ಬೆಂಗಳೂರು:
ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದು, ಚುನಾವಣಾ ಪ್ರಚಾರ ಮುಗಿದರೂ 6 ಮಂದಿ ಕೈ ಅಭ್ಯರ್ಥಿಗಳಿಗೆ ವಿಶ್ರಾಂತಿ ಪಡೆಯುವ ಅವಕಾಶವಿಲ್ಲದಂತಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಪ್ರಕಾಶ್ ಕೆ.ರಾಥೋಡ್ ಈ ಪಟ್ಟಿ ಪ್ರಕಟಿಸಿದ್ದು, ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುವ 14 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳ ಉಸ್ತುವಾರಿ ಪಟ್ಟಿ ಪ್ರಕಟಿಸಿದ್ದಾರೆ.
ಈ ಕೆಳಗಿನ ಉಸ್ತುವಾರಿಗಳು ತಮಗೆ ವಹಿಸಿದ ಕ್ಷೇತ್ರದಲ್ಲಿ ಏ. 19 ರಿಂದ 21ರವರೆಗೆ ವಾಸ್ತವ್ಯ ಹೂಡಿ, ಪ್ರಚಾರ ಕಾರ್ಯಕ್ರಮಗಳು ಸುಮಗವಾಗಿ ನಡೆಯುವಂತೆ ನೋಡುಕೊಂಡು, ಕಾಂಗ್ರೆಸ್-ಜಡಿಎಸ್ ಮೈತ್ರಿ ಪಕ್ಷದ ಒಮ್ಮತದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಸೂಚಿಸಲಾಗಿದೆ.
ಇನ್ನು ಜಮೀರ್ ಅಹಮದ್ ಹಾಗೂ ಹೆಚ್.ಸಿ. ಮಹದೇವಪ್ಪ, ಯು.ಟಿ.ಖಾದರ್‍ಹೊರತುಪಡಿಸಿದರೆ ಉಳಿದ 6 ಮಂದಿ ಮೊದಲ ಹಂತದಲ್ಲಿ ಮತದಾನ ನಡೆಯುವ ವಿವಿಧ ಕ್ಷೇತ್ರದ ಅಭ್ಯರ್ಥಿಗಳಾಗಿರುವುದು ವಿಶೇಷ. ಚುನಾವಣಾ ಪ್ರಚಾರದಲ್ಲಿ ಸುತ್ತಾಡಿ ಸುಸ್ತಾಗಿರುವ ಇವರು ಕೊಂಚ ವಿಶ್ರಾಂತಿ ಪಡೆಯುವ ಅವಕಾಶ ಕೂಡ ಕಳೆದುಕೊಂಡಿದ್ದಾರೆ.
ಉಸ್ತುವಾರಿಗಳ ವಿವರ ಇಂತಿದೆ:
1. ಶಿವಮೊಗ್ಗ- ಡಿ.ಕೆ. ಸುರೇಶ್
2. ಬಳ್ಳಾರಿ- ಆರ್. ದ್ರುವನಾರಾಯಣ
3. ಉತ್ತರ ಕನ್ನಡ- ಬಿ.ಕೆ.ಹರಿಪ್ರಸಾದ್
4. ವಿಜಯಪುರ- ಹೆಚ್.ಸಿ. ಮಹದೇವಪ್ಪ
5. ರಾಯಚೂರು- ಡಾಂ. ಎಂ. ವೀರಪ್ಪ ಮೊಯ್ಲಿ
6. ಧಾರವಾಡ- ಕೃಷ್ಣಬೈರೇಗೌಡ
7. ಬೆಳಗಾವಿ- ಯು.ಟಿ. ಖಾದರ್
8. ಹಾವೇರಿ- ಜಮೀರ್ ಅಹಮದ್ ಖಾನ್
9. ದಾವಣಗೆರೆ- ಕೆ.ಹೆಚ್. ಮುನಿಯಪ್ಪ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/congress-ofc-bnglr-360x360.gif)