಡಾಡಿದ್ದ ಅವರು ಅಲ್ಲಿದ್ದ ಜನಸಾಮಾನ್ಯರು, ಅಂಗಡಿ ವ್ಯಾಪಾರಿಗಳು, ವಿದ್ಯಾರ್ಥಿಗಳ ಜೊತೆ ಮಾತನಾಡಿದರು.
ಎಸ್ಪಿ ದಿಢೀರ್ ಭೇಟಿಯಿಂದ ಕಂಗಾಲಾದ ಸ್ಥಳೀಯರು ಗಾಭರಿಯಿಂದಲೇ ಹಲವು ಸಮಸ್ಯೆ ಹೇಳಿಕೊಂಡರು. ಕೆಲವರಂತೂ ಯಾವುದೋ ಇನ್ವಿಸ್ಟಿಕೇಷನ್ ಮಾಡುತ್ತಿದ್ದಾರೆಂದು ಹತ್ತಿರ ತೆರಳದೆ ದೂರದಲ್ಲೇ ನಿಂತು ವೀಕ್ಷಿಸಿದರು.ಪೊಲೀಸ್ ಸಮವಸ್ತ್ರದಲ್ಲಿ ಎಸ್ಪಿ ಕಂಡು ಜನ ಆಶ್ಚರ್ಯಗೊಂಡು ಮೌನಕ್ಕೆ ಶರಣಾಗಿದ್ದರು. ಆದರೂ ಸಹ ಜನಸಾಮಾನ್ಯರ ಬಳಿಗೆ ಎಸ್ಪಿ ಅವರೇ ತೆರಳಿ ಮಾತಿಗೆಳೆಯುವ ಮೂಲಕ ಸರಳತೆ ಪ್ರದರ್ಶಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








