ತುಮಕೂರು
ತುಮಕೂರು ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಫೆ.14 ರಂದು ಬೆಳಗ್ಗೆ 11-30 ಕ್ಕೆ ಪಾಲಿಕೆ ಸಭಾಂಗಣದಲ್ಲಿ ಪಾಲಿಕೆಯ ವಿಶೇಷ ಸಭೆ ನಡೆಯಲಿದೆ. ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆ ವಹಿಸುವರು. ಮಹಾನಗರ ಪಾಲಿಕೆಯ ಚುನಾಯಿತ ಮಂಡಲಿ ಅಸ್ತಿತ್ವಕ್ಕೆ ಬಂದ ಬಳಿಕ ನಡೆಯಲಿರುವ ಮೊದಲನೇ ಸಭೆ ಇದಾಗಲಿದೆ.
ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಪೈಕಿ, ಕಾಂಗ್ರೆಸ್ ಪಕ್ಷವು ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯನ್ನು ಹಾಗೂ ತೆರಿಗೆ ನಿರ್ಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿಸಮಿತಿಯನ್ನು ಜೆ.ಡಿ.ಎಸ್. ಪರಸ್ಪರ ಹಂಚಿಕೊಂಡಿವೆ. ಪಟ್ಟಣ ಯೋಜನೆ ಮತ್ತು ಸುರಣೆ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಯನ್ನು ಬಿ.ಜೆ.ಪಿ.ಗೆ “ಬಿಟ್ಟುಕೊಡಲಾಗಿದೆ”. ಈ ನಾಲ್ಕೂ ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಸಮಿತಿಗಳ ಅಧ್ಯಕ್ಷರನ್ನು ಅಧಿಕೃತವಾಗಿ ಈ ಸಬೆಯಲ್ಲಿ ಆಯ್ಕೆ ಮಾಡಲಾಗುವುದು.
ಸ್ಥಾಯಿ ಸಮಿತಿಗಳ ಸದಸ್ಯರುಗಳು
ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಈಗಾಗಲೇ ಆಯ್ಕೆ ಆಗಿರುವ ಸದಸ್ಯರುಗಳ ಹೆಸರು, ವಾರ್ಡ್ ಮತ್ತು ಪಕ್ಷದ ವಿವರ ಈ ಕೆಳಕಂಡಂತಿದೆ:-
ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ:- ಸೈಯದ್ ನಯಾಜ್ (8 ನೇ ವಾರ್ಡ್, ಕಾಂಗ್ರೆಸ್), ಬಿ.ಜಿ.ಕೃಷ್ಣಪ್ಪ (32 ನೇ ವಾರ್ಡ್, ಬಿಜೆಪಿ), ನೂರುನ್ನೀಸಾ ಬಾನು (10 ನೇ ವಾರ್ಡ್, ಪಕ್ಷೇತರ), Àರೀದಾ ಬೇಗಂ (13 ನೇ ವಾರ್ಡ್, ಕಾಂಗ್ರೆಸ್), ಮುಜೀದಾ ಖಾನಂ (18 ನೇ ವಾರ್ಡ್, ಕಾಂಗ್ರೆಸ್), ನಳಿನಾ ಇಂದ್ರಕುಮಾರ್ (1 ನೇ ವಾರ್ಡ್, ಬಿಜೆಪಿ), ಎಂ.ಪ್ರಭಾವತಿ (9 ನೇ ವಾರ್ಡ್, ಕಾಂಗ್ರೆಸ್).
ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿಸಮಿತಿ:- ಧರಣೇಂದ್ರ ಕುಮಾರ್ (28 ನೇ ವಾರ್ಡ್, ಜೆಡಿಎಸ್), ಎ.ಶ್ರೀನಿವಾಸ್ (20 ನೇ ವಾರ್ಡ್, ಜೆಡಿಎಸ್), ವಿಷ್ಣುವರ್ಧನ (30 ನೇ ವಾರ್ಡ್, ಪಕ್ಷೇತರ), ಬಿ.ಎಸ್.ಮಂಜುನಾಥ್ (17 ನೇ ವಾರ್ಡ್, ಜೆಡಿಎಸ್), ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್, ಜೆಡಿಎಸ್), ಶಕೀಲ್ ಅಹಮದ್ ಷರೀï (12 ನೇ ವಾರ್ಡ್, ಕಾಂಗ್ರೆಸ್), ಶಿವರಾಂ (24 ನೇ ವಾರ್ಡ್, ಪಕ್ಷೇತರ).
ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ:- ಎಂ.ಸಿ. ನವೀನಾ ಅರುಣ (34 ನೇ ವಾರ್ಡ್, ಬಿಜೆಪಿ), ಸಿ.ಎನ್.ರಮೇಶ್ (31 ನೇ ವಾರ್ಡ್, ಬಿಜೆಪಿ), ಎಚ್.ಮಲ್ಲಿಕಾರ್ಜುನಯ್ಯ (26 ನೇ ವಾರ್ಡ್, ಬಿಜೆಪಿ), ಎಚ್.ಎಂ.ದೀಪಶ್ರೀ (4 ನೇ ವಾರ್ಡ್, ಬಿಜೆಪಿ), ಮಂಜುಳ ಕೆ.ಎಸ್.ಆದರ್ಶ್ (25 ನೇ ವಾರ್ಡ್, ಬಿಜೆಪಿ), ಜೆ.ಕುಮಾರ್ (7 ನೇ ವಾರ್ಡ್, ಕಾಂಗ್ರೆಸ್), ಟಿ.ಎಂ. ಮಹೇಶ್ (5 ನೇ ವಾರ್ಡ್, ಕಾಂಗ್ರೆಸ್).
ಲೆಕ್ಕಪತ್ರ ಸ್ಥಾಯಿ ಸಮಿತಿ:- ವಿ.ಎಸ್. ಗಿರಿಜಾ (15 ನೇ ವಾರ್ಡ್, ಬಿಜೆಪಿ), ನಾಸಿರಾ ಬಾನು (14 ನೇ ವಾರ್ಡ್, ಕಾಂಗ್ರೆಸ್), ಚಂದ್ರಕಲಾ (27 ನೇ ವಾರ್ಡ್, ಬಿಜೆಪಿ), ಬಿ.ಜಿ. ವೀಣಾ (6 ನೇ ವಾರ್ಡ್, ಬಿಜೆಪಿ), ಎಸ್.ಮಂಜುನಾಥ್ (2 ನೇ ವಾರ್ಡ್, ಬಿಜೆಪಿ), ಎಚ್.ಎಸ್.ನಿರ್ಮಲ ಶಿವಕುಮಾರ್ (35 ನೇ ವಾರ್ಡ್, ಬಿಜೆಪಿ), ಇನಾಯತ್ ಉಲ್ಲಾ ಖಾನ್ (16 ನೇ ವಾರ್ಡ್, ಕಾಂಗ್ರೆಸ್).
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
