ಹರಪನಹಳ್ಳಿ
ಪಟ್ಟಣದಲ್ಲಿ ಈಗಿರುವ ವಾರದ ಸಂತೆ ಮಾರುಕಟ್ಟೆಯಲ್ಲಿಯೇ ದಿನ ವಹಿ ಸಂತೆ ಅಭಿವೃದ್ದಿ ಹಾಗೂ ವಾರದ ಸಂತೆ ಮಾರುಕಟ್ಟೆ ಮತ್ತು ವಾಣಿಜ್ಯ ಮಳಿಗೆಗಳ ನವೀಕರಣಕ್ಕೆ 2.75 ಕೋಟಿ ರು. ಮಂಜೂರಾಗಿದೆ ಎಂದು ಶಾಸಕ ಗಾಲಿ ಕರುಣಾಕರರೆಡ್ಡಿ ತಿಳಿಸಿದ್ದಾರೆ.
ಅವರು ಪಟ್ಟಣದ ವಾರದ ಸಂತೆ ಮಾರುಕಟ್ಟೆಯಲ್ಲಿ ದಿನ ವಹಿ ಸಂತೆ ಮಾರುಕಟ್ಟೆ ಅಭಿವೃದ್ದಿ ಕುರಿತು ಸ್ಥಳ ಪರಿಶೀಲನೆ ಮಾಡಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ದಿನ ವಹಿ ಹಾಗೂ ವಾರದ ಸಂತೆ ನವೀಕರಣಕ್ಕೆ ವಿಸ್ತ್ರುತ ಯೋಜನಾ ವರದಿ ತಯಾರಿಸಲು ಚಿತ್ರದುರ್ಗದ ಹರ್ಷ ಅಸೋಶಿಯೇಷನ್ಸ್ ಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
79 ಲಕ್ಷ ರು. ಕೆರೆ ಅಭಿವೃದ್ದಿ ಶುಲ್ಕದಲ್ಲಿ ಹಿರೆಕೆರೆಯಲ್ಲಿ ಹೂಳು ತೆಗೆದು ಸಂಗ್ರಹವಾದ ನದಿ ನೀರನ್ನು ಶುದ್ದೀಕರಿಸಿ ನದಿ ಬತ್ತಿದ ಸಂದರ್ಭದಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೂ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಎಚ್ .ಕೆ. ಹಾಲೇಶ್ ಮಾತನಾಡಿ ಈಗಿರುವ ದಿನ ವಹಿ ಸಂತೆಯ ರಸ್ತೆ ತೀರಾ ಇಕ್ಕಟ್ಟಾಗಿದ್ದು, ಜನರಿಗೂ, ವಾಹನಗಳಿಗೆ ,ಸಂಚರಿಸಲು ತೊಂದರೆಯಾಗುತ್ತದೆ, ಆದ್ದರಿಂದ ಈಗಿರುವ ವಾರದ ಸಂತೆ ಆವರಣದಲ್ಲಿಯೇ ದಿನ ವಹಿ ಸಂತೆ ಮಾಡಲು ಜಾಗ ಅಭಿವೃದ್ದಿ ಪಡಿಸಿ ಕೊಡಲಾಗುವುದು ಎಂದು ಅವರು ಹೇಳಿದರು.ಪುರಸಭಾ ಮುಖ್ಯಾಧಿಕಾರಿ ನಾಗರಾಜನಾಯ್ಕ, ಉಪಾದ್ಯಕ್ಷ ಸತ್ಯನಾರಾಯಣ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಯು.ಪಿ.ನಾಗರಾಜ, ಸಣ್ಣ ಹಾಲಪ್ಪ, ಎಂ.ಪಿ.ನಾಯ್ಕ, ಕರೇಗೌಡ, ರಾಘವೇಂದ್ರಶೆಟ್ಟಿ, ಕೌನ್ಸಿಲರುಗಳಾದ ವಿಜಯಲಕ್ಷ್ಮಿ, ಡಿಷ್ ವೆಂಕಟೇಶ, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
