ಗಡಿನಾಡಿನ ಪ್ರದೇಶದಲ್ಲಿ ಶಿಕ್ಷಕರಿಗೆ ಹಲವು ಸಮಸ್ಯೆಗಳು….!!!

ಪಾವಗಡ

ವಿಶೇಷ ವರದಿ :ಹೆಚ್.ರಾಮಾಂಜಿನಪ್ಪ,    

     ಆಂಧ್ರದ ಪ್ರದೇಶದ ಮಧ್ಯ ಭಾಗದಲ್ಲಿ ಪಾವಗಡ ತಾಲ್ಲೂಕು ಇದ್ದು,ಹೆಚ್ಚಿನದಾಗು ಇಲ್ಲಿನ ಜನ ತೆಲುಗು ಬಾಷೆಯನ್ನು ರೂಡಿಸಿಕೊಂಡಿದ್ದು,ಕೆಲ ಶಾಲೆಗಳಲ್ಲಿ ಶಿಕ್ಷಕರು ತೆಲುಗುನಲ್ಲಿ ಮಾತನಾಡಿ ಪಾಠ ಪ್ರವಚನಗಳು ಮಾಡಬೇಕಾದ ಪರಿಸ್ಥಿತಿ ನೀರ್ಮಾಣ ವಾಗಿದ್ದು,ಇಲ್ಲಿನ ಕಛೇರಿಯಲ್ಲಿ ಸಹ ಆಡಳಿತ ಮತ್ತು ವ್ಯವಾರಗಳು ಮಾಡಬೇಕಾದರೆ ತೆಲುಗು ಬಾಷೆಯಲ್ಲಿ ಮಾತನಾಡಿದರೆ ಮಾತ್ರ ಇಲ್ಲಿನ ಜನರು ಅರ್ಥ ಮಾಡಿಕೊಳ್ಳಲು ಸಾಧ್ಯ,ಇಂತಹ ಗಡಿಭಾಗದ ತಾಲ್ಲೂಕಿಗೆ ಶೈಕ್ಷಣಿಕವಾಗಿ,ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡಲು ಸರ್ಕಾರ ಗಮನ ಹರಿಸಲು ಮುಂದಾಗಬೇಕಾಗಿದೆ.

       ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕುಂಠಿತವಾಗಲು ತಾಲ್ಲೂಕಿನಲ್ಲಿ 15 ವರ್ಷಗಳಿಂದ ಸತತವಾಗಿ ಮಳೆ ಬೆಳೆ ಅಗದ ಕಾರಣ ಕೂಲಿ ಕಾರ್ಮಿಕರು ಮತ್ತು ರೈತಾಪಿ ವರ್ಗದ ಜನರು ಕೂಲಿಗಾಗಿ ಹಳ್ಳಿಗಳು ಬಿಟ್ಟು ನಗರಗಳಿಗೆ ವಲಸೆ ಹೋಗುತ್ತಿರುವುದರಿಂದ ತಮ್ಮ ಮಕ್ಕಳನ್ನು ಜೋತೆಯಲ್ಲಿ ಕರೆದುಕೊಂಡು ಹೋಗಿ ನಗರಗಳಲ್ಲಿ ಕಾನ್ವೆಂಟ್‍ಗಳಲ್ಲಿ ಸೇರಿಸುತ್ತಿರುದಾಗಿ ಮಾಹಿತಿ ತಿಳಿದು ಬಂದಿದ್ದು,ಕೆಲವರು ಮಕ್ಕಳನ್ನು ಇಂಗ್ಲೇಷ್ ಕಲಿಯಲು ಹಣ ಕೋಟ್ಟು ಶಾಲೆಗಳಿಗೆ ಸೇರಿಸುತ್ತಿದ್ದಾದರು ಇವರ ಕನಸುನಂತೆ ಕಲಿಕೆ ಸಿಗುತ್ತಿಲ್ಲ,ಸರ್ಕಾರ ಎಲ್ಲರಂತೆ ಬಡವರ ಮಕ್ಕಳು ಒಳ್ಳೆಯ ಗುಣ ಮಟ್ಟದಲ್ಲಿ ವಿದ್ಯಾಭ್ಯಾಸ ಸಿಗಲಿ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು,ಆದರ್ಶ,ಅಂಬೇಡ್ಕರ್ ವಸತಿ ಶಾಲೆ,ವಸತಿ ನಿಲಯಗಳನ್ನು ತೆರೆದು ವಿವಿಧ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಸರ್ಕಾರ ಶಾಲೆಗಳನ್ನು ಕಡೆಗಣಿಸುತ್ತಿರವ ಕಾರಣಗಳು ಗೋತ್ತಾಗುತ್ತಿಲ್ಲ,

       ಇಂಗ್ಲೀಷ್ ವ್ಯಾಮೋಹದಲ್ಲಿ ಸರ್ಕಾರದ ಶಾಲೆಗಳು ನಶಿಸಿ ಹೋಗುತ್ತಿವೆ,ಖಾಸಿಗಿ ಶಾಲೆಗಳು ತಲೆ ಎತ್ತುತಿವೆ.ಪ್ರತಿಯೋಬ್ಬರು ತನ್ನ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು ಎಂಬ ಹಂಬಲದಲ್ಲಿ ತಂದೆ ತಾಯಿಗಳು ಖಾಸಿಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ,ಗುಣ ಮಟ್ಟದ ವಿದ್ಯಾಭ್ಯಾಸ ಸಿಗುತ್ತದೆ ಎಂಬ ಉದ್ದೇಶದಿಂದ ಕಾನ್ವೆಂಟ್‍ಗಳಿಗೆ ಸೇರಿಸಿದರೆ ಇಂಗ್ಲೀಷ್ ವಿದ್ಯಾಭ್ಯಾಸ ಸಿಗುತ್ತದೆ ಎಂಬ ಕಾರಣಕ್ಕೆ ಮಾರಿಹೋಗುತ್ತಿದ್ದಾರೆ.

 ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಗೆ ಕಾರಣ:

      ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಿದ್ಯಾಭ್ಯಾಸ ಸಿಗುವುದಿಲ್ಲ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದುಬ್ಬಾರಿ ಡೋನೇಷನ್‍ನಲ್ಲಿ ಸಹ ವಿದ್ಯಾರ್ಥಿಗಳನ್ನು ಸೇರಿಸುತ್ತಿದ್ದಾರೆ,ಸರ್ಕಾರಿ ಶಾಲಾ ಕೆಲ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಹೋಗದೇ ಇರುವುದು ಸಹ ಒಂದು ಕಾರಣವಾಗಿದ್ದು,ಪಟ್ಟಣದಿಂದ ಗಡಿಭಾಗದ ಗ್ರಾಮಗಳು 38 ಕಿಲೋ ಮೀಟರ್ ದೂರವಿರುವ ಶಾಲೆಗಳಿಗೆ ಹೋಗುವ ಶಿಕ್ಷಕರು 11 ಗಂಟೆ ಅಗುತ್ತದೆ ಮತ್ತೆ ಸಂಜೆ 4 ಗಂಟೆಗೆ ಹೋರಡುತ್ತಾರೆ ಇಂತಹ ಶಿಕ್ಷಕರನ್ನು ಶಾಲಾ ವ್ಯಾಪ್ತಿಯಲ್ಲಿ ವಾಸಿಸಲು ಮೇಲ್ದಾಧಿಕಾರಿಗಳು ಗಮನ ಹರಿಸಿ ಶಿಕ್ಷಕರನ್ನು ನೀಯೋಜಿಸಬೇಕಾಗಿದ್ದು,ಪ್ರೌಡ ಶಾಲೆಗಳ ಶಿಕ್ಷಕರು ತಮ್ಮ ಮಕ್ಕಳು ಕಾನ್ವೆಂಟ್‍ಗಳಂತೆ ಫಲಿತಾಂಶ ಬರಬೇಕು ಎಂಬ ಜವಾಬ್ದಾರಿಂದ ತರಭೇತಿ ನೀಡಿದರೆ ಮಾತ್ರ ಸರ್ಕಾರಿ ಶಾಲೆಗಳಿಗೆ ಹೆಚ್ಚು ಹಾಜರಾತಿ ಸಿಗುತ್ತದೆ ಎಂದು ಪ್ರಜ್ಞಾವಂತ ನಾಗರೀಕರ ಮಾತಾಗಿದೆ.

