ಚಿಕ್ಕನಾಯಕನಹಳ್ಳಿ
ಸಮೃದ್ದಿ ಮಳೆಗಾಗಿ ವರುಣ ದೀಪ ಎಂಬ ವಿಶೇಷ ಪ್ರಾರ್ಥನೆಯನ್ನು ಶ್ರೀ ಪ್ರಸನ್ನರಾಮೇಶ್ವರ ಸ್ವಾಮಿ ದೇವಾಲಯದ ಭಕ್ತ ಮಂಡಳಿ ಮತ್ತು ಡಿವೈನ್ಸ್ ಪಾರ್ಕ್ ವಿವೇಕ ಜಾಗ್ರತ ಬಳಗ ಹಾಗು ರೈತರ ಸಂಯುಕ್ತಾಶ್ರಯದಲ್ಲಿ ಮೆ.8ರಿಂದ ಮೇ18ರವರೆವಿಗೆ ವರುಣ ದೇವರಲ್ಲಿ ಆರ್ತ ಮೊರೆ ಸಲ್ಲಿಸುವ ಕಾರ್ಯಕ್ರಮವನ್ನು ನೆಡೆಸಲಾಗುತ್ತಿದೆ.
ಡಿವೈನ್ ಪಾರ್ಕ್ ವಿವೇಕ ಜಾಗೃತ ಬಳಗದ ಮಂಜುನಾಥ್ ಪ್ರಸನ್ನ ಮಾತನಾಡಿ, ಮಳೆಗಾಲ ಆರಂಭವಾದರು ಅಶ್ವಿನಿ ಭರಣಿ ಮಳೆಯು ಇನ್ನೂ ಧರೆಗೆ ಇಳಿಯದೆ ಜನ ಜಾನುವಾರಗಳು ಕಂಗಾಲಾಗಿರುವುದು ಕಂಡುಬರುತ್ತಿದೆ. ವಾಡಿಕೆಯಂತೆ ಈ ವರ್ಷ ಮಳೆಗಾಲ ಪ್ರಾರಂಭವಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿ ಹೆಸರುಕಾಳು, ಉದ್ದಿನ ಕಾಳು, ಎಳ್ಳು, ಜೋಳ, ಹರಳು ಇತ್ಯಾದಿ ಈ ಸಮಯದಲ್ಲಿ ಬೀಜ ಬಿತ್ತುವ ಕೆಲಸವು ವ್ಯವಸಾಯದ ಆರಂಭದಲ್ಲಿ ನೆಡೆಯುತ್ತಿದ್ದವು ಆದರೆ ಈಗ ಕನಸು ಕಾಣವಂತಾಗಿದೆ.
ಕಳೆದ 10 ವರ್ಷದಿಂದ ಮಳೆಯು ವರ್ಷ ವರ್ಷಕ್ಕೂ ಕಡಿಮೆಯಾಗಿ ಭೂಮಿಯಲ್ಲಿ ಅಂತರ್ ಜಲವು 1000ಅಡಿಗೂ ಮೀರಿ ಕೊಳವೆ ಬಾವಿ ಕೊರೆದರು ನೀರು ಸಿಗುತ್ತಿಲ್ಲ. ಬಿಸಿಲಿನ ತಾಪಮಾನ 40ಡಿಗ್ರಿ ಆಜುಬಾಜಿನಲ್ಲಿ ಭೂಮಿಯನ್ನು ಸುಡುತ್ತಿದ್ದು ಇದರಿಂದ ಜೀವರಾಶಿಗಳು ತತ್ತರಿಸಿವೆ.
ಸ್ವಾಮಿ ವಿವೇಕಾನಂದರು ನಿತ್ಯ ಜಾಗೃತ ಚೇತನ ಶ್ರೀ ಗುರೂಜಿಯಾಗಿ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಅವರದೇ ಆದ ಆಧ್ಯಾತಿಕ ಪ್ರಯೋಗ ಶಾಲೆಯಲ್ಲಿ ಡಿವೈನ್ ಪಾರ್ಕ್ನ ತಮ್ಮ ದಿವ್ಯ ಲೀಲಾ ಮಾಧ್ಯಮರಾದ ಪರಮ ಪೂಜ್ಯ ಡಾಕ್ಟರ್ಜೀ
ಬಿ.ಎಸ್ಸಿ,ಎಂ.ಬಿ.ಬಿ.ಎಸ್.ಎಫ್.ಎ.ಜಿ.ಇ.ರವರಿಂದ ನಿರ್ಮಸಿ ಕಂಡು ವಿಚಿತ್ರ ವೆನಿಸಿದರೂ ಅದು ಸತ್ಯವಾಗಿದೆ. 32ವರ್ಷಗಳಲ್ಲಿ ಜಗತ್ತಿನಲ್ಲಿ ನೂರಾರು ವಿವೇಕ ಜಾಗೃತ ಬಳಗಗಳ ಮೂಲಕ ಅಂತರಂಗ ಯಾನಕ್ಕೆ ದಾರಿ ತೋರುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ಗರೂಜಿಯವರ ಮಾರ್ಗದರ್ಶನದಲ್ಲಿ ವಿಶಿಷ್ಟ ವರಣದೀಪ ಯೋಜನೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮವನ್ನು ನೆಡೆಸಲಾಗುತ್ತಿದೆ ಎಂದು ತಿಳಿಸಿದರು.
ವರ್ಷದ ಆರಂಭದಲ್ಲಿ ಕಷ್ಟದ ಪರಿಸ್ಥಿಯನ್ನು ಹೆದರಿಸುವಂತಾಗಿದೆ ಈ ನಿಟ್ಟಿನಲ್ಲಿ ಪಟ್ಟಣದ ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯದ ಭಕ್ತ ಮಂಡಳಿಯು ಹಾಗು ವಿವೇಕ ಜಾಗೃತ ಬಳಗ ಪಟ್ಟಣದ ರೈತರು ಮತ್ತು ಸಾರ್ವಜನಿಕರು ಸೇರಿ ಲೋಕ ಕಲ್ಯಾಣಕ್ಕಾಗಿ ಮತ್ತು ಸಮೃದ್ದಿ ಮಳೆಗಾಗಿ ಬೆಳಗಿನ ಜಾವ ಮತ್ತು ಸಯಂಕಾಲ ಪ್ರತಿ ನಿತ್ಯ ದೇವಾಲಯದಲ್ಲಿ 5.30ರಿಂದ 6.30ಗಂಟೆಯವರೆಗೆ ಸಾಮೂಹಿಕವಾಗಿ ಓಂ ಶ್ರೀಂ ವರುಣ ದೇವಾಯ ನಮಃ ಎಂದು 108ಬಾರಿ ಜಪಿಸುವ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗೋವಿಂದರಾಜು(ಜ್ಞಾನನಿಧಿ)ರವರು ತಿಳಿಸಿದರು. ವರುಣನ ಪ್ರಾರ್ಥನೆಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರ ಬೇಕೇಂದು ದೇವಾಲಯದ ಸದ್ಭಕ್ತ ಮಂಡಳಿಯು ಕೋರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
