ಪಾವಗಡ;-
ಶುದ್ದ ಕುಡಿಯುವ ನೀರಿನ ಘಟಕದ ಮೂಲಕ ಪಾವಗಡದ ಜನತೆ ಅತಿ ಕಡಿಮೆ ಧರದಲ್ಲಿ ಶುದ್ದ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದು ಬೆಂಗಳೂರಿನ ವೈಟ್ ಫೀಲ್ಡ್ ನ ರೋಟರಿ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ಸೊಮವಾರ ಪಾವಗಡ ಪಟ್ಟಣದ ಶಿರಡಿಸಾಯಿಬಾಬಾ ದೇವಸ್ಥಾನದ ಬಳಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲು ಜಾಗವನ್ನು ಗುರ್ತಿಸಲು ಕರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ರೋಟರಿ ಸಂಸ್ಥೆ ಹಾಗೂ ಶಿರಡಿಸಾಯಿಬಾಬಾ ದೇವಸ್ಥಾನ ಸಮಿತಿ ಸಹಯೋಗದಿಂದ ಅತಿ ಕಡಿಮೆ ಧರದಲ್ಲಿ ಕ್ಯಾನ್ ಮೂಲಕ ನೀರನ್ನು ವಿತರಿಸಲಾಗುವುದು, ವೀತರಿಸಿದ ನೀರಿನಿಂದ ಬಂದ ಆಲ್ಪ ಲಾಭಾಂಶದಲ್ಲಿ ದೇವಸ್ಥಾನದ ಅಭಿವೃದ್ದಿಗೂ ಉಪಯೋಗಿಸಿಕೊಳ್ಳ ಬಹುದು ಎಂದು ತಿಳಿಸಿದರು.
ಪಾವಗಡ ರೋಟರಿ ಅಧ್ಯಕ್ಷ ಮಹಮದ್‍ಇಮ್ರಾನ್ ಮಾತನಾಡಿ, ಪಾವಗಡ ತಾಲ್ಲೂಕಿನ ನೀರಿನಲ್ಲಿ ಅತಿಯಾದ ಪ್ಲೋರೋಸಿಸ್ ವಿಷಕಾರಿ ಅಂಶ ಇರುವುದರಿಂದ ಸಾರ್ವಜನಿಕರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ, ಇದರಿಂದ ಪಾವಗಡ ರೋಟರಿಯ ಮನವಿಯ ಮೇರೆಗೆ ಬೆಂಗಳೂರಿನ ರೋಟರಿ ಸಂಸ್ಥೆ ಮತ್ತು ದಾನಿಗಳ ನೆರವಿನಿಂದ ಸುಮಾರು 40 ಲಕ್ಷ ವೆಚ್ಚದಲ್ಲಿ ಸಾಯಿಬಾಬಾ ದೇವಸ್ಥಾನದ ಬಳಿ ಶುದ್ದ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಶುದ್ದ ಕುಡಿಯುವ ನೀರಿನ ಘಟಕದ ವ್ಯವಸ್ಥಾಪಕರಾದ ಬೆಂಗಳೂರಿನ ಶ್ರೀಧರ್, ಶಿರಡಿಸಾಯಿಬಾಬಾ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಗೊರ್ತಿನಾಗರಾಜ್, ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂಶಶಿಕಿರಣ್, ರೋಟರಿ ಮಾಜಿ ಅಧ್ಯಕ್ಷರಾದ ಎಂ.ಎಸ್. ವಿಶ್ವನಾಥ್, ಕೆ, ಎಂ. ಪ್ರಭಾಕರ್, ದೇವಸ್ಥಾನ ಸಮಿತಿಯ ಸಿ.ಟಿ. ಅಶ್ವಥ್‍ನಾರಾಯಣ, ಕಾವಲಗೇರಿರಾಮಾಂಜಿ, ಕನ್ನಮೇಡಿಲೋಕೇಶ್,
ಸ್ವೀಟ್‍ಚಂದ್ರಪ್ಪ, ನಂದೀಶ್ ಬಾಬು, ಶ್ರವಣ್‍ರೆಡ್ಡಿ, ಹಾಜರಿದ್ದರು.