ಸ್ವತಃ ವ್ಯವಾರದಲ್ಲಿ ಕೆಲ ಶಿಕ್ಷಕರು ಗೈರು

       ಕೆಲವು ಶಿಕ್ಷಕರು ಪೈನ್ಸ್‍ಶಿಯಲ್ ವ್ಯವಾರ ಹಾಗೂ ಕೆಲ ಶಿಕ್ಷಕರು ದುಶ್ಚಟಗಳಿಗೆ ಬಲಿಯಾಗಿ ಕಾಲಾಹರಣ ಮಾಡುತ್ತಿದ್ದು,ಕೆಲ ಶಕ್ಷಕರು ವೈಯುಕ್ತ ಕೆಲಸಗಳಲ್ಲಿ ತೋಡಗಿ ಶಾಲೆಗಳಿಗೆ ಸರಿಯಾದ ಸಮಯಕ್ಕೆ ಶಾಲೆಗಳಿಗೆ ಗೈರು ಹಾಜರಾಗುತ್ತಿದ್ದು,ಇಂತಹ ಶಿಕ್ಷಕರನ್ನು ಕಾನೂನು ರೀತಿಯಾಗಿ ಕ್ರಮ ತೆಗೆದು ಕೊಂಡರೆ ಮಾತ್ರ ಪೋಷಕರಿಗೆ ಸರ್ಕಾರ ಶಾಲೆಗಳ ಮೇಲೆ ವಿಶ್ವಾಸ ಮೂಡುವ ಸೂಚನೆಗಳು ಇವೆ.
ಶಾಲಾ ಸಮಯದಲ್ಲಿ ಶಾಲೆಗಳಿಗೆ ಮೇಲ್ದಾಧಿಕಾರಿಗಳು ಬೇಟಿ ನೀಡದ ಕಾರಣ ಶಿಕ್ಷಕರಿಗೆ ಬಯವಿಲ್ಲದೆ ಕಾರಣ ಶಾಲೆಗಳಿಗೆ ಸರಿಯಾಗಿ ಹೋಗುತ್ತಿಲ್ಲ.ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಫಾಠ ಪ್ರವಚನಗಳು ಸಿಗುತ್ತಿಲ್ಲ ಎಂಬ ಕಾರಣ ಸಹ ಸರ್ಕಾರಿ ಶಾಲೆಗಳಿಗೆ ಹಾಜರಾತಿ ಕಡಿಮೆ ಅಗಲು ಇದು ಒಂದು ಕಾರಣವಾಗಿರ ಬಹುದು.

       ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಹುದ್ದೆಗಳು ನೀಡುವ ಸಂದರ್ಭದಲ್ಲಿ ಮೀಸಲಾತಿ ನೀಡುವ ಬರವಸೆ ನೀಡಿದರೆ ಸರ್ಕಾರ ಶಾಲೆಗಳ ಹಾಜರಾತಿ ಹೆಚ್ಚುತವೆ,ವಸತಿ ನಿಲಯ ಮತ್ತು ವಸತಿ ಶಾಲೆಗಳನ್ನು ಗಡಿಭಾಗದ ಗ್ರಾಮೀಣ ಪ್ರದೇಶದ ಮಧ್ಯ ಭಾಗದಲ್ಲಿ ತೆರೆಯ ಬೇಕಾಗಿದೆ.

2018-19 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದ ಮಾಹಿತಿ

     ಪಾವಗಡ ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ 231 ಶಾಲೆಗಳು ಇದ್ದು,13971 ವಿದ್ಯಾರ್ಥಿಗಳು ಇದ್ದು,ಸರ್ಕಾರಿ ಪ್ರೌಡ ಶಾಲೆಗಳು 21,ವಿದ್ಯಾರ್ಥಿಗಳು 2312 ಇದ್ದು, 2 ಅನುದಾನಿತ ಪ್ರಾಥಮಿಕ ಶಾಲೆಗಳು ಇದ್ದು,344 ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದು,ಅನುದಾನಿತ ಪ್ರೌಡ ಶಾಲೆಗಳು 33 ಇದ್ದು,ವಿದ್ಯಾರ್ಥಿಗಳ ಸಂಖ್ಯೆ 4147 ಇದ್ದು,ಅನುದಾನ ರಹಿತ ಪ್ರಾಥಮಿಕ 33 ಶಾಲೆಗಳು ಇದ್ದು,ವಿದ್ಯಾರ್ಥಿಗಳು 8617 ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಅನುದಾನರಹಿತ ಪ್ರೌಡ ಶಾಲೆಗಳು 10 ಇದ್ದು,ವಿದ್ಯಾರ್ಥಿಗಳ ಸಂಖ್ಯೆ 4297 ವಿದ್ಯಾರ್ಥಿಗಳು ಇದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

