ನ್ಯಾಯಬೆಲೆ ಅಂಗಡಿ ಕುರಿತು ವಿಶೇಷ ಗ್ರಾಮಸಭೆ

ಹರಪನಹಳ್ಳಿ :

      ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ದಾವಣಗೆರೆ ಸ್ಪೂರ್ತಿ ಸಂಸ್ಥೆಯ ಸಹಯೋಗದಲಿನಾಗರೀಕ ಮೇಲ್ವಿಚಾರಣೆ ಮತ್ತು ಕ್ರಿಯಾಯೋಜನೆ ಅಡಿಯಲ್ಲಿ ನ್ಯಾಯಬೆಲೆ ಅಂಗಡಿ ಕುರಿತು ವಿಶೇಷ ಗ್ರಾಮಸಭೆ ಜರುಗಿತು.

        ಆಹಾರ ನಿರೀಕ್ಷಕ ಬಿ.ಟಿ.ಪ್ರಕಾಶ್ ಮಾತನಾಡಿ, ನ್ಯಾಯಬೆಲೆ ಅಂಗಡಿಗಳ ಮೂಲಕ ಸರ್ಕಾರದ ನಿಯಮಾನುಸಾರ ಗ್ರಾಹಕರಿಗೆ ಅಕ್ಕಿ, ಗೋದಿ ವಿತರಿಸಲಾಗುತ್ತಿದೆ ಎಂದರು. ಬಿಪಿಎಲ್ ಕಾರ್ಡ್‍ಗೆ 7 ಕೆಜಿ ಅಕ್ಕಿ, ಎಎವೈಗೆ 35 ಕೆ.ಜಿ.ಅಕ್ಕಿ, ಗೋದಿ, ಬೇಳೆ ಪಾಕೆಟ್ ಸಹ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

        ಪಡಿತರ ವ್ಯವಸ್ಥೆಯ ವಿಶ್ಲೇಷಣೆ ಮಾಡಲು ಜಿಲ್ಲೆಯ ನಂದಿಬೇವೂರು ಗ್ರಾಮ ಸಹ ಆಯ್ಕೆಯಾಗಿದೆ. ಇಲ್ಲಿ ಅಸ್ತಿತ್ವಕ್ಕೆ ತಂದಿರುವ ನಾಗರೀಕ ಉಸ್ತುವಾರಿ ಕ್ರಿಯಾ ಸಮಿತಿಯಲ್ಲಿ ಯು.ಜಗದೀಶ, ಮಂಜುಳಾ, ಕರಿಬಸಪ್ಪ ಹಾಗೂ ಹುಲಿಗೆಮ್ಮ ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ.

         ಗ್ರಾ.ಪಂ.ಅಧ್ಯಕ್ಷ ಎಂ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಸ್ಪೂರ್ತಿ ಸಂಸ್ಥೆ ಸಂಯೋಜಕ ತಿಪ್ಪೇಸ್ವಾಮಿ, ಭರತರಾಜ್, ಪಿಡಿಒ ನಾಗೇಶ್ವರರಾವ್, ನಂದಿಹಳ್ಳಿ ಶಿವಪ್ಪ, ಕೆ.ಚಂದ್ರಪ್ಪ, ಕೃಷ್ಣನಾಯ್ಕ, ರೇಷ್ಮಾ, ಹನುಮಂತಪ್ಪ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