ತುಮಕೂರು:
ನಗರದ ಸೇಂಟ್ ಮೇರಿಸ್ ಮಹಿಳಾ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾದ ಸಹೋದರಿ ರೆಜಿನಾ, ಪಾಲ್, ಅನಸೂಯ ಅವರುಗಳ ವತಿಯಿಂದ ಕಿವುಡ ಮತ್ತು ಮೂಕ ಮಕ್ಕಳಿಗಾಗಿ ವಿಶೇಷ ವಿನ್ಯಾಸದ ಕೋವಿಡ್ 19 ಫೇಸ್ ಮಾಸ್ಕ್ ಅನ್ನು ಕಿವುಡ ಮತ್ತು ಮೂಕ ಮಕ್ಕಳ ಶಿಕ್ಷಕರಿಗೆ ವಾಣಿ ಕಿವುಡ ಮಕ್ಕಳ ಪ್ರತಿಷ್ಠಾನದ ಶ್ರೀ ವೀರೇಶ್ ಅವರಿಗೆ ಹಸ್ತಾಂತರಿಸಲಾಯಿತು.
ಮಾಸ್ಕನ ವಿಶೇಷತೆ:
ಇನ್ನು ಈ ಮಾಸ್ಕ ಕೂಡ ಎಲ್ಲಾ ಸಾಮಾನ್ಯ ಮಾಸ್ಕಗಳಂತೆಯೇ ಇದ್ದು ಇದರ ಮುಂಭಾಗದಲ್ಲಿ ಪಾರದರ್ಶಕ ಪರದೆ ಇದ್ದು ಇದರ ಸಹಾಯದಿಂದ ಮಕ್ಕಳಿಗೆ ಲಿಪ್ ಮೂಮೆಂಟ್ ಹೇಳಿಕೊಡಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.ಇನ್ನು ಈ ಮಾಸ್ಕ ತಯಾರಿಕೆಯಲ್ಲಿ ಸೇಂಟ್ ಮೇರಿಸ್ ಮಹಹಿಳಾ ಕೇಂದ್ರ , ರೆಡ್ ಕ್ರಾಸ್ ತುಮಕೂರು ಮತ್ತು ವಾಣಿ ಕಿವುಡ ಮಕ್ಕಳ ಪ್ರತಿಷ್ಠಾನಗಳು ಕೈಜೋಡಿಸಿವೆ.