ಜಿಲ್ಲಾಡಳಿತ, ಜಿಲ್ಲಾಸ್ಪತ್ರೆಗೆ ಮಾಜಿ ಸಂಸದ ಎಸ್‍ಪಿಎಂ ನೆರವು

ತುಮಕೂರು

    ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಹಾಗೂ ಇತರ ಮುಖಂಡರು ಕೊರೊನಾ ಸಂಕಷ್ಟ ಪರಿಹಾರ ಕಾರ್ಯಗಳಿಗಾಗಿ ಐದು ಲಕ್ಷ ರೂ.ಗಳ ದೇಣಿಗೆ ನೀಡಿದರು.ಬುಧವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಅವರನ್ನು ಭೇಟಿ ಮಾಡಿದ ಮುದ್ದಹನುಮೇಗೌಡರು, ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆ ಹಾಗೂ ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿರುವವರಿಗೆ ಸರ್ಕಾರ, ಜಿಲ್ಲಾಡಳಿತದಿಂದ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ಈ ವೇಳೆ ಮುದ್ದಹನುಮೇಗೌಡರು ತಮ್ಮ ಪೆನ್ಷನ್ ಹಣದ ಒಂದು ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.

     ಜಿಲ್ಲಾ ಆಸ್ಪತ್ರೆಗೆ ಕೊರೊನಾ ಸಂಬಂಧಿ ಚಿಕಿತ್ಸೆಗಾಗಿ ಅಗತ್ಯವಿರುವ ಉಸಿರಾಟ ಪರೀಕ್ಷೆಯ ಬೈಪಾಪ್ ಯಂತ್ರ ಖರೀದಿಗಾಗಿ ಒಂದು ಲಕ್ಷ ರೂ.ಗಳನ್ನು ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಹಾಜರಿದ್ದರು.

    ಅಲ್ಲದೆ, ನಗರದ ಗಾರ್ಡನ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವೀರಶೈವ ಸಮಾಜ ಹಾಗೂ ನಾಗರೀಕ ಸಮಿತಿಯಿಂದ ಲಾಕ್‍ಡೌನ್‍ನಿಂದ ಕಷ್ಟಕ್ಕೊಳಗಾಗಿರುವವರಿಗೆ ವಿತರಿಸಲು ನಡೆಸಿರುವ ದಾಸೋಹ ಕಾರ್ಯಕ್ಕೆ 50 ಸಾವಿರ ರೂ.ಗಳನ್ನು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಅವರಿಗೆ ನೀಡಿದರು. ಸಮಿತಿಯಸೇವಾಕಾರ್ಯವನ್ನು ಮುದ್ದಹನುಮೇಗೌಡರು ಅಭಿನಂದಿಸಿದರು.

    ಮರಳೂರು ಬಡಾವಣೆಯ ಬೀರೇಶ್ವರ ಕಲ್ಯಾಣ ಮಂಟಪ್ಪದಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್. ರಾಜೇಂದ್ರ ನೇತೃತ್ವದಲ್ಲಿ ಆರ್.ಆರ್.ಅಭಿಮಾನಿ ಬಳಗ ಅಡುಗೆ ಸಿದ್ಧಪಡಿಸಿ ಅಗತ್ಯವಿರುವವರಿಗೆ ವಿತರಿಸುವ ಕಾರ್ಯ ಪರಿಶೀಲಿಸಿದ ಮಾಜಿ ಸಂಸದ ಮುದ್ದಹನುಮೇಗೌಡರು, ಸೇವಾ ಕಾರ್ಯ ಪ್ರಶಂಸಿಸಿದರು.

