ಚಿತ್ರದುರ್ಗ:
ವಿ.ಪಿ.ಬಡಾವಣೆಯ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಗರಸಭೆ ಹಾಗೂ ಕಂದಾಯ ಇಲಾಖೆಯಿಂದ ಭಾನುವಾರ ನಡೆದ ಕರಡು ಮತದಾರರ ಪಟ್ಟಿ ವಿಶೇಷ ಮತದಾರರ ಪರಿಷ್ಕರಣೆ, ವಿಶೇಷ ನೊಂದಣಿ ಕಾರ್ಯವನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ವೀಕ್ಷಿಸಿದರು
ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ತಿದ್ದುಪಡಿ, ಮತದಾರರ ಪಟ್ಟಿಯಲ್ಲಿ ಹೆಸರುಗಳು ಕೈಬಿಟ್ಟುಹೋಗಿರುವವರ ಸೇರ್ಪಡೆ ಸಂಬಂಧ ನಡೆಯುತ್ತಿರುವ ವಿಶೇಷ ನೊಂದಣಿ ಕಾರ್ಯವನ್ನು ಪರಿಶೀಲಿಸಿ ನಿಗಧಿತ ಸಮಯದೊಳಗೆ ವಿಶೇಷ ನೊಂದಣಿಯನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚಿಸಿದರು.ತಹಶೀಲ್ದಾರ್ ಮಲ್ಲಿಕಾರ್ಜುನ್, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಕಂದಾಯಾಧಿಕಾರಿ ವಾಸಿಂ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