        2018-19 ನೇ ಸಾಲಿನ ಸರ್ಕಾರಿ ಪ್ರೌಡ ಶಾಲೆಗಳ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಳಿತ 912 ವಿದ್ಯಾರ್ಥಿಗಳಲ್ಲಿ 823 ವಿದ್ಯಾರ್ಥಿಗಳು ಉತ್ರ್ತಿಣರಾಗಿದ್ದು,ಶೇಕಡ 90.24 ಬಂದಿದ್ದು,7 ಶಾಲೆಗಳಲ್ಲಿ ಶೇಕಡ 100 ರಷ್ಟು ಫಲಿತಾಂಶ ಬಂದಿದೆ.ಅನುದಾನಿತ ಪ್ರೌಡ ಶಾಲೆಗಳ ವಿದ್ಯಾರ್ಥಿಗಳು 1170 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು,1029 ವಿದ್ಯಾರ್ಥಿಗಳು ಉತ್ರ್ತಿರಾಗಿದ್ದು,ಶೇಕಡವಾರು ಫಲಿತಾಂಶ 87.94 ರಷ್ಟು ಬಂದಿದ್ದು,8 ಶಾಲೆಗಳು ಶೇಕಡ 100 ರಷ್ಟು ಫಲಿತಾಂಶ ಬಂದಿದೆ.ಅನುದಾನ ರಹಿತ ಶಾಲೆಗಳಲ್ಲಿ ಕುಳಿತ 581 ವಿದ್ಯಾರ್ಥಿಗಳಲ್ಲಿ 528 ವಿದ್ಯಾರ್ಥಿಗಳು ಉತ್ರ್ತಿಣರಾಗಿದ್ದು,ಶೇಕಡ 90.87 ರಷ್ಟು ಫಲಿತಾಂಶ ಕಂಡಿದೆ.7 ಶಾಲೆಗಳಲ್ಲಿ ಶೇಕಡ 100 ರಷ್ಟ ಫಲಿತಾಂಶ ಬಂದಿದ್ದು,ಸರ್ಕಾರ ಶಾಲೆಗಳಗಿಂತ ಡೋನೇಷನ್ ಪಡೆದ ಶಾಲೆಗಳ ಹೆಚ್ಚಿನ ಫಲಿತಾಂಶಗಳು ತಂದಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

        ತಾಲ್ಲೂಕಿನ ಗಡಿಭಾಗದಲ್ಲಿ ಇರುವ ಸರ್ಕಾರಿ ಪ್ರೌಡ ಶಾಲೆಗಳಲ್ಲಿ ಆಂಧ್ರದ ಗಡಿಭಾಗದಲ್ಲಿ ಇರುವ ನಕ್ಸಲ್ ಪ್ರದೇಶ ಹಾಗೂ ಮಾತೃ ಬಾಷೆಯಾಗಿ ಹೆಚ್ಚಿನದಾಗಿ ತೆಲುಗು ಮಾತನಾಡುವ ಗಡಿಗ್ರಾಮಗಳ ವ್ಯಾಪ್ತಿಯ ಸರ್ಕಾರಿ ವಳ್ಳೂರು,ನಾಗಲಮಡಿಕೆ,ಪ್ರೌಡ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100 ರಷ್ಟು ಫಲಿತಾಂಶ ಬಂದಿದ್ದು,ಸರ್ಕಾರಿ ಶಾಲೆಗಳು ಸಹ ಕಾನ್ವೆಂಟ್‍ಗಳಿಗಿಂತ ಕಡಿಮೇನಿಲ್ಲ ಎಂಬಂತೆ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ತಂದಿವೆ.

        ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮಂಜೂರಾತಿ ಹುದ್ದೆಗಳು 844 ಇದರಲ್ಲಿ 709 ಶಿಕ್ಷಕರು ಕಾರ್ಯಾನಿರ್ವಸುತ್ತಿದ್ದು,135 ಶಿಕ್ಷಕರು ಹುದ್ದೆಗಳು ಖಾಲಿವೆ,ಅನುದಾನಿತ ಮಂಜೂರಾತಿ ಹುದ್ದೆಗಳು 15 ಇದರಲ್ಲಿ 9 ಶಿಕ್ಷಕರು ಕಾರ್ಯಾನಿರ್ವಸುತ್ತಿದ್ದು,6 ಹುದ್ದೆಗಳು ಖಾಲಿ ಇವೆ,ಅನುದಾನರಹಿತ 252 ಮಂಜೂರಾತಿ ಹುದ್ದೆಗಳು ಇದ್ದು,ಇದರಲ್ಲಿ 212 ಶಿಕ್ಷಕರು ಕಾರ್ಯಾನಿರ್ವಹಿಸುತ್ತಿದ್ದಾರೆ,60 ಹುದ್ದೆಗಳು ಖಾಲಿ ಇವೆ.

304 ಶಿಕ್ಷಕರ ಹುದ್ದೆಗಳು ಖಾಲಿ,

         ಸರ್ಕಾರಿ ಪ್ರೌಡ ಶಾಲಾ ಶಿಕ್ಷಕರ ಮಂಜೂರಾತಿ ಹುದ್ದೆಗಳು 188,ಕಾರ್ಯಾನಿರ್ವಹಿಸುತ್ತಿರವ ಶಕ್ಷಕರು 146, ಖಾಲಿ ಹುದ್ದೆಗಳು 42,ಅನುದಾನಿತ ಶಾಲೆಗಳ ಶಿಕ್ಷಕರ ಮಂಜೂರಾತಿ ಹುದ್ದೆಗಳು 252, ಕಾರ್ಯಾನಿರ್ವಸುತ್ತಿರು ಶಿಕ್ಷಕರು 212,ಖಾಲಿ ಇರುವ ಹುದ್ದೆಗಳು 40,ಅನುದಾನರಹಿತ ಶಿಕ್ಷಕರ ಹುದ್ದೆಗಳು 151,ಕಾರ್ಯಾನಿರ್ವಹಿಸುತ್ತಿರುವ ಶಿಕ್ಷಕರು 130,ಖಾಲಿ ಇರುವ ಶಿಕ್ಷಕರ ಹುದ್ದೆಗಳು 21 ಇದ್ದು,ಸರ್ಕಾರಿ ಮತ್ತು ಅನುದಾನಿತ ಹಾಗೂ ಅನುದಾನರಹಿತ ಪ್ರಥಮಿಕ ಮತ್ತು ಪ್ರೌಡ ಶಾಲಾ ಶಿಕ್ಷಕರ ಹುದ್ದೆಗಳು 304 ಖಾಲಿ ಇವೆ ಎಂದು ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಮಾಹಿತಿ ನೀಡಿದ್ದು,ಪಾವಗಡ ತಾಲ್ಲೂಕು ಶೈಕ್ಷಣಿಕವಾಗಿ ಹಿಂದುಳಿದ ಭಾಗದ ಶಾಲಾ ಶಿಕ್ಷಕರನ್ನು ನೇಮಿಸಲು ಮೇಲ್ದಾಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಹುದ್ದೆಗಳನ್ನು ತುಂಬ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

         ರಾಜ್ಯದ ಗಡಿ ಭಾಗದಲ್ಲಿ ಇರುವ ಪಾವಗಡ ತಾಲ್ಲೂಕು ಆಂಧ್ರ ಪ್ರದೇಶ ಸುತ್ತಲೂ ಅವರಿಸಿದ್ದು,ಹೆಚ್ಚಿನದಾಗಿ ಮಾತೃ ಭಾಷೆ ತೆಲುಗು ಮಾತನಾಡುತ್ತಿದ್ದು,ಇಲ್ಲಿಗೆ ಶೈಕ್ಷಣಿಕವಾಗಿ ವಿವಿದ ಸೌಲಭ್ಯಗಳು ದೊರೆಯಬೇಕಾಗಿದ್ದು,ಕನ್ನಡ ಬಾಷೆಗೆ ಹೆಚ್ಚು ಒತ್ತು ಕೂಡುವ ದೃಷ್ಟಿಯಲ್ಲಿ ಕನ್ನಡ ಪರ ಸಂಘಟನೆಗಳು ಶ್ರಮಿಸಬೇಕಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap