ವಾಸವಿ ಸಮೂಹ ಶಾಲೆಗಳ ಕ್ರೀಡೋತ್ಸವ

ಚಿತ್ರದುರ್ಗ;

      ಇಲ್ಲಿನ ಪ್ರತಿಷ್ಠಿತ ಶ್ರೀ ವಾಸವಿ ವಿದ್ಯಾಸಂಸ್ಥೆಯ ವಾರ್ಷೀಕೋತ್ಸವದ ಅಂಗವಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕ್ರೀಡೋತ್ಸವದ ಪ್ರಯುಕ್ತ ಕ್ರೀಡಾ ಜ್ಯೋತಿಯು ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು.

          ಮುಖ್ಯ ರಸ್ತೆಯಲ್ಲಿನ ವಾಸವಿ ಮಹಲ್ ಬಳಿಯಿರುವ ಕನ್ಯಕಾಪರಮೇಶ್ವರಿಯ ಕಪಾಶ್ರೀರ್ವಾದದೊಂದಿಗೆ ನಗರದ ಗಾಂಧಿವೃತ್ತ , ಆನೆಬಾಗಿಲು , ಉತ್ಸವಾಂಬ ದೇವಸ್ಥಾನ , ದೊಡ್ಡಪೇಟೆ ,ಮೈಸೂರು ಕೆಫೆ ಮುಂಭಾಗದ ರಸ್ತೆಯಲ್ಲಿ ಕ್ರೀಡಾಜ್ಯೋತಿ ಸಾಗಿತು.
ಶಾಲೆಯ ಮುಖ್ಯ ದ್ವಾರದಲ್ಲಿ ಶ್ರೀವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಪಿ.ಎಲ್.ಸುರೇಶ್ ರಾಜುರವರು ಹಾಗೂ ಕಾರ್ಯದರ್ಶಿಗಳಾದ ರಾಮಲಿಂಗ ಶ್ರೇಷ್ಠಿಯವರು ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಗಣ್ಯರು ಉಪಸ್ಥಿತರಿದ್ದು ಪುಷ್ಪವೃಷ್ಠಿ ಮೂಲಕ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿದರು.

        ನಂತರ ನಡೆದ ಕಾಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ಅವರು, ಕೀಡೆಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿಯೂ ಮನುಷ್ಯ ಸದೃಡನಾಗುತ್ತಾನೆ. ಉತ್ತಮ ಅರೋಗ್ಯಕ್ಕೆ ಕ್ರೀಡೆ ಅತೀ ಮುಖ್ಯವೆಂದು ಅಭಿಪ್ರಾಯ ಪಟ್ಟರು

        ದೈಹಿಕ ಸಾರ್ಮಥ್ರ್ಯ ಮತ್ತು ಮಾನಸಿಕ ಸ್ಥೈರ್ಯ ತಂದುಕೊಡುವ ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಸಹಜ. ಇಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಇಲ್ಲಿ ಗೆಲುವಿಗಿಂತ ಪಾಲ್ಗೊಳ್ಳುವುದು ಮುಖ್ಯ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕರೆ ನೀಡಿದರು

       ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಬಾರದು. ಕ್ರೀಡೆ, ಕಲೆ, ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳಿಗೆ ಎಲ್ಲಾ ರೀತಿಯ ಸಹಕಾರ ಸಿಗಬೇಕು ಎಂದು ಸುರೇಶ್‍ರಾಜು ಹೇಳಿದರು

      ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಮಲಿಂಗ ಶ್ರೇಷ್ಠಿ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು

      ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಗುರುರಾಜ್ ನಿರ್ದೇಶಕರಾದ ಎಲ್.ಎನ್. ರಾಜ್‍ಕುಮಾರ್ ಮತ್ತು ವಾಸವಿ ಸಮೂಹ ಶಾಲೆಯಗಳ ಮುಖ್ಯೋಪಾಧ್ಯಾಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .

       ದೈಹಿಕ ಶಿಕ್ಷಕರಾದ ಶ್ರೀಮತಿ ಹೆಚ್.ಟಿ ಉಷಾ ರವರು ಕ್ರೀಡಾ ಪ್ರತಿಜ್ಞೆಯನ್ನು ನೆರೆವೆರಿಸಿದರು. ಶೀಮತಿ ಕೆ.ಹೆಚ್. ಸಂಗೀತಾರವರು ಸ್ವಾಗತಿಸಿದರು ಹಾಗೂ ಶ್ರೀಮತಿ ಜಿ.ಟಿ. ಶಿಲ್ಪರವರು ವಂದಿಸಿದರು. ವಿದ್ಯಾರ್ಥಿಗಳು ಅಮಿತೋತ್ಸಾಹದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link