     ಆರ್.ಆರ್. ಅಭಿಮಾನಿ ಬಳಗದ ವತಿಯಿಂದ ನಡೆಯುತ್ತಿರುವ ದಾಸೋಹಕ್ಕೂ 50 ಸಾವಿರ ರೂ.ಗಳ ದೇಣಿಗೆಯನ್ನು ನೀಡಿದರು. ಕೋವಿಡ್-19 ಹೆಮ್ಮಾರಿ ಇಡೀ ಪ್ರಪಂಚದಾದ್ಯಂತ ಜನರ ಬದುಕನ್ನೇ ಕಸಿದುಕೊಂಡಿದೆ. ನಮ್ಮ ದೇಶ ಮತ್ತು ನಮ್ಮ ರಾಜ್ಯದಲ್ಲಿಯೂ ಸಹ ಈ ಸಮಸ್ಯೆ ಕಾಡುತ್ತಿದೆ. ನಮ್ಮ ಜಿಲ್ಲೆಯಲ್ಲಿ ಇದುವರೆಗೂ ಕೊರೋನ ಮಹಾಮಾರಿಯಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಆದಷ್ಟು ಶೀಘ್ರವಾಗಿ ಕೋವಿಡ್ ಸಮರದಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ.

    ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ, ಅನಗತ್ಯವಾಗಿ ಓಡಾಡದೆಯೇ ಮನೆಯಲ್ಲೇ ಇದ್ದು, ಕೋವಿಡ್-19ನ್ನು ಓಡಿಸಲು ಸಹಕರಿಸಬೇಕೆಂದು ಮನವಿ ಮಾಡಿದರು. ಕೋವಿಡ್ ಸಮರದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಆಶಾ, ಅಂಗನವಾಡಿ, ಹೋಂಗಾಡ್ರ್ಸ್ ಸೇರಿದಂತೆ ಮತ್ತಿತರೆ ಇಲಾಖೆಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿವೆ, ಈ ಸಮರದಲ್ಲಿ ಭಾಗವಹಿಸಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ಅಹರ್ನಿಶಿ ಶ್ರಮಿಸುತ್ತಿರುವ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಾನು ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿ, ಆರ್.ಆರ್.ಅಭಿಮಾನಿ ಬಳಗದ ಸೇವೆ ಮತ್ತಷ್ಟು ಯಶಸ್ವಿಯಾಗಲಿ ಎಂದು ಹೇಳಿದರು.

    ಈ ವೇಳೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್. ರಾಜೇಂದ್ರ, ಆರ್.ರವೀಂದ್ರ, ಮುಖಂಡರಾದ ಕೆಂಪೀರೇಗೌಡ್ರು, ಸಿ.ಬಿ.ಶಶಿಧರ್, ಸಾಸಲು ಸತೀಶ್, ರಾಯಸಂದ್ರ ರವಿಕುಮಾರ್, ಕಲ್ಲಳ್ಳಿ ದೇವರಾಜ್, ಆರ್.ಆರ್. ಅಭಿಮಾನಿ ಬಳಗದ ರಾಜೇಶ್ ದೊಡ್ಮನೆ, ಟಿ.ಬಿ.ಮಲ್ಲೇಶ್, ದರ್ಶನ್ ಮುಂತಾದವರು ಹಾಜರಿದ್ದರು.

    ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಮುದ್ದಹನುಮೇಗೌಡರು ಮತ್ತು ಮುಖಂಡರು, ಕೋವಿಡ್-19 ಕಾರ್ಯಕ್ಕಾಗಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಕಾರ್ಯಗಳಿಗಾಗಿ ಒಂದು ಲಕ್ಷ ರೂ. ಚೆಕ್ ಅನ್ನು ಜಿಲ್ಲಾಧ್ಯಕ್ಷರು ಕಚೇರಿಯಲ್ಲಿ ಹಾಜರಿರದ ಕಾರಣ, ಅವರ ಪರವಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೂಳೂರು ವಿಜಯಕುಮಾರ್ ಅವರಿಗೆ ನೀಡಿದರು.ಕಾಂಗ್ರೆಸ್ ಮುಖಂಡರಾದ ಸಾಸಲು ಸತೀಶ್, ರಾಯಸಂಸದ್ರ ರವಿಕುಮಾರ್, ಸಿ.ಬಿ.ಶಶಿಧರ್, ಕೆಂಪೀರೇಗೌಡರು ಮುದ್ದಹನುಮೇಗೌಡರ ಜೊತೆ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link