ಹಿರಿಯೂರು :
ವಿ.ವಿ.ಪುರ ಗ್ರಾಮಪಂಚಾಯಿತಿಯ 11 ಗ್ರಾಮಗಳಿಗೆ ವಾಣಿವಿಲಾಸ ಸಾಗರ ಜಲಾಶಯ ಮೂಲದಿಂದ ಶಾಶ್ವತ ಶುದ್ದ ಕುಡಿಯುವ ನೀರಿನ ಪೂರೈಕೆಯ ವಿಚಾರವಾಗಿ ಜಿಲ್ಲಾ ಪಂಚಾಯಿತಿ ಸಿಇಓ ಸತ್ಯಭಾಮಾರವರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ವಿ.ವಿ.ಸಾಗರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಲಾಶಯದ ಬಳಿಯಿರುವ ಇಂಟೆಕ್ ವೆಲ್ ಇಂಟೆಕ್ ಪೈಪ್ ಲೈನ್ ಜ್ಯಾಕ್ ವೆಲ್ ಅಫ್ರೋಚ್ ಸೇತುವೆ ಹಾಗೂ ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ, ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂಧರ್ಭದಲ್ಲಿ ಸದರಿ ಯೋಜನೆಗೆ ಸಂಬಂಧಿಸಿದ ಡಿಜೈನ್ ಹಾಗೂ ಡ್ರಾಯಿಂಗ್‍ಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಸುಮಾರು ಮದ್ಯಾಹ 3 ಗಂಟೆಯವರಿಗೂ ಜಲಾಶಯದ ಕಾಮಗಾರಿಗಳ ಪರಿವೀಕ್ಷಣೆ ನೆಡೆಸಿ ಜಲಾಶಯದ ಎಲ್ಲಾ ಕಡೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಭ್ರಷ್ಟಾಚಾರ ವಿರೋಧಿ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ಎ.ಉಮೇಶ್, ವಿವಿಪುರ ಗ್ರಾ.ಪಂ.ಅಧ್ಯಕ್ಷ ವೆಂಕಟೇಶ್ ಹಾಗೂ ಗ್ರಾಮಿಣ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಅಭಿಯಂತರಾದ ಮಂಜುನಾಥ್, ಉಪವಿಭಾಗದ ಸೆಕ್ಷನ್ ಆಫೀಸರ್ ರಾಮಚಂದ್ರಪ್ಪ, ಯೋಜನೆಯ ಗುತ್ತಿಗೆದಾರ ಪ್ರಮೋದ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಮ್‍ಕುಮಾರ್, ಗ್ರಾ.ಪಂಚಾಯಿತಿ ಪಿಡಿಒ ಕುಮಾರಿ ಎ.ಹನ್ಸೀರಾಭಾನು, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ಕಳೆದ ಏಪ್ರಿಲ್ 20 ರಂದು ಕುಡಿಯುವ ನೀರಿಗಾಗಿ ಆಗ್ರಹಿಸಿ ಕರ್ನಾಟಕ ಭ್ರಷ್ಟಾಚಾರ ವಿರೋಧಿ ವೇದಿಕೆ ನೇತೃತ್ವದಲ್ಲಿ ವಿ.ವಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಗ್ರಾಮಗಳ ಗ್ರಾಮಸ್ಥರು ಸಮರ್ಪಕ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದಾಗಿದೆ.