ವಿಶೇಷ ವರದಿ, ರಂಗಧಾಮಯ್ಯ
ಕೊರಟಗೆರೆ
ಶತಮಾನಗಳ ಇತಿಹಾಸವುಳ್ಳ ಬಸವ ಮಠದ ಜೀರ್ಣೋದ್ದಾರಕಾರ್ಯ ಸಾರ್ವಜನಿಕವಾಗಿಎರಡು ಗುಂಪುಗಳಾಗಿ ಪರ ವಿರೋದಗಳ ಹೇಳಿಕೆ ಕೇಳಿ ಬರುತ್ತಿದ್ದು, ಜೀರ್ಣೋದ್ದಾರಎಂದುಟ್ರಸ್ಟ್ನವರ ವಾದವಾದರೆ, ಐತಿಹಾಸಿಕವುಳ್ಳ ಬಸವ ಮಠ ಕೆಡುವ ಅವಶ್ಯಕತೆ ಇತ್ತೇ ಎಂದು ಪ್ರತಿವಾದಿಗಳು ವಾದ ಮಂಡಿಸುವ ಮೂಲಕ ಕೆಸರೆರೆಚಾಟಕ್ಕೆ ಇಳಿದಿರುವುದು ವಿವಾದಕ್ಕೆಎಡೆ ಮಾಡಿಕೊಟ್ಟಂತಾಗಿದೆ.
ತಾಲ್ಲೂಕಿನತೋವಿನಕೆರೆ ಹೋಬಳಿಯ ಕುರಂಕೋಟೆ ಬಳಿಯ ಹೊಲತಾಳು ಗ್ರಾಮದ ಬಸವ ಮಠ ಈಗ ಸುದ್ದಿಗೆ ಗ್ರಾಸವಾಗಿದ್ದು ಮೂರು ಶತಮಾನಗಳುಳ್ಳ ಬಸವ ಮಠ ಶೀಥಲಾವಸ್ಥೆಯಲ್ಲಿದ್ದು, ಜೀರ್ಣೋದ್ದಾರಅಥವಾ ಪುನರ್ ನಿರ್ಮಾಣಎಂದುಟ್ರಸ್ಟ್ನವರು ವಾದಿಸಿದರೆ ಇನ್ನೂ ಕೆಲ ಸ್ಥಳಿಯರು ಐತಿಹಾಸಿಕ ಸ್ಮಾರಕದಂತಿದ್ದ ಬಸವ ಮಠವನ್ನು ಮುಂದಿನ ಪೀಳಿಗೆಗೂಇತಿಹಾಸಕುರುಹುಗಾಗಿ ಹಾಗೆಯೆ ಬಿಟ್ಟು ಬೇರೆಡೆ ಮಠ ಸ್ಥಾಪಿಸಬೇಕು ಎಂದು ವಾದಿಸುತ್ತಿರುವುದು ಸಂಘರ್ಶಗೀಡಾಗಿದೆ.
300 ವರ್ಷಗಳ ಇತಿಹಾಸ ಹೊಂದಿದ್ದ ಬಸವ ಮಠವನ್ನುಧರ್ಮ ಪ್ರಚಾರದದೃಷ್ಟಿಯಿಂದಯಡಿಯೂರು ಸಿದ್ದಲಿಂಗೇಶ್ವರರ ಶಿಷ್ಯಂದಿರು ಪ್ರತಿಷ್ಟಾಪಿಸಿದರು ಎನ್ನಲಾಗಿದ್ದು, ಬಸವಲಿಂಗ ಪ್ರತಿಷ್ಟಾಪನೆ, ನಂದಿವಿಗ್ರಹ ಪ್ರತಿಷ್ಟಾಪನೆ, ಋಷಿಮುನಿಗಳು ಹಾಗೂ ಸ್ವಾಮೀಜಿಗಳ ತಪೋವನಜೊತೆಗೆ ಸ್ನಾನಾಧಿಗಳಿಗೆ ಕಲ್ಯಾಣಿ, ಶತ್ರುಗಳ ಹಿಮ್ಮೆಟ್ಟಿಸುವುದಕ್ಕಾಗಿ ವಿಶಾಲವಾದಕುದುರೆ ಲಾಯ, ಸಾವಿರಾರುಜನ ಉಳಿದುಕೊಳ್ಳುವ ದೃಷ್ಟಿಯಿಂದ ಅಷ್ಟು ಜನರಿಗೂಒಂದೇ ಬಾರಿ ಊಟ ತಯಾರಾಗುವ ಪಾಕಶಾಲೆ ಸೇರಿದಂತೆ ನೂರಾರುಜನಕೂತುಚರ್ಚೆ ನಡೆಸುವ ಹಾಸನ ವ್ಯವಸ್ಥೆಯುಳ್ಳ ವಿಶಾಲವಾದ ಮಂಟಪವುಳ್ಳ ಈ ಮಠಕಲ್ಲಿನಿಂದ ಪ್ರತಿಷ್ಟಾಪಿಸಿದರಿಂದ ಕಲ್ಲಿನ ಮಠಎಂದೂ, ನಂದಿವಿಗ್ರಹವಿರುವುದರಿಂದ ಬಸವಮಠಎಂದು ಕರೆಸಿಕೊಳ್ಳಲ್ಪಡುವ ಈ ಮಠ ಐತಿಹಾಸಿಕ ಪ್ರೇಕ್ಷಣಿಕ ಸ್ಥಳವಾಗಿದ್ದು, ಇಂತಹ ಸ್ಥಳವನ್ನು ನೆಲಸಮಗೊಳಿಸಿರುವುದು
ಬೇಸರತಂದಿದೆಎಂದು ಕೆಲವರು ವಾದ ಮಂಡಿಸಿದರೆ, ಪವಿತ್ರ ಸ್ಥಳವಾಗಿರುವ ಈ ಜಾಗ ಪಾಳು ಬಿದ್ದು ಸುಮಾರು ವರ್ಷಗಳಿಂದ ಯಾರೊಬ್ಬರುತಲೆ ಹಾಕದ ಸ್ಥಿತಿ ತಲುಪಿದಕಾರಣ ಪನರ್ ನಿರ್ಮಾಣಕ್ಕೆ ಕೈ ಹಾಕಿದ್ದೇವೆಎಂದುಟ್ರಸ್ಟ್ನವರ ವಾದವಾಗಿದೆ.
ಈ ಮಠ ಮೂರು ಶತಮಾನಗಳ ಇತಿಹಾಸವಿದ್ದು, ಕಲ್ಲಿನಕಟ್ಟಡವಾದ್ದರಿಂದ ಕಲ್ಲುಗಳು ಜರುಗುವ ಹಂತತಲುಪಿ ಯಾವ ಸಂದರ್ಭದಲ್ಲಾದರು ನೆಲಕ್ಕುರುಳುವ ಆತಂಕವಿದ್ದಕಾರಣ ಮುಂದಿನ ಅನಾಹುತದ ಭೀಕರತೆಅರಿತಟ್ರಸ್ಟ್ ಸಾಧು ಸಂತರಿದ್ದಪುಣ್ಯಕ್ಷೇತ್ರದಲ್ಲಿಅನಾಹುತಗಳಾಗಿ ಆ ಸ್ಥಳದಲ್ಲಿ ರಕ್ತ ಬೀಳಬಾರದೆಂಬ ಉದ್ದೇಶದಿಂದ ಪುಣ್ಯಸ್ಥಳದಲ್ಲಿ ಅದೇದೇವರಾದ ಬಸವಲಿಂಗ ಪ್ರತಿಷ್ಟಾಪನೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವಟ್ರಸ್ಟ್ಹಳೆಯ ಶೀಥಲವಸ್ಥೆಯಲ್ಲಿದ್ದ ಗೋಡೆಗಳನ್ನು ತೆರವುಗೊಳಿಸಿ ಭವ್ಯದೇವಾಲಯ ನಿರ್ಮಾಣದಜೊತೆಗೆಇಲ್ಲಿನ ಭಕ್ತಾಧಿಗಳಿಗೆ ನಿತ್ಯ ಪೂಜೆ ಹಾಗೂ ಇಲ್ಲಿಯೇ ಉಳಿದು ಪೂಜೆ ಸಲ್ಲಿಸಲೆಂಬ ದೃಷ್ಟಿಯಿಂದ ಸುಸಜ್ಜಿತ ನೂತನಕಟ್ಟಡ ನಿರ್ಮಾಣಕ್ಕೆಟ್ರಸ್ಟ್ ಒಳ್ಳೆಯ ಮುಂದಾಲೋಚನೆಯೊಂದಿಗೆ ಶಿಥಲಾವಸ್ಥೆಯಲ್ಲಿದ್ದ ಹಳೆಯ ದೇವಾಲಯವನ್ನು ತೆರವುಗೊಳಿಸ ಲಾಗಿದೆಇದನ್ನು ಕೆಲವರುದುರುದ್ದೇಶದಿಂದ ಭಕ್ತರನ್ನುದಾರಿತಪ್ಪಿಸುತ್ತಿದ್ದುಇದಕ್ಕೆಕಿವಿಗೂಡಬಾರದುಎಂದುಟ್ರಸ್ಟ್ನವರು ಮನವಿ ಮಾಡಿಕೊಂಡಿದ್ದಾರೆ .
ಇದಕ್ಕೆ ವ್ಯತಿರಿಕ್ತಎಂಬುವಂತೆ ಮತ್ತೊಂದು ವಾದವನ್ನು ಕೆಲವು ನಾಗರೀಕರು ಮಂಡಿಸುತ್ತಿದ್ದು ಬಸವ ಮಠ ಸಾಧು ಸಂತರು, ಋಷಿಮುನಿಗಳ ತಪೋಸ್ಥಾನವಾಗಿದ್ದುಇಲ್ಲಿಋಷಿಮುನಿಗಳ ಸ್ನಾನಕ್ಕೆಕಲ್ಯಾಣಿ, ತಪಸ್ಸಿಗೆ ಭಂಗ ಬಾರದರೀತಿಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಸೇರಿದಂತೆ ಐತಿಹಾಸಿಕ ಕುರುಹುಗಳಂತಿದ್ದ ನಂದಿದ್ವಜ, ಕಲ್ಲಿನ ಕೋಟೆಗಳ ಮಾದರಿಯ ಗೋಡೆಗಳು ಐತಿಹಾಸ ಸಾರುವಂತಹಇಂತಹ ಪ್ರದೇಶಇಂದು ನೆಲಕ್ಕುರುಳಿರುವುದು ಬೇಸರ ತರಿಸಿದೆ ಎಂದು ಕೆಲವರ ವಾದವಾಗಿದೆ.
ಒಟ್ಟಾರೆ ಮೂರು ಶತಮಾನಗಳ ಇತಿಹಾಸವುಳ್ಳ ಬಸವ ಮಠಜೀರ್ಣೋದ್ದಾರಉದ್ದೇಶದೊಂದಿಗೆ ಹೊಸ ಆಯಾಮಕ್ಕೆಕಾಲಿಡುವ ಮುನ್ನ ಅನೇಕ ವಿಘ್ನಗಳು ಕಾಣಿಸಿಕೊಂಡಿದ್ದು, ಬಸವ ಮಠ ಪುನರ್ ಜೀವನಗೊಳಿಸುವ ಸದುದ್ದೇಶ ಬಹುತೇಕ ಸ್ಥಳಿಯ ಸಾರ್ವಜನಿಕರಿಂದ ಕೇಳಿ ಬರುತ್ತಿರುವುದುಒಂದೆಡೆಯಾದರೆ, ಇತಿಹಾಸ ಕುರುಹುಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ಆಲೋಚನೆ ಹೋಂದಿದ್ದಒಂದಷ್ಟು ಮಂದಿ ಈ ಬೆಳವಣಿಗೆಯ ವಿರುದ್ದಅಸಮದಾನ ವ್ಯಕ್ತಪಡಿಸುತ್ತಿದ್ದು, ಜಾತ್ಯಾತೀತ ತತ್ವವುಳ್ಳ ಸಿದ್ದರಬೆಟ್ಟದ ರಂಭಾಪುರ ಶಾಖಾ ಮಠದ ಶ್ರೀಗಳು ಮದ್ಯಪ್ರವೇಶ ಮಾಡು ಮುಖೆನ ಇಡೀ ಪ್ರಕರಣಕ್ಕೆ ಮುಕ್ತಿ ದೊರಕಿಸಿ ಕೊಡಬೇಕುಎನ್ನುವುದುಅಲ್ಲಿನ ಬಹುತೇಕ ಸಾರ್ವಜನಿಕರ ವಾದವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