ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿಶೇಷ ಉಪನ್ಯಾಸ

ದಾವಣಗೆರೆ :

          ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವುಗಳ ಸಹಯೋಗದಲ್ಲಿ ತಾಲೂಕಿನ ಗೋಪನಾಳು ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ರಕ್ತ ಗುಂಪು ಪರೀಕ್ಷಾ ಶಿಬಿರ ಹಾಗೂ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು.

           ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಅವರು ವಿಶೇಷ ಉಪನ್ಯಾಸ ನೀಡಿ ಶಿಕ್ಷಣ, ಶಿಕ್ಷಕರು, ವಿದ್ಯಾರ್ಥಿ ಜೀವನ, ಕಲಿಕೆ, ಆಸಕ್ತಿ, ಶಿಸ್ತು, ಸಂಯಮ, ತಾಳ್ಮೆ, ಪರೀಕ್ಷಾ ಸಿದ್ಧತೆ ಇತ್ಯಾದಿ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.

            ವೇದಿಕೆಯಲ್ಲಿ ಅಕಾಡೆಮಿಯ ಸಂಸ್ಥಾಪಕ ಕಾರ್ಯದರ್ಶಿ ಎನ್.ಕೆ ಕೊಟ್ರೇಶ್ ಮತ್ತು ಆನಂದ ಜ್ಯೋತಿ ಅವರು ತಮ್ಮ ಅನುಭವದ ನುಡಿಗಳನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ವಸತಿ ಶಾಲಾ ಶಿಕ್ಷಕರಾದ ವೀರೇಂದ್ರ ಪಟೇಲ್, ದೊಡ್ಡಪ್ಪ, ಸಿಂದ್ಯಪ್ಪ, ನಿಂಗಪ್ಪ, ನಿರ್ಮಲ, ಮಧುಮತಿ, ವಿಜಯಕುಮಾರಿ, ತಿಮ್ಮಪ್ಪ, ಮಂಜಪ್ಪ, ಮಾಜನ್ ಬಿ, ಸುಮ, ಮಂಜು ಚಿರಾಗ್, ಮಲ್ಲಿಕ್ ಸಾಬ್ ಸೇರಿದಂತೆ ಇತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap